'ಬಿಗ್ ಬಾಸ್ ಕನ್ನಡ-4': ಸ್ಪರ್ಧೆಯಿಂದ ಹೊರಬಿದ್ದ ನಟಿ ಸುಕೃತಾ.!
ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ ನಟಿ ಸುಕೃತಾ ವಾಗ್ಲೆ ಹೊರಬಿದ್ದಿದ್ದಾರೆ. ಕಳೆದ ಎರಡು ವಾರಗಳ ಹಿಂದೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದ ಸುಕೃತಾ ವಾಗ್ಲೇ ಈ ವಾರ ಔಟ್ ಆಗಿದ್ದಾರೆ.
ಡೇಂಜರ್ ಝೋನ್ ನಲ್ಲಿದ್ದ ಇತರೆ ಐದು ಸ್ಪರ್ಧಿಗಳಿಗಿಂತ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ನಟಿ ಸುಕೃತಾ ವಾಗ್ಲೇ ಗೇಟ್ ಪಾಸ್ ಪಡೆದಿದ್ದಾರೆ.

ಎರಡೇ ವಾರಕ್ಕೆ ಔಟ್ ಆದ ಸುಕೃತಾ.!
ನಟಿ ಸುಕೃತಾ ವಾಗ್ಲೆ 'ಬಿಗ್ ಬಾಸ್' ಮನೆಗೆ ಕಾಲಿಟ್ಟು ಕೇವಲ ಎರಡು ವಾರಗಳು ಕಳೆದಿತ್ತು ಅಷ್ಟೇ. ಅಷ್ಟು ಬೇಗ ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!]

'ಎಮರ್ಜೆನ್ಸಿ' ಟಾಸ್ಕ್ ನಲ್ಲಿ ಎಂಟ್ರಿ
ಪ್ರಥಮ್ 'ದಂಡನಾಯಕ'ರಾಗಿದ್ದ 'ಎಮರ್ಜೆನ್ಸಿ' ಟಾಸ್ಕ್ ನಲ್ಲಿ 'ಕಮಾಂಡೋ' ಆಗಿ ನಟಿ ಸುಕೃತಾ ವಾಗ್ಲೆ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದರು.

ಆರು ಜನ ನಾಮಿನೇಟ್ ಆಗಿದ್ದರು
ನಟಿ ಸುಕೃತಾ ಜೊತೆ ಸಂಜನಾ, ಕಾರುಣ್ಯ ರಾಮ್, ಕೀರ್ತಿ ಕುಮಾರ್, ಮಾಳವಿಕಾ ಮತ್ತು ಶಾಲಿನಿ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ.?]

ನೇರವಾಗಿ ನಾಮಿನೇಟ್ ಆಗಿದ್ದ ಸುಕೃತಾ
'ಬಿಗ್ ಬಾಸ್' ನೀಡಿದ್ದ ವಿಶೇಷ ಅಧಿಕಾರದ ಅನುಸಾರ ನಿರ್ದೇಶಕ ಓಂ ಪ್ರಕಾಶ್ ರಾವ್ ರವರು ನಟಿ ಸುಕೃತಾ ರವರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು.

ಹೊರಬಿದ್ದ ಸುಕೃತಾ
'ಬಿಗ್ ಬಾಸ್' ಮನೆಯ ಹೊಸ ಮುಖ ಆಗಿರುವ ಸುಕೃತಾ ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದು ಔಟ್ ಆದರು.

ಕಣ್ಣೀರಿಟ್ಟ ಕಾರುಣ್ಯ
ನಟಿ ಸುಕೃತಾಗೆ ಕಾರುಣ್ಯ ರಾಮ್ ಬೆಸ್ಟ್ ಫ್ರೆಂಡ್. ಹೀಗಾಗಿ, ಸುಕೃತಾ ಹೊರನಡೆಯುವಾಗ ಕಾರುಣ್ಯ ಕಣ್ಣೀರಿಟ್ಟರು.


Click it and Unblock the Notifications











