'ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ.?

By Harshitha

ಎರಡು ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿ, 'ಬಿಗ್ ಬಾಸ್' ಮನೆಯ 'ಡೈರೆಕ್ಟರ್' ಅಂತ 'ಕು'ಖ್ಯಾತಿ ಪಡೆದಿರುವ ಕೀರ್ತಿ ಕುಮಾರ್ ಈ ವಾರ ಮಿಸ್ ಇಲ್ಲದೇ ನಾಮಿನೇಟ್ ಆಗಿದ್ದಾರೆ. ಅಪ್ಪಿ-ತಪ್ಪಿ ಈ ವಾರ ಪ್ರಥಮ್ ಕ್ಯಾಪ್ಟನ್ ಆಗದೇ ಹೋಗಿದಿದ್ರೆ, ಗ್ಯಾರೆಂಟಿ ನಾಮಿನೇಷನ್ ಲಿಸ್ಟ್ ನಲ್ಲಿ ಇರ್ತಿದ್ರು.[ಕಡೆಗೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬುದ್ಧಿವಂತ' ಪ್ರಥಮ್.!]

64ನೇ ದಿನ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆ ಕುರಿತ ಸಂಪೂರ್ಣ ವರದಿ ಇಲ್ಲಿದೆ. ಓದಿರಿ....

ಕ್ಯಾಪ್ಟನ್ ಆಗಿ ಸೇಫ್ ಆದ ಪ್ರಥಮ್

ಕ್ಯಾಪ್ಟನ್ ಆಗಿ ಸೇಫ್ ಆದ ಪ್ರಥಮ್

'ಬಿಗ್ ಬಾಸ್' ನೀಡಿದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು 'ಒಳ್ಳೆ ಹುಡುಗ' ಪ್ರಥಮ್ ಈ ವಾರ ಮನೆಯ ಕ್ಯಾಪ್ಟನ್ ಆದರು. ಸಹಜವಾಗಿ ಅವರಿಗೆ ಎಲಿಮಿನೇಷನ್ ನಿಂದ ಇಮ್ಯೂನಿಟಿ ಸಿಕ್ತು.

ನೇರವಾಗಿ ನಾಮಿನೇಟ್ ಆಗಿದ್ದ ಶಾಲಿನಿ, ಸುಕೃತಾ

ನೇರವಾಗಿ ನಾಮಿನೇಟ್ ಆಗಿದ್ದ ಶಾಲಿನಿ, ಸುಕೃತಾ

ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸೀಕ್ರೆಟ್ ಟಾಸ್ಕ್ ಮಾಡದೇ ಇದ್ದ ಕಾರಣ ನಟಿ ಶಾಲಿನಿ ನೇರವಾಗಿ ನಾಮಿನೇಟ್ ಆದರು. ಇನ್ನೂ ಸುಕೃತಾ ರವರನ್ನ ಓಂ ಪ್ರಕಾಶ್ ರಾವ್ ನೇರವಾಗಿ ನಾಮಿನೇಟ್ ಮಾಡಿದ ಕಾರಣ ಇಬ್ಬರೂ ಡೇಂಜರ್ ಝೋನ್ ನಲ್ಲಿದ್ದಾರೆ.

ಕಾರುಣ್ಯ ರಾಮ್ ಗೆ ಹೆಚ್ಚು ವೋಟ್ಸ್.!

ಕಾರುಣ್ಯ ರಾಮ್ ಗೆ ಹೆಚ್ಚು ವೋಟ್ಸ್.!

ನಟಿ ಕಾರುಣ್ಯ ರಾಮ್ ವಿರುದ್ಧ ಸಂಜನಾ, ರೇಖಾ, ಶಾಲಿನಿ, ಶೀತಲ್ ಮತ್ತು ಕೀರ್ತಿ ವೋಟ್ ಮಾಡಿದರು.

ಡೇಂಜರ್ ಝೋನ್ ನಲ್ಲಿ ಕೀರ್ತಿ

ಡೇಂಜರ್ ಝೋನ್ ನಲ್ಲಿ ಕೀರ್ತಿ

ಸಂಜನಾ, ಭುವನ್, ಕಾರುಣ್ಯ ಮತ್ತು ಸುಕೃತಾ ವಕ್ರದೃಷ್ಟಿಯಿಂದ ಕೀರ್ತಿ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ.

ಸಂಜನಾ ಕೂಡ ಮಿಸ್ ಇಲ್ಲ.!

ಸಂಜನಾ ಕೂಡ ಮಿಸ್ ಇಲ್ಲ.!

ನಟಿ ಸಂಜನಾ ರವರನ್ನ ಮೋಹನ್, ಕೀರ್ತಿ ಮತ್ತು ಶಾಲಿನಿ ನಾಮಿನೇಟ್ ಮಾಡಿದರು.

ಮತ್ತೆ ಮಾಳವಿಕಾ ಟಾರ್ಗೆಟ್

ಮತ್ತೆ ಮಾಳವಿಕಾ ಟಾರ್ಗೆಟ್

ನಟಿ ಮಾಳವಿಕಾ ರವರನ್ನ ರೇಖಾ ಮತ್ತು ಸುಕೃತಾ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿದರು.

ಶೀತಲ್ ಹೆಸರನ್ನ ಸೂಚಿಸಿದವರು...

ಶೀತಲ್ ಹೆಸರನ್ನ ಸೂಚಿಸಿದವರು...

ಶೀತಲ್ ಶೆಟ್ಟಿ ವಿರುದ್ಧ ಭುವನ್ ಮತ್ತು ಕಾರುಣ್ಯ ವೋಟ್ ಮಾಡಿದರು.

ಸೇಫ್ ಅದ ಶೀತಲ್ ಶೆಟ್ಟಿ

ಸೇಫ್ ಅದ ಶೀತಲ್ ಶೆಟ್ಟಿ

ಕ್ಯಾಪ್ಟನ್ ಪ್ರಥಮ್ ಗೆ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ನೀಡುವ ಬದಲು, ನಾಮಿನೇಟ್ ಆದವರ ಪೈಕಿ ಒಬ್ಬರನ್ನು ಸೇಫ್ ಮಾಡುವ ಅಧಿಕಾರವನ್ನ 'ಬಿಗ್ ಬಾಸ್' ನೀಡಿದರು. ಅದನ್ನ ಬಳಸಿಕೊಂಡು ಶೀತಲ್ ಶೆಟ್ಟಿ ರವರನ್ನ ಪ್ರಥಮ್ ಸೇಫ್ ಮಾಡಿದರು.

ಆರು ಜನರಲ್ಲಿ ಯಾರು ಉಳಿಯಬೇಕು.?

ಆರು ಜನರಲ್ಲಿ ಯಾರು ಉಳಿಯಬೇಕು.?

ಸಂಜನಾ, ಕಾರುಣ್ಯ ರಾಮ್, ಕೀರ್ತಿ ಕುಮಾರ್, ಮಾಳವಿಕಾ, ಶಾಲಿನಿ ಮತ್ತು ಸುಕೃತಾ... ಈ ಆರು ಜನರ ಪೈಕಿ ಯಾರು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಉಳಿಯಬೇಕು.?

ಯಾರು ಔಟ್ ಆಗಬೇಕು.?

ಯಾರು ಔಟ್ ಆಗಬೇಕು.?

ಸಂಜನಾ, ಕಾರುಣ್ಯ ರಾಮ್, ಕೀರ್ತಿ ಕುಮಾರ್, ಮಾಳವಿಕಾ, ಶಾಲಿನಿ ಮತ್ತು ಸುಕೃತಾ... ಈ ಆರು ಜನರ ಪೈಕಿ ಯಾರು ಔಟ್ ಆಗಬೇಕು. ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

More from Filmibeat

English summary
Bigg Boss Kannada 4, Week 10 : Small Screen Actress Sanjana, Shalini, Karunya Ram, Keerthi, Malavika and Sukrutha are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X