»   » ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!

ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಕಳೆದ ವಾರ ನಡೆದ 'ಮಸಿ-ಹಾರ' ಟಾಸ್ಕ್ ನೆನಪಿದ್ಯಾ.? ಅದರಲ್ಲಿ 'ಬಿಗ್ ಬಾಸ್' ಮನೆಯ ಬಹುತೇಕ ಸದಸ್ಯರು ಪ್ರಥಮ್ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಿದನ್ನ ನೀವು ನೋಡಿರಬಹುದು.

ಈ ಟಾಸ್ಕ್ ನಲ್ಲಿ ಪ್ರಥಮ್ ನಡೆದುಕೊಂಡ ರೀತಿ ಕಿಚ್ಚ ಸುದೀಪ್ ಮನ ಮುಟ್ಟಿದೆ. ಇದೇ ಕಾರಣಕ್ಕೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಥಮ್ ಗೆ ಸುದೀಪ್ ಭೇಷ್ ಎಂದರು.

'ಮಸಿ-ಹಾರ' ಟಾಸ್ಕ್ ಕೊಟ್ಟಿದ್ದಾದರೂ ಯಾಕೆ.?

''ಮಸಿ-ಹಾರ' ಟಾಸ್ಕ್ ನಲ್ಲಿ ಕೆಲವರಿಗೆ ಮಸಿ ಬರುತ್ತದೆ. ಪ್ರಥಮ್ ಬಿಟ್ಟು ಇನ್ನೆಲ್ಲರಿಗೂ ಹಾರ ಬಂತು. ಈ ಟಾಸ್ಕ್ ಸ್ವಲ್ಪ ಹಾರ್ಶ್ ಅಂತ ನಿಮ್ಮೆಲ್ಲರಿಗೂ ಅನಿಸಿರಬಹುದು. ಆದರೆ, 'ಬಿಗ್ ಬಾಸ್' ಕೊಡುವ ಪ್ರತಿ ಟಾಸ್ಕ್ ನಲ್ಲೂ ಒಂದು ಅರ್ಥ ಇರುತ್ತದೆ'' - ಕಿಚ್ಚ ಸುದೀಪ್ [ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ಮಸಿ ಬಳಿಯುವ ಮುನ್ನ

''ನೀವು ಒಬ್ಬರಿಗೆ ಹಾರ ಹಾಕುತ್ತೀರಾ... ಆದ್ರೆ, ನಿಮ್ಮ ಕೈಯಲ್ಲಿ, ನಿಮ್ಮ ಮೈಯಲ್ಲಿ ಏನೂ ಉಳಿಯುವುದಿಲ್ಲ. ಮಸಿ ಬಳಿಯುತ್ತೀರಾ... ಆದ್ರೆ ಬೇರೆಯವರಿಗೆ ಬಳಿಯುವುದಕ್ಕಿಂತ ಮುಂಚೆ ಮೊದಲು ನಿಮ್ಮ ಕೈ ಕಪ್ಪು ಆಗುತ್ತೆ. ಬಳಿದ ಮೇಲೂ ನೀವು ಕೈ ತೊಳೆದುಕೊಳ್ಳಬೇಕಾಗುತ್ತೆ'' - ಕಿಚ್ಚ ಸುದೀಪ್ [ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!]

ಪ್ರಥಮ್ ನಡೆದುಕೊಂಡ ರೀತಿ ಅದ್ಭುತ

''ಒಂದು ವಿಚಾರ ಗಮನಿಸಿದ್ದು, ಎಲ್ಲರಿಗೂ ಹಾರ ಬಂತು. ಪ್ರಥಮ್ ಬಿಟ್ಟು. ಪ್ರಥಮ್ ಮಸಿ ಬಳಿಯುವ ಮುನ್ನ, ಅವರಿಗೆ ಅವರೇ ಡಾಟ್ ಇಟ್ಟುಕೊಂಡರು. ಎಲ್ಲರಿಂದ ಮೆಚ್ಚುಗೆ ಪಡೆದ ರೇಖಾ ಅವರಿಂದ ಮೆಚ್ಚುಗೆ ಪಡೆದಿದ್ದಕ್ಕೆ ಭಾವುಕರಾದರು. ಆ ಟಾಸ್ಕ್ ನಲ್ಲಿ ಪ್ರಥಮ್ ನಡೆದುಕೊಂಡ ರೀತಿ ಅದ್ಭುತವಾಗಿತ್ತು'' - ಕಿಚ್ಚ ಸುದೀಪ್ [ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಪ್ರಥಮ್ ಫುಲ್ ಖುಷ್

ಸುದೀಪ್ ಆಡಿದ ಮಾತಿಗೆ ಪ್ರಥಮ್ ಫುಲ್ ಖುಷ್ ಆದರು.

English summary
Bigg Boss Kannada 4: Week 13, Kiccha Sudeep appreciated Pratham for his behaviour in 'Masi-Hara' task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada