'ಬಿಗ್ ಬಾಸ್ ಕನ್ನಡ 4': ಮೊದಲ ದಿನದ ಹೈಲೈಟ್ಸ್

'ಬಿಗ್ ಬಾಸ್ ಕನ್ನಡ 4' ಮೊದಲ ದಿನದ ಎಲ್ಲಾ ಪ್ರಮುಖ ಅಂಶಗಳು. ಬೆಳಿಗ್ಗೆ ಎದ್ದಾಗಿನಿಂದ ತಿಂಡಿ-ಊಟದ ನಡುವೆ ಕೆಲವು ರಂಪಾಟ, ಮಾತಿನ ಚಕಮಕಿ ಇತ್ಯಾದಿ ನಡೆದು ಸಂಜೆ 5 ಗಂಟೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು.

By Suneetha

ಎಲ್ಲಾ ಹದಿನೈದು ಸ್ಪರ್ಧಿಗಳು ಬೆಳಗ್ಗೆ 9 ಗಂಟೆ ಸುಮಾರಿಗೆ ಸುಪ್ರಭಾತ ಕೇಳಿ, ಹಾಸಿಗೆಯಿಂದ ಎದ್ದು ಕೂರುತ್ತಾರೆ. ಎದ್ದ ಕೂಡಲೇ ಸ್ಪರ್ಧಿಗಳಿಗೆ ಟಾಸ್ಕ್ ಆರಂಭವಾಗುತ್ತದೆ.

ಮೊದಲ ದಿನವೇ ಬಿಗ್ ಬಾಸ್ ಮನೆಯವರಿಗೆ ಟಾಸ್ಕ್ ಕೊಡುತ್ತಾರೆ. ಮನೆಯ ಹೊರಗೆ ಕಟ್ಟಿರುವ ಗೌರಿ ಎಂಬ ಹಸುವಿನ ಹಾಲು ಕರೆಯಬೇಕು. ಮನೆಯವರು ಎಷ್ಟು ಹಾಲು ಕರಿತಾರೋ, ಅದರ ದುಪ್ಪಟ್ಟು ಹಾಲನ್ನು ಮನೆಯವರ ಉಪಯೋಗಕ್ಕೆ ಕೊಡುವುದಾಗಿ ಬಿಗ್ ಬಾಸ್ ಮಾತು ಕೊಡುತ್ತಾರೆ.[ಈ ಬಾರಿಯ 'ಬಿಗ್ ಬಾಸ್ 4' ಅರಮನೆಯಲ್ಲಿ ಏನುಂಟು, ಏನಿಲ್ಲ?]

ಅದರಂತೆ ಕಾರುಣ್ಯ ರಾಮ್, ಕಿರಿಕ್ ಕೀರ್ತಿ ಮತ್ತು ಕಾವ್ಯ ಶಾಸ್ತ್ರಿ ಗೌರಿ ಹಸುವಿನ ಹಾಲು ಕರೆದ್ರು. ಸುಮಾರು 7 ಕಾಲು ಲೀಟರ್ ಹಾಲು ಕರೆಯುತ್ತಾರೆ. ಅದಕ್ಕೆ ತಕ್ಕಂತೆ ಬಿಗ್ ಬಾಸ್ ಅದರ ದುಪ್ಪಟ್ಟು ಹಾಲು ನೀಡುತ್ತಾರೆ. 'ಅರಮನೆ' ದರ್ಬಾರ್ ನೋಡಲು ಮುಂದೆ ಓದಿ...

ದನಕ್ಕೆ ಹುಲ್ಲು ಬೇಕು

ದನಕ್ಕೆ ಹುಲ್ಲು ಬೇಕು

ಬಿಗ್ ಬಾಸ್ ಹೇಳಿದಂತೆ ಮನೆಯವರೆಲ್ಲಾ ಗೌರಿ ಹಸುವಿನ ಹಾಲು ಕರೆದು ಟಾಸ್ಕ್ ಪೂರ್ತಿ ಮಾಡಿದ್ರೆ, ಇತ್ತ ನಿರ್ದೇಶಕ ಪ್ರಥಮ್ ಕ್ಯಾಮೆರಾ ಮುಂದೆ ಬಂದು, ದನಕ್ಕೆ ಹುಲ್ಲು ಬೇಕು ಅಂತ ಕಂಪ್ಲೈಟ್ ಮಾಡುತ್ತಾರೆ. ನಮ್ಮಂತೆ ಅದು ಕೂಡ ಪ್ರಾಣಿ ಹುಲ್ಲು ಹಾಕದೇ ಹಾಲು ಕರೆಯೋದು ತಪ್ಪು, ಈಗಲೇ ಹುಲ್ಲು ಕಳುಹಿಸಿ ಕೊಡಿ ಅಂತ ಪ್ರಥಮ್ ಬಿಗ್ ಬಾಸ್ ಬಳಿ ಕೇಳಿಕೊಳ್ಳುತ್ತಾರೆ.['ಬಿಗ್ ಬಾಸ್ ಕನ್ನಡ-4' ಶೋನ ಎಲ್ಲಾ ಸ್ಪರ್ಧಿಗಳ ಪರಿಚಯ]

ತಿಂಡಿಗಾಗಿ ಪ್ರಥಮ್ ಜಗಳ

ತಿಂಡಿಗಾಗಿ ಪ್ರಥಮ್ ಜಗಳ

ಇನ್ನು ಬೆಳಗ್ಗಿನ ತಿಂಡಿ ಸಮಯದಲ್ಲಿ ನಿರ್ದೇಶಕ ಪ್ರಥಮ್ ಮತ್ತು ಮಾಳವಿಕಾ ಅವಿನಾಶ್ ನಡುವೆ ಕೋಳಿ ಜಗಳ ಆರಂಭ ಆಗುತ್ತೆ. ತಿಂಡಿಗೆ ಬೇಕಾಗಿರೋ ಸಾಮಾನು ಸ್ವಲ್ಪಾನೇ ಬಂದಿದೆ. ಆದ್ರಿಂದ ಎಲ್ಲರೂ ಮ್ಯಾನೇಜ್ ಮಾಡಿ, ಸಹಾಯ ಮಾಡಿ ಬಿಟ್ರೆ ಸಲಹೆ ಕೊಡೋಕೆ ಬರ್ಬೆಡಿ ಅಂತಾರೇ ಮಾಳವಿಕಾ. ಆವಾಗ ಪ್ರಥಮ್ ಮ್ಯಾನೇಜ್ ನೀವು ಮಾಡ್ಬೇಕು, ನಾನೇನು ಸಹಾಯ ಮಾಡಕ್ಕಾಗುತ್ತೆ ಅಂತಾರೆ ಪ್ರಥಮ್.

ದೂರು ಕೊಟ್ಟ ಪ್ರಥಮ್

ದೂರು ಕೊಟ್ಟ ಪ್ರಥಮ್

ಹೊರಗಡೆ ಹೋಗಿ ಕ್ಯಾಮೆರಾ ಮುಂದೆ ಮತ್ತೆ ಬಿಗ್ ಬಾಸ್ ಗೆ ದೂರು ನೀಡುತ್ತಾರೆ. "ಊಟ ಐತೆ, ಇಲ್ಲಾಂದ್ರೆ ಇಲ್ಲ, ಇಷ್ಟನ್ನೇ ಹೇಳಬೇಕು, ಇದು ಸರಿ ಇದ್ಯ ಅಂದ್ರೆ, ತಿನ್ನೋದಾದ್ರೆ ತಿನ್ನಿ, ಇಲ್ಲಾಂದ್ರೆ ಹೋಗಿ ಅಂದ್ರೆ. ಹೊರಗೆ ಹೊರಟು ಹೋಗೋಕೆ ಡೋರ್ ಓಪನ್ ಆಗುತ್ತಾ, ಹೋಗಕ್ಕೆ ಎಲ್ಲಾ ಆಗಲ್ಲ. ನೀವೇ ಯೋಚನೆ ಮಾಡಿ. ಸಣ್ಣ-ಸಣ್ಣ ವಿಚಾರಕ್ಕೂ ಕೂಗಾಡ್ತಾರೆ, ಇದರಿಂದ ಬಿಪಿ ರೈಸ್ ಆದ್ರೆ ಅವರಿಗೆ ಕಷ್ಟ. ಬಿಪಿ ಹೆಚ್ಚಾದ್ರೆ ಏನೆಲ್ಲಾ ಆಗುತ್ತೆ ಅಂತ ಈಗಾಗಲೇ ಎಲ್ಲಾ ಜೀವಶಾಸ್ತ್ರ ಪಾಠ ಪುಸ್ತಕಗಳಲ್ಲಿ ಬಂದಿದೆ ಬಿಗ್ ಬಾಸ್. ಆದ್ದರಿಂದ ಅವರು ಕೂಲ್ ಆಗಿದ್ರೆ ಅವರ ಆರೋಗ್ಯಕ್ಕೆ ಒಳ್ಳೆಯದು'- ಪ್ರಥಮ್.

ಕ್ಯಾಪ್ಟನ್ ಯಾರು?

ಕ್ಯಾಪ್ಟನ್ ಯಾರು?

ಬಿಗ್ ಬಾಸ್ ರೂಬಿ ಕ್ಯೂಬ್ ಕೊಟ್ಟು ಅದರ ಎಲ್ಲಾ ಬಣ್ಣಗಳು ಒಂದೇ ರೀತಿ, ಒಂದೇ ಭಾಗಕ್ಕೆ ಬರಿಸುವ ಟಾಸ್ಕ್ ಸ್ಪರ್ಧಿಗಳಿಗೆ ಕೊಟ್ಟಿದ್ದರು. ಆದರೆ ಅದನ್ನು ಸಂಫೂರ್ಣವಾಗಿ ಯಾರು ಕೂಡ ಪೂರ್ತಿ ಮಾಡಲಿಲ್ಲ. ಕಿರಿಕ್ ಕೀರ್ತಿ ಅವರು ಸ್ವಲ್ಪ ಪ್ರಯತ್ನ ಪಟ್ಟಿದ್ದರು. ಆದ್ದರಿಂದ ಮನೆಯ ಮೊದಲ ಕ್ಯಾಪ್ಟನ್ ಆಗಿ ಕಿರಿಕ್ ಕೀರ್ತಿ ಅವರು ಆಯ್ಕೆಯಾದರು. ಮನೆಯ ಎಲ್ಲಾ ಸದಸ್ಯರು ಕನ್ನಡದಲ್ಲಿ ಮಾತಾಡುವಂತೆ ಹಾಗೂ ಅಡುಗೆ, ಶುಚಿತ್ವ ಮತ್ತು ಇನ್ನಿತರೇ ಕೆಲಸಗಳಿಗೆ ಮನೆಯವರನ್ನು ವಿಭಜಿಸುವ ಅಧಿಕಾರ ಕೀರ್ತಿಗೆ ಅವರಿಗೆ ಬಿಗ್ ಬಾಸ್ ಕೊಟ್ಟರು.

ಪ್ರಥಮ್-ನಿರಂಜನ್ ಮಾತಿನ ಚಕಮಕಿ

ಪ್ರಥಮ್-ನಿರಂಜನ್ ಮಾತಿನ ಚಕಮಕಿ

ಮನರಂಜನಾ ವಿಭಾಗದಲ್ಲಿರೋ ಪ್ರಥಮ್ ಮತ್ತು ನಿರಂಜನ್ ಅವರಿಗೆ ಸಣ್ಣ ವಿಚಾರದಲ್ಲಿ ಮಾತಿನ ಚಕಮಕಿ ನಡೆಯುತ್ತೆ. ಅದನ್ನು ತಡೆಯಲು ಬಂದ ಕ್ಯಾಪ್ಟನ್ ಕಿರಿಕ್ ಕೀರ್ತಿ ಅವರಿಗೂ ಪ್ರಥಮ್ ಗೂ ಮಾತಿನ ವಾರ್ ಆಗುತ್ತೆ.

ನಾಮಿನೇಷನ್ ಅಧಿಕಾರ ಕ್ಯಾಪ್ಟನ್ ಗೆ

ನಾಮಿನೇಷನ್ ಅಧಿಕಾರ ಕ್ಯಾಪ್ಟನ್ ಗೆ

ಈ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಕೀರ್ತಿ ಕುಮಾರ್ ಅವರಿಗೆ ವಹಿಸಿಕೊಡುತ್ತಾರೆ.

ನಿರಂಜನ್/ಸಂಜನಾ ನಡುವೆ ಏನೋ ಐತೆ

ನಿರಂಜನ್/ಸಂಜನಾ ನಡುವೆ ಏನೋ ಐತೆ

ರಾತ್ರಿ ಹೊತ್ತಿನಲ್ಲಿ ಭುವನ್ ಪೊನ್ನಣ್ಣ ಮತ್ತು ಸಂಜನಾ ಅವರು ಮಾತಾಡ್ತಾ ಇರ್ತಾರೆ. ಆವಾಗ ಸಂಜನಾ 'ನಿರಂಜನ್ ಎಲ್ಲಿ ನನ್ನ ವಿಷಯ ತೆಗೆದು ಬಿಡ್ತಾನೋ ಅಂತ ಭಯ ಆಯ್ತಪ್ಪಾ. ಭುವನ್: ನಿಮ್ ವಿಷ್ಯಾನಾ?, ಯಾಕೆ ಮೊದಲೇ ಪರಿಚಯನಾ?. ಸಂಜನಾ: ಹಾ ಹೌದು. ಭುವನ್: ಹೋ ಆ ವಿಷಯಗಳು. ಇವರಿಬ್ಬರ ಈ ಸಂಭಾಷಣೆ ನೋಡ್ತಾ ಇದ್ರೆ ಏನೋ ಐತೆ ಅನ್ನೋದು ಪಕ್ಕಾ.

More from Filmibeat

English summary
'Bigg Boss Kannada 4': day 1, Pratham's fight with Niranjan Deshpande. Here is the Higlights of First day Of 'Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X