For Quick Alerts
  ALLOW NOTIFICATIONS  
  For Daily Alerts

  ಪ್ರಥಮ್, ಶೀತಲ್ ಗೆ ಗುಂಡ್ ಪಿನ್ ಚುಚ್ಚಿ ಹೋದ ಸಂಜನಾ

  By Harshitha
  |

  'ಬಿಗ್ ಬಾಸ್' ಮನೆಯಲ್ಲಿ ಇರುವಾಗ 'ಒಳ್ಳೆ ಹುಡುಗ' ಪ್ರಥಮ್ ಮತ್ತು ಶೀತಲ್ ಶೆಟ್ಟಿ ಮುಂದೆ ನಗುನಗುತ್ತಲೇ ಮಾತನಾಡುತ್ತಿದ್ದ ಸಂಜನಾ, ಹಿಂದೆ ಮಾತ್ರ ಇಬ್ಬರ ಬಗ್ಗೆ ಉರಿದು ಬೀಳ್ತಿದ್ರು.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ನಟಿ ಸಂಜನಾ!]

  'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ಕೂಡ ಪ್ರಥಮ್ ಮತ್ತು ಶೀತಲ್ ಶೆಟ್ಟಿ ರವರಿಗೆ ಸಂಜನಾ ಗುಂಡ್ ಪಿನ್ ಚುಚ್ಚಿ ಹೋಗಿದ್ದಾರೆ. ಅರ್ಥಾತ್ 'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನ್ವಯ ಪ್ರಥಮ್ ಮತ್ತು ಶೀತಲ್ ಶೆಟ್ಟಿ ರವರಿಗೆ ಸಂಜನಾ ಶಿಕ್ಷೆ ನೀಡಿದ್ದಾರೆ.

  ಸಂಜನಾ ಸಿಕ್ತು ವಿಶೇಷ ಅಧಿಕಾರ

  ಸಂಜನಾ ಸಿಕ್ತು ವಿಶೇಷ ಅಧಿಕಾರ

  ಪ್ರತಿ ವಾರದಂತೆ ಈ ವಾರ ಕೂಡ ಎಲಿಮಿನೇಟ್ ಆದ ಸ್ಪರ್ಧಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದರು. ಅದರ ಅನ್ವಯ ಮತ್ತೊಮ್ಮೆ ಪ್ರಥಮ್ ಹಾಗೂ ಶೀತಲ್ ಶೆಟ್ಟಿ ರವರನ್ನ ಸಂಜನಾ ಟಾರ್ಗೆಟ್ ಮಾಡಿದರು.[ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್]

  ಸಂಜನಾಗೆ ಸಿಕ್ಕ ವಿಶೇಷ ಅಧಿಕಾರ ಏನು.?

  ಸಂಜನಾಗೆ ಸಿಕ್ಕ ವಿಶೇಷ ಅಧಿಕಾರ ಏನು.?

  ಮುಂದಿನ ವಾರ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಹೆಸರನ್ನು ಸಂಜನಾ ಸೂಚಿಸಬೇಕಿತ್ತು.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

  ಬೇರೆ ಹೆಸರು ಹೊಳಿಯಲೇ ಇಲ್ಲ

  ಬೇರೆ ಹೆಸರು ಹೊಳಿಯಲೇ ಇಲ್ಲ

  ಹಿಂದು ಮುಂದೆ ಯೋಚನೆ ಮಾಡದೆ, ಪ್ರಥಮ್ ಹಾಗೂ ಶೀತಲ್ ಶೆಟ್ಟಿ ಹೆಸರನ್ನು ಸಂಜನಾ ಸೂಚಿಸಿದರು.

  ನೇರವಾಗಿ ನಾಮಿನೇಟ್ ಆಗಲಿಲ್ಲ.!

  ನೇರವಾಗಿ ನಾಮಿನೇಟ್ ಆಗಲಿಲ್ಲ.!

  ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಥಮ್ ಹಾಗೂ ಶೀತಲ್ ಶೆಟ್ಟಿ ರವರಿಗೆ ತಲಾ ಒಂದು ವೋಟ್ ಬಿದ್ದ ಹಾಗೆ ಆಗಿದೆ ಹೊರತು ನೇರವಾಗಿ ನಾಮಿನೇಟ್ ಆಗಿಲ್ಲ.

  ಸಂಜನಾಗೆ ಕಿವಿಯಲ್ಲಿ 'ಐ ಲವ್ ಯು' ಎಂದ ಪ್ರಥಮ್

  ಸಂಜನಾಗೆ ಕಿವಿಯಲ್ಲಿ 'ಐ ಲವ್ ಯು' ಎಂದ ಪ್ರಥಮ್

  'ಬಿಗ್ ಬಾಸ್' ಮನೆ ಆಚೆ ಕಾಲಿಡುವ ಮುನ್ನ ಸಂಜನಾ ಕಿವಿಯಲ್ಲಿ ಪ್ರಥಮ್ ''ಐ ಲವ್ ಯು'' ಎಂದರು.

  English summary
  BBK4, Week 11: Before leaving the house, eliminated contestant Actress Sanjana chose Pratham and Sheethal Shetty for the punishment given by Bigg Boss. Read the article to know about the punishment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X