'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಅವಕಾಶ ವಂಚಿತ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಹತ್ತು ವಾರಗಳಲ್ಲಿ ಎಂಟು ವಾರ ನಾಮಿನೇಟ್ ಆಗಿದ್ದವರು 'ಒಳ್ಳೆ ಹುಡುಗ' ಪ್ರಥಮ್. 'ಎಮರ್ಜೆನ್ಸಿ' ಟಾಸ್ಕ್ ನಲ್ಲಿ ನೀಡಲಾಗಿದ್ದ ಸವಾಲನ್ನು ಯಶಸ್ವಿಯಾಗಿ ಪೂರೈಸಿದ ಪ್ರಥಮ್ ಒಂದು ವಾರ ಇಮ್ಯೂನಿಟಿ ಪಡೆದಿದ್ದರು.
ಅದಾದ ಬಳಿಕ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಂಬರ್ 1 ರ್ಯಾಂಕ್ ಪಡೆದು 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದರು ನಿರ್ದೇಶಕ ಪ್ರಥಮ್. ಅಲ್ಲಿಗೆ, ಪ್ರಥಮ್ ಪಿಕಪ್ ಆಗ್ತಿದ್ದಾರೆ ಅಂತ ಎಲ್ಲರೂ ಅಂದುಕೊಳ್ಳುವಾಗಲೇ, ಪ್ರಥಮ್ ಓಟಕ್ಕೆ ನಟಿ ಸುಕೃತಾ ಬ್ರೇಕ್ ಹಾಕ್ಬಿಟ್ಟರು.!

ಪ್ರಥಮ್ ಮತ್ತೊಮ್ಮೆ ಟಾರ್ಗೆಟ್
'ಬಿಗ್ ಬಾಸ್' ಮನೆಯಲ್ಲಿ ಮಗದೊಂದು ಬಾರಿ ಪ್ರಥಮ್ ಟಾರ್ಗೆಟ್ ಆಗಿದ್ದಾರೆ. ಅದು ನಟಿ ಸುಕೃತಾ ರವರಿಂದ ಅನ್ನೋದು ಆಶ್ಚರ್ಯಕರ ಸಂಗತಿ. [ಕಡೆಗೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬುದ್ಧಿವಂತ' ಪ್ರಥಮ್.!]

ಪ್ರಥಮ್ ಕ್ಯಾಪ್ಟನ್ ಆಗದಂತೆ ಮಾಡಿದ ಸುಕೃತಾ
'ಬಿಗ್ ಬಾಸ್' ಮನೆಯಿಂದ ಹತ್ತನೇ ವಾರ ನಟಿ ಸುಕೃತಾ ಎಲಿಮಿನೇಟ್ ಆದರು. ಮನೆಯಿಂದ ಹೊರ ನಡೆಯುವ ಮುನ್ನ ನಟಿ ಸುಕೃತಾಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದರು. ಅದರ ಅನುಸಾರ 'ಮುಂದಿನ ವಾರ ಯಾವ ಒಬ್ಬ ಸದಸ್ಯ ಮನೆಯ ಕ್ಯಾಪ್ಟನ್ ಆಗಬಾರದು' ಎಂಬುದನ್ನು 'ಬಿಗ್ ಬಾಸ್'ಗೆ ಸುಕೃತಾ ತಿಳಿಸಬೇಕಿತ್ತು. ['ಬಿಗ್ ಬಾಸ್ ಕನ್ನಡ-4': ಸ್ಪರ್ಧೆಯಿಂದ ಹೊರಬಿದ್ದ ನಟಿ ಸುಕೃತಾ.!]

ಪ್ರಥಮ್ ಹೆಸರು ಹೇಳಿದ ಸುಕೃತಾ
'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನ್ವಯ, ಪ್ರಥಮ್ ಹೆಸರನ್ನ ನಟಿ ಸುಕೃತಾ ಸೂಚಿಸಿದರು.

ಕ್ಯಾಪ್ಟನ್ ಭಾಗ್ಯ ಇಲ್ಲ.!
ಸುಕೃತಾ ರಿಂದಾಗಿ ಈ ವಾರ 'ಕ್ಯಾಪ್ಟೆನ್ಸಿ' ಟಾಸ್ಕ್ ನಲ್ಲಿ ಪ್ರಥಮ್ ಪಾಲ್ಗೊಳ್ಳುವಂತಿಲ್ಲ.

ಡೇಂಜರ್ ಝೋನ್ ಗೆ ಬರಬಹುದು.!
'ಬಿಗ್ ಬಾಸ್' ಮನೆಯಲ್ಲಿ ಸತತವಾಗಿ ಟಾರ್ಗೆಟ್ ಆಗಿರುವ ಪ್ರಥಮ್ ಈ ವಾರ ಕೂಡ ಡೇಂಜರ್ ಝೋನ್ ಗೆ ಬಂದ್ರೆ ಅಚ್ಚರಿ ಇಲ್ಲ.


Click it and Unblock the Notifications











