»   » ಬಿಗ್ ಬಾಸ್ 4: ಅಬ್ಬಬ್ಬಾ..ಹೆಣ್ಣು ಹೈಕಳ ಹಿಂದೆ ಇಷ್ಟೊಂದು ಸೀಕ್ರೆಟ್ಸಾ?

ಬಿಗ್ ಬಾಸ್ 4: ಅಬ್ಬಬ್ಬಾ..ಹೆಣ್ಣು ಹೈಕಳ ಹಿಂದೆ ಇಷ್ಟೊಂದು ಸೀಕ್ರೆಟ್ಸಾ?

Posted By:
Subscribe to Filmibeat Kannada

ಪ್ರಥಮ್ ಅವರಿಂದ ಬಿಗ್ ಬಾಸ್ ಮನೆಯಲ್ಲಿ ಒಂದು ದೊಡ್ಡ ಡ್ರಾಮಾನೇ ನಡೆಯುತ್ತಿದೆ. ಉಳಿದ 14 ಸದಸ್ಯರಿಗೆ ಇದರಿಂದ ಮಾನಸಿಕ ಹಿಂಸೆ ಆಗುತ್ತಿದ್ದರೂ ಕೂಡ, ಯಾರು ತುಟಿ-ಪಿಟಕ್ ಅನ್ನದೇ, ಅವರ ಹುಚ್ಚಾಟಗಳನ್ನು ಮೌನವಾಗಿ ಸಹಿಸುತ್ತಿದ್ದಾರೆ.

ಇದರ ನಡುವೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು. 'ಮನರಂಜನೆಯ ತಿರುಗೋ ಬಾಣ' ಅನ್ನೋ ಟಾಸ್ಕ್ ನಲ್ಲಿ ಹೆಣ್ಣುಮಕ್ಕಳ ಬಾಲ್ಯದ ಅಥವಾ ಕಳೆದು ಹೋದ ದಿನಗಳ ಕೆಲವು ಸೀಕ್ರೆಟ್ ಗಳನ್ನು ಬಿಗ್ ಬಾಸ್ ಹೇಳುತ್ತಾರೆ. ಅದು ಯಾವ ಹುಡುಗಿಯ ಸೀಕ್ರೆಟ್ ಅಂತ ಗಂಡು ಹುಡುಗರು ಗೆಸ್ ಮಾಡಿ ಹೇಳಬೇಕಿತ್ತು.[ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ]

ಯಾವ ಹೆಣ್ಣಿನ ಹಿಂದೆ, ಯಾವ ಸೀಕ್ರೆಟ್ ಇದೆ ಅನ್ನೋ ಕುತೂಹಲ ನಿಮಗೂ ಇದ್ದರೆ. ಮುಂದೆ ಓದಿ....

ಸೀಕ್ರೆಟ್ ನಂ 1. ಮಿಸ್ ಬೆಂಗಳೂರು ಯಾರು?

ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಮಿಸ್ ಬೆಂಗಳೂರು ಇದ್ದಾರೆ ಅವರು ಯಾರು ಪತ್ತೆ ಹಚ್ಚಿ ಅಂತ ಬಿಗ್ ಬಾಸ್ ಗಂಡು ಹೈಕಳಿಗೆ ಹೇಳುತ್ತಾರೆ. ಆವಾಗ ಮೊದಲು ಪ್ರಥಮ್ ಹೋಗಿ, ರೇಖಾ ಅವರ ಹತ್ತಿರ ತಿರುಗೋ ಬಾಣ ಇಟ್ಟು ಇವರೇ ಎಂದು ಹೇಳುತ್ತಾರೆ. ಪ್ರಥಮ್ ಗೆಸ್ ಸರಿಯಾಗಿದ್ದು, 1998ರಲ್ಲಿ ರೇಖಾ ಅವರು ಮಿಸ್ ಬೆಂಗಳೂರು ಆಗಿದ್ದರು.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಸೀಕ್ರೆಟ್ ನಂ 2. ಹಾಸಿಗೆ ಅಡಿಯಲ್ಲಿ ಡಾಂಬರ್ ಉಂಡೆ

ಬಾಲ್ಯದಲ್ಲಿ ಹಾಸಿಗೆಯ ಅಡಿಯಲ್ಲಿ ಡಾಂಬರಿನ ಉಂಡೆ ಮಾಡಿ ಇಟ್ಟವರು ಯಾರು? ಗಂಡು ಹೈಕಳಿಗೆ ಬಿಗ್ ಬಾಸ್ ಪ್ರಶ್ನೆ. ನಾಯಕ ಕೀರ್ತಿ ಶಾಲಿನಿ ಪಕ್ಕ ತಿರುಗೋ ಬಾಣ ಇಡ್ತಾರೆ. ಆದ್ರೆ ಗೆಸ್ ರಾಂಗ್ ಆಗಿರುತ್ತೆ. ಶಾಲಿನಿ ಬದ್ಲಾಗಿ ಕಾವ್ಯ ಶಾಸ್ತ್ರಿ ಅವರು ಈ ಕೆಲಸ ಮಾಡಿರುತ್ತಾರೆ. ಚಿಕ್ಕ ಮಕ್ಕಳಿರುವಾಗ ಟಾರಿನ ಉಂಡೆ ಮಾಡಿ ಹಾಸಿಗೆ ಅಡಿ ಇಟ್ಟಿರುತ್ತಾರೆ.[ಇಂಗ್ಲೆಂಡ್ ನಲ್ಲಿ 'ಕೂಲಿ' ಮಾಡಿದ ಸತ್ಯ ಬಾಯ್ಬಿಟ್ಟ ದೊಡ್ಡ ಗಣೇಶ್]

ಸೀಕ್ರೆಟ್ ನಂ 3. ರಿಪೆಂಜಲ್ ಪಾತ್ರದ ಬಗ್ಗೆ ಹುಚ್ಚು ಪ್ರೀತಿ ಇಟ್ಟುಕೊಂಡವರು

ರಿಪೆಂಜಲ್ ಎಂಬ ಪಾತ್ರದ ಬಗ್ಗೆ ಹುಚ್ಚು ಪ್ರೀತಿ ಇಟ್ಟುಕೊಂಡವರು ಯಾರು ಅನ್ನೋ ಪ್ರಶ್ನೆಗೆ, ನಿರಂಜನ್ ಮಾಳವಿಕಾ ಕಡೆ ಬಾಣ ಬಿಡುತ್ತಾರೆ. ಅವರ ಗೆಸ್ ಸರಿಯಾಗಿ ಇತ್ತು. ಅದು ಅವರೇ ಆಗಿರುತ್ತಾರೆ. ಆದರೆ ಈ ನಡುವೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಿಚಾರದಲ್ಲಿ ಪ್ರಥಮ್ ಮತ್ತು ಮಾಳವಿಕಾ ಅವರಿಗೆ ಸ್ವಲ್ಪ ಮಾತಿನ ಚಕಮಕಿ ನಡೆದು, ಮಾಳವಿಕಾ ಬೇಸರ ಮಾಡಿಕೊಳ್ಳುತ್ತಾರೆ. ಬರೀ ಭಾಷೆ ಬಗ್ಗೆ ಅಭಿಮಾನ ಇದ್ರೆ ಸಾಲದು, ಸಂಸ್ಕೃತಿ ಸಂಸ್ಕಾರ ಕೂಡ ಅಷ್ಟೇ ಮುಖ್ಯ ಅಂತ ಮಾಳವಿಕಾ ಅವರು ಪ್ರಥಮ್ ಅವರಿಗೆ ತಿಳಿಸುತ್ತಾರೆ.

ಸೀಕ್ರೆಟ್ ನಂ 4. 'ಚೌಟ್ರಿ ಕ್ಲೀನರ್' ಅಂತ ಆಪ್ತರಲ್ಲಿ ಕರೆಸಿಕೊಳ್ಳುವವರು ಯಾರು?

'ಚೌಟ್ರಿ ಕ್ಲೀನರ್' ಅಂತ ಆಪ್ತರಲ್ಲಿ ಕರೆಸಿಕೊಳ್ಳುವವರು ಯಾರು? ಅನ್ನೋ ಪ್ರಶ್ನೆ ಬಿಗ್ ಬಾಸ್ ಕಡೆಯಿಂದ. ಈ ಬಾರಿ ಭುವನ್ ಹೋಗಿ ಶಾಲಿನಿ ಕಡೆ ಬಾಣ ತಿರುಗಿಸುತ್ತಾರೆ. ಭುವನ್ ಅವರು ಅಂದುಕೊಂಡಂತೆ ಶಾಲಿನಿ ಅವರನ್ನೇ ಆಪ್ತರು 'ಚೌಟ್ರಿ ಕ್ಲೀನರ್' ಅಂತ ಕರೆಯುತ್ತಿರುತ್ತಾರೆ.

ಸೀಕ್ರೆಟ್ ನಂ 5. ಶಾಲಾ ದಿನಗಳಲ್ಲಿ ಮೆಹೆಂದಿ ಹಾಕಿ ಹಣ ಸಂಪಾದಿಸಿದವರು ಯಾರು?

ಈ ಬಾರಿ ಮೋಹನ್ ಅವರು ಹೋಗಿ ವಾಣಿಶ್ರೀ ಅವರಿರಬಹುದು ಅಂತ ಗೆಸ್ ಮಾಡುತ್ತಾರೆ. ಆದ್ರೆ ಮತ್ತೆ ಶಾಲಿನಿ ಅವರು ಆಗಿರುತ್ತಾರೆ, ಶಾಲಾ ದಿನಗಳಲ್ಲಿ ಶಾಲಿನಿ ಅವರು ಮೆಹೆಂದಿ ಹಾಕಿ ಹಣ ಸಂಪಾದನೆ ಮಾಡಿರುತ್ತಾರೆ.

ಸೀಕ್ರೆಟ್ ನಂ 6. ಒಳ್ಳೆಯ ಶಾಟ್ ಪುಟ್ ಪಟು ಯಾರು?

ಈ ಪ್ರಶ್ನೆಗೆ ದೊಡ್ಡ ಗಣೇಶ್ ಅವರು ರೇಖಾ ಅವರನ್ನು ಸೂಚಿಸುತ್ತಾರೆ. ಆದರೆ ಅವರ ಊಹೆ ತಪ್ಪಾಗಿ, ರೇಖಾ ಬದಲಿಗೆ ಕಿರುತೆರೆ ನಟಿ ವಾಣಿಶ್ರೀ ಅವರಾಗಿರುತ್ತಾರೆ. ಇವರು ಅತ್ಯುತ್ತಮ ಶಾಟ್ ಪುಟ್ ಮತ್ತು ಡಿಸ್ಕಸ್ ಪ್ಲೇಯರ್ ಆಗಿರುತ್ತಾರೆ.

ಸೀಕ್ರೆಟ್ ನಂ 7. ತನ್ನ ಹೆಸರನ್ನು ಎರಡು ಸಲ ಬದಲಿಸಿಕೊಂಡಿರುವವರು ಯಾರು?

ನಿರಂಜನ್ ಅವರು ಊಹೆ ಮಾಡಿದಂತೆ, ಕಾರುಣ್ಯ ರಾಮ್ ಅವರು ತಮ್ಮ ಹೆಸರನ್ನು ಎರಡು ಬಾರಿ ಬದಲಾಯಿಸಿಕೊಂಡಿದ್ದಾರೆ. ಈ ಮೊದಲು ಅವರ ಹೆಸರು ಪ್ರಿಯಾಂಕ ಎಂದಿತ್ತು.

ಸೀಕ್ರೆಟ್ ನಂ 8. ಅವಳಿ ಸಹೋದರರನ್ನು ಹೊಂದಿರುವವರು ಯಾರು?

ಪ್ರಥಮ್ ಅವರು ಊಹೆ ಮಾಡಿದಂತೆ ಗಾಯಕಿ ಚೈತ್ರಾ ಅವರು ಅವಳಿ ಸಹೋದರನನ್ನು ಹೊಂದಿದ್ದಾರೆ. ಅವರ ಸಹೋದರನ ಹೆಸರು ಚೈತನ್ಯ.

ಸೀಕ್ರೆಟ್ ನಂ 9. 'ಚೋಟಾ ಭೀಮ್' ಗೊಂಬೆಯನ್ನು ಮಲಗುವಾಗ ಇಟ್ಟುಕೊಂಡು ಮಲಗುವವರು?

ಬಿಗ್ ಬಾಸ್ ಈ ಪ್ರಶ್ನೆಗೆ ನಿರಂಜನ್ ದೇಶಪಾಂಡೆ ಅವರು ಕಾವ್ಯ ಬಳಿ ಬಾಣ ಇಡುತ್ತಾರೆ. ನಿರಂಜನ್ ಗೆಸ್ ಮಾಡಿದಂತೆ ಕಾವ್ಯ ಶಾಸ್ತ್ರಿ ಆಗಿರದೇ ಸಂಜನಾ ಚಿದಾನಂದ್ ಆಗಿರುತ್ತಾರೆ.

ಸೀಕ್ರೆಟ್ ನಂ 10. ಶಾಲಾ-ಕಾಲೇಜು ದಿನಗಳಲ್ಲಿ ಕಾಂಪೌಂಡ್ ಆಚೆ ಇದ್ದವರು ಯಾರು?

ಕಿರಿಕ್ ಕೀರ್ತಿ ಅವರು ಸಂಜನಾ ಅವರಿರಬಹುದು ಅಂತ ಗೆಸ್ ಮಾಡುತ್ತಾರೆ. ಆದರೆ ಅವರಾಗಿರದೇ ಸ್ಪರ್ಶ ರೇಖಾ ಅವರು ಆಗಿರುತ್ತಾರೆ. ಅವರು ಸ್ಕೂಲ್ ನಲ್ಲಿ ಆಟ ಆಡುವ ಸಲುವಾಗಿ ಪದೇ-ಪದೇ ಕಾಂಪೌಂಡ್ ಹಾರುತ್ತಿದ್ದರಂತೆ.

ಸೀಕ್ರೆಟ್ ನಂ 11. ಶಾಲಾ ದಿನಗಳಲ್ಲಿ ಒಂದು ದಿನ ಪ್ಯಾಂಟ್ ಅನ್ನು ಹಿಂದು-ಮುಂದು ಧರಿಸಿದವರು?

ಪ್ರಶ್ನೆಗೆ ಭುವನ್ ಅವರು ಮಾಳವಿಕಾ ಅಂತ ಗೆಸ್ ಮಾಡುತ್ತಾರೆ. ಆದರೆ ಅವರಾಗಿರದೇ ಶೀತಲ್ ಶೆಟ್ಟಿ ಆಗಿರುತ್ತಾರೆ. ಅವರು ಶಾಲಾ ದಿನದಲ್ಲಿ ಒಂದು ಇಡೀ ದಿನ ಯುನಿಫಾರಂ ಪ್ಯಾಂಟ್ ಅನ್ನು ಹಿಂದೆ-ಮುಂದು ಧರಿಸಿ ಓಡಾಡಿದ್ದಾರಂತೆ.

ಸೀಕ್ರೆಟ್ ನಂ 12. ತಾವು ಮಹಿಳೆಯ ಅವತಾರದಲ್ಲಿರುವ ಪುರುಷ ಎಂದು ಭಾವಿಸಿರುವವರು?

ಪ್ರಥಮ್ ಹೋಗಿ ಕಾವ್ಯ ಶಾಸ್ತ್ರಿ ಅವರಿಗೆ ಬಾಣ ಬಿಡುತ್ತಾರೆ. ಆದರೆ ಅವರ ಊಹೆ ಸುಳ್ಳಾಗಿ, ಅದು ಮಾಳವಿಕಾ ಆಗಿರುತ್ತಾರೆ.

ಸೀಕ್ರೆಟ್ ನಂ 13. ರಾಷ್ಟ್ರೀಯ ಮಟ್ಟದ ಫೆನ್ಸಿಂಗ್ ಮತ್ತು ಜಿಮ್ಯಾನಿಸ್ಟ್?

ಪ್ರಥಮ್ ಅವರು ರೇಖಾ ಅಂತ ಗೆಸ್ ಮಾಡ್ತಾರೆ, ಆದ್ರೆ ಗಾಯಕಿ ಚೈತ್ರಾ ಅವರು ಆಗಿರುತ್ತಾರೆ. ಒಟ್ನಲ್ಲಿ ಗಂಡು ಹೈಕಳಿಗಿಂತ ಹೆಚ್ಚು ಹೆಣ್ಣು ಮಕ್ಕಳು ಅಂಕಗಳನ್ನು ಗಳಿಸಿದ್ದಾರೆ.

English summary
Bigg Boss Kannada-4: reveals the secre's behind female contestants. Read more information here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada