»   » 'ಬಿಗ್ ಬಾಸ್ ಕನ್ನಡ-4': ಮೊದಲ ವಾರವೇ ನಟಿ ವಾಣಿಶ್ರೀ ಔಟ್.!

'ಬಿಗ್ ಬಾಸ್ ಕನ್ನಡ-4': ಮೊದಲ ವಾರವೇ ನಟಿ ವಾಣಿಶ್ರೀ ಔಟ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೊದಲ ವಾರದಲ್ಲಿ ಯಾವುದೇ ಕಿರಿಕ್ ಗಳಿಗೂ ನಾಂದಿ ಹಾಡದೆ, 'ತಾವಾಯ್ತು ತಮ್ಮ ಕೆಲಸವಾಯ್ತು' ಅಂತಿದ್ದ ನಟಿ ವಾಣಿಶ್ರೀಗೆ ಗೇಟ್ ಪಾಸ್ ಸಿಕ್ಕಿದೆ.

'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಂದ ಅತ್ಯಧಿಕ ವೋಟ್ ಪಡೆದಿದ್ದ ನಟಿ ವಾಣಿಶ್ರೀ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ನಟಿ ವಾಣಿಶ್ರೀ ಜೊತೆ ಪ್ರಥಮ್, ಭುವನ್ ಪೊನ್ನಣ್ಣ, ಸಂಜನಾ ಚಿದಾನಂದ್ ಮತ್ತು ದೊಡ್ಡ ಗಣೇಶ್ ಕೂಡ ಎಲಿಮಿನೇಷನ್ ಗೆ ನಾಮ ನಿರ್ದೇಶನಗೊಂಡಿದ್ದರು.

Bigg Boss Kannada 4 - Week 1: Actress Vanishri eliminated

'ಬಿಗ್ ಬಾಸ್' ಮನೆಯ ಮೊದಲ ವಾರದ ಕ್ಯಾಪ್ಟನ್ ಆಗಿದ್ದ ಕೀರ್ತಿ, ಕ್ರಿಕೆಟರ್ ದೊಡ್ಡ ಗಣೇಶ್ ರವರನ್ನ ಸೇಫ್ ಮಾಡಿದ್ದರಿಂದ ಪ್ರಥಮ್, ಭುವನ್ ಪೊನ್ನಣ್ಣ, ಸಂಜನಾ ಚಿದಾನಂದ್ ಮತ್ತು ವಾಣಿಶ್ರೀ ಡೇಂಜರ್ ಝೋನ್ ನಲ್ಲಿದ್ದರು. [ಬಿಗ್ ಬಾಸ್-4: ಈ ವಾರ ಮನೆಯಿಂದ ಹೊರ ಹೋಗೋರು ಯಾರು?]

ವೀಕ್ಷಕರಿಂದ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಪರಿಣಾಮ ನಟಿ ವಾಣಿಶ್ರೀ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ ಹೊರಬಿದ್ದಿದ್ದಾರೆ.

English summary
BBK4, WEEK 1: Kannada Actress Vanishree is eliminated from Bigg Boss Kannada 4 reality show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada