ಡೆಡ್ಲಿ ಡಿಕ್ಟೇಟರ್: ಎಲ್ಲೆಲ್ಲೂ 'ಪ್ರಥಮ್' ಟಾಪ್ ಟ್ರೆಂಡಿಂಗ್

By Bharath Kumar

ಒಳ್ಳೆ ಹುಡುಗ ಪ್ರಥಮ್ 'ದಿ ಮೋಸ್ಟ್ ಎಂಟರ್ ಟೈನರ್ ಆಫ್ ದಿ ಬಿಗ್ ಬಾಸ್ ಕನ್ನಡ 4', ಎಂಬುದು ವೀಕ್ಷಕರ ಅಭಿಪ್ರಾಯ. 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಏನೇ ಮಾಡಿದರೂ ಸರಿ ಎನ್ನುವಂತಹ ಅಭಿಮಾನಿ ಬಳಗ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದೆ.

ಪ್ರಥಮ್ ಹೇಳೋದೆ ನಿಜ. ಪ್ರಥಮ್ ಒಬ್ಬನೇ ನಿಜವಾದ ಆಟಗಾರ, ಉಳಿದವರೆಲ್ಲಾ ಡವ್ ಮಾಡ್ತಾರೆ ಎನ್ನುವುದು ಪ್ರಥಮ್ ಅಭಿಮಾನಿಗಳ ದೃಢ ನಿರ್ಧಾರ.

ಇನ್ನೂ 'ಬಿಗ್ ಬಾಸ್' ಮನೆಯ ಸದಸ್ಯರಂತೂ ಪ್ರಥಮ್ ಅವರ ರಂಪಾಟ, ಹುಚ್ಚಾಟ, ಆರ್ಭಟವನ್ನೆಲ್ಲಾ ನೋಡಿ, ಪ್ರಥಮ್ ಮನೆಬಿಟ್ಟು ಹೋದ್ರೆ ಸಾಕಪ್ಪಾ ಅಂತ ಕಾಯುತ್ತಿದ್ದಾರೆ.

ಹೀಗಿರುವಾಗ, 'ಬಿಗ್ ಬಾಸ್' ಈ ವಾರ ತುರ್ತುಪರಿಸ್ಥಿತಿ ಘೋಷಣೆ ಮಾಡಿ, ಮನೆಗೆ ಪ್ರಥಮ್ ಅವರನ್ನ ಸರ್ವಾಧಿಕಾರಿಯನ್ನಾಗಿಸಿದ್ದಾರೆ. ಏನೂ ಪವರ್ ಇಲ್ಲದೆ ಅಷ್ಟೆಲ್ಲಾ ಅಬ್ಬರ ಮಾಡಿದ್ದ ಪ್ರಥಮ್, ಸರ್ವಾಧಿಕಾರ ಸಿಕ್ಕಿದಾಗ ಏನೆಲ್ಲಾ ಮಾಡಬಹುದು ಎಂಬ ಲೆಕ್ಕಾಚಾರವನ್ನ ವೀಕ್ಷಕರು ಹಾಕುತ್ತಿದ್ದಾರೆ.[ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

ಹೌದು, ಪ್ರಥಮ್ ಸರ್ವಾಧಿಕಾರದ ಬಗ್ಗೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಪ್ರಥಮ್ ಬಗ್ಗೆ ಕೆಲವರು Memeಗಳನ್ನ ಸೃಷ್ಟಿಸಿದ್ದಾರೆ. ಆ Meme ಗಳ ಕಲೆಕ್ಷನ್ ಇಲ್ಲಿದೆ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ..!

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ..!

ಈ ವಾರದಿಂದ 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಸರ್ವಾಧಿಕಾರಿಯಾಗಿದ್ದರೇ, ಮಾಳವಿಕಾ ಪ್ರಥಮ್ ಅವರ ನ್ಯಾಯಪಾಲಕಿಯಾಗಿದ್ದಾರೆ. ಒಂದು ಟೈಮ್ ನಲ್ಲಿ ಮಹಾರಾಣಿಯಾಗಿದ್ದ ಮಾಳವಿಕಾ, ಈಗ ಪ್ರಥಮ್ ಅವರ ಆಜ್ಞೆ ಪಾಲಿಸಬೇಕಾಗಿದೆ. ಇದಕ್ಕೆ ವೀಕ್ಷಕರು ಕೊಟ್ಟಿರುವ ಪ್ರತಿಕ್ರಿಯೆ ಇದು.['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

ಜಗತ್ತಿನ 'ಡೆಡ್ಲಿ ಸರ್ವಾಧಿಕಾರಿ'ಗಳ ಸಾಲಿನಲ್ಲಿ ಪ್ರಥಮ್!

ಜಗತ್ತಿನ 'ಡೆಡ್ಲಿ ಸರ್ವಾಧಿಕಾರಿ'ಗಳ ಸಾಲಿನಲ್ಲಿ ಪ್ರಥಮ್!

ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಸರ್ವಾಧಿಕಾರವನ್ನ ನೋಡಿದ ವೀಕ್ಷಕರು, ಪ್ರಥಮ್ ಅವರನ್ನ ಜಗತ್ತಿನ ಡೆಡ್ಲಿ ಸರ್ವಾಧಿಕಾರಿಗಳ ಸಾಲಿಗೆ ಸೇರಿಸಿದ್ದಾರೆ. ಹಿಟ್ಲರ್, ಸದ್ದಾಂ ಹುಸೇನ್ ಅಂತವರ ಫೋಟೋ ಜೊತೆ ಪ್ರಥಮ್ ಫೋಟೋವನ್ನ ಸೇರಿಸಿದ್ದಾರೆ.

ರಿಯಲ್ ಗೇಮ್ ಸ್ಟಾರ್ಟ್!

ರಿಯಲ್ ಗೇಮ್ ಸ್ಟಾರ್ಟ್!

'ಬಿಗ್ ಬಾಸ್' ಮನೆಯಲ್ಲಿ ರಿಯಲ್ ಗೇಮ್ ಈಗಿನಿಂದ ಶುರುವಾಗುತ್ತಂತೆ. ಪ್ರಥಮ್ ಸರ್ವಾಧಿಕಾರದಿಂದ ಚಾನಲ್ ಟಿಆರ್ ಪಿ ಕೂಡ ಹೆಚ್ಚಾಗುತ್ತಂತೆ.

ಸ್ಟೂಡೆಂಟ್ ಟೀಚರ್ ಆದಾಗ, ಟೀಚರ್ ಸ್ಟೂಡೆಂಟ್ ಆದಾಗ!

ಸ್ಟೂಡೆಂಟ್ ಟೀಚರ್ ಆದಾಗ, ಟೀಚರ್ ಸ್ಟೂಡೆಂಟ್ ಆದಾಗ!

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಅವರಿಗೆ, ಬುದ್ದಿವಾದ ಹೇಳುತ್ತಿದ್ದ ಮಂದಿ ಇನ್ಮುಂದೆ ಪ್ರಥಮ್ ಹೇಳುವಾಗೆ ಕೇಳಬೇಕಿದೆ.

ಪ್ರಥಮ್ ಅಧಿಕಾರ ನೋಡಲು ಕಾತುರ

ಪ್ರಥಮ್ ಅಧಿಕಾರ ನೋಡಲು ಕಾತುರ

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಅವರ ಡಿಕ್ಟೇಟರ್ ಷಿಪ್ ನೋಡುವುದಕ್ಕೆ ವೀಕ್ಷಕರು ಕಾಯುತ್ತಿದ್ದಾರಂತೆ.

ಕಾಲ ಬದಲಾಗಿದೆ!

ಕಾಲ ಬದಲಾಗಿದೆ!

'ಬಿಗ್ ಬಾಸ್' ಮನೆಯಲ್ಲಿ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.

ಓಂ ಪ್ರಕಾಶ್ ರಾವ್ ಭವಿಷ್ಯ ಏನಾಯ್ತು?

ಓಂ ಪ್ರಕಾಶ್ ರಾವ್ ಭವಿಷ್ಯ ಏನಾಯ್ತು?

ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂಬುದಕ್ಕೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು, ಭವಿಷ್ಯ ನುಡಿದಿದ್ದರು. ಆದ್ರೆ, ಪ್ರಥಮ್ ಅವರಿಗೆ ಸರ್ವಾಧಿಕಾರಿ ಸಿಕ್ಕಿರುವುದನ್ನ ನೋಡಿದ್ರೆ, ಓಂ ಪ್ರಕಾಶ್ ರಾವ್ ಅವರ ಭವಿಷ್ಯ ಸುಳ್ಳಾಗುತ್ತದೆ ಎಂಬ ಅಭಿಪ್ರಾಯ ವೀಕ್ಷಕರದ್ದು.

More from Filmibeat

English summary
Kannada Director Pratham is the topic of discussion now in the social media. Pratham is being trolled on Facebook and Twitter. Check out the troll images and Memes here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X