ನಿರಂಜನ್ ದೇಶಪಾಂಡೆಗೆ ನಟಿ ವಾಣಿಶ್ರೀ ಕೊಟ್ಟ ಶಿಕ್ಷೆ ಇದು.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನಟಿ ವಾಣಿಶ್ರೀ ಔಟ್ ಆದರು. 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ, ಎಂದಿನಂತೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುತ್ತಾರೆ.

ಅದರಂತೆ, 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನ ಮೊದಲ ವಾರ ಹೊರಬಿದ್ದ ನಟಿ ವಾಣಿಶ್ರೀ ರವರಿಗೂ ವಿಶೇಷ ಅಧಿಕಾರ ಲಭಿಸಿತು. ಅದರ ಅನುಸಾರ, 'ಬಿಗ್ ಬಾಸ್' ಮನೆಯಲ್ಲಿ ಸದಾ ಹಿಮ್ಮುಖವಾಗಿ ನಡೆಯುವ ಒಬ್ಬ ಸದಸ್ಯರ ಹೆಸರನ್ನು ನಟಿ ವಾಣಿಶ್ರೀ ಸೂಚಿಸಬೇಕಿತ್ತು. ['ಬಿಗ್ ಬಾಸ್ ಕನ್ನಡ-4': ಮೊದಲ ವಾರವೇ ನಟಿ ವಾಣಿಶ್ರೀ ಔಟ್.!]

ಹಿಂದು-ಮುಂದು ಯೋಚನೆ ಮಾಡದ ನಟಿ ವಾಣಿಶ್ರೀ, ನಿರಂಜನ್ ದೇಶಪಾಂಡೆ ಹೆಸರನ್ನ ಸೂಚಿಸಿದರು. ಪರಿಣಾಮ, 'ಬಿಗ್ ಬಾಸ್' ರವರ ಮುಂದಿನ ಆದೇಶದವರೆಗೆ 'ಬಿಗ್' ಮನೆಯಲ್ಲಿ ನಿರಂಜನ್ ದೇಶಪಾಂಡೆ ಹಿಮ್ಮುಖವಾಗಿ ನಡೆಯಬೇಕು.! ತಪ್ಪಿದರೆ, ಶಿಕ್ಷೆ ಗ್ಯಾರೆಂಟಿ.
English summary
BBK4, Week 1: Before leaving the house, eliminated contestant Actress Vanishri chose Niranjan Deshpande for the punishment given by Bigg Boss. Read the article to know about the punishment.
bigg boss kannada 4 bigg boss reality show colors channel tv sudeep ಬಿಗ್ ಬಾಸ್ ಕನ್ನಡ 4 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಸುದೀಪ್


Click it and Unblock the Notifications