»   » 'ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಇಂದು ಸಿಗಲಿದೆ ಎಲಿಮಿನೇಷನ್ ಶಾಕ್.?

'ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಇಂದು ಸಿಗಲಿದೆ ಎಲಿಮಿನೇಷನ್ ಶಾಕ್.?

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ. ಈ ವಾರ ಎಲಿಮಿನೇಷನ್ ನಿಂದ ಬಚಾವ್ ಆದವರು ಫಿನಾಲೆ ವಾರಕ್ಕೆ ಎಂಟ್ರಿ ಟಿಕೆಟ್ ಪಡೆಯುತ್ತಾರೆ.

ಸದ್ಯ ಪ್ರಥಮ್, ಮಾಳವಿಕಾ ಅವಿನಾಶ್, ಕೀರ್ತಿ ಮತ್ತು ಭುವನ್ ಡೇಂಜರ್ ಝೋನ್ ನಲ್ಲಿದ್ದಾರೆ. ಈ ನಾಲ್ವರಲ್ಲಿ ಒಬ್ಬರು ಈ ವಾರ 'ದೊಡ್ಮನೆ'ಯಿಂದ ನಿರ್ಗಮಿಸೋದು ಖಚಿತ. ಆದ್ರೆ, ಇದರಲ್ಲೂ ಒಂದು ಟ್ವಿಸ್ಟ್ ಇಟ್ಟಿದ್ದಾರೆ 'ಬಿಗ್ ಬಾಸ್'.!

ಏನು ಆ ಟ್ವಿಸ್ಟ್.?

ಈ ವಾರ ನಾಮಿನೇಟ್ ಆಗಿರುವ ನಾಲ್ವರ ಪೈಕಿ ಒಬ್ಬರು ಇಂದು ಔಟ್ ಆಗಬಹುದು.! ['ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?]

ಹೇಗೆ ಸಾಧ್ಯ.?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮವನ್ನ ನಿನ್ನೆ (ಸೋಮವಾರ) ನೀವು ಸೂಕ್ಷ್ಮವಾಗಿ ಗಮನಿಸಿದ್ದರೆ, ''ವೋಟಿಂಗ್ ಲೈನ್ ಗಳು ಇಂದು (ಜನವರಿ-2) ರಾತ್ರಿ 12 ಗಂಟೆವರೆಗೆ ತೆರೆದಿರುತ್ತವೆ'' ಎಂಬ ಸೂಚನೆ ಕಣ್ಣಿಗೆ ಬಿದ್ದಿರುತ್ತದೆ. ಅಲ್ಲಿಗೆ ಇದರ ಅರ್ಥ ಏನು.?

ಇಂದು ಎಲಿಮಿನೇಷನ್.?

ವೋಟಿಂಗ್ ಲೈನ್ ಗಳನ್ನು ನಿನ್ನೆ ರಾತ್ರಿಯೇ ಬಂದ್ ಆಗಿರುವುದರಿಂದ ಇಂದು ಎಲಿಮಿನೇಷನ್ ಇರಬೇಕು ಅಲ್ಲವೇ.? [ಫೈನಲ್ ತಲುಪಲು ಮಾಳವಿಕಾ ಮತ್ತೊಂದು ಅಗ್ನಿಪರೀಕ್ಷೆ ಎದುರಿಸ್ಲೇಬೇಕು.!]

ಸ್ಪರ್ಧಿಗಳಿಗೆ ಕಾದಿದ್ಯಾ ಶಾಕ್.?

ಸರ್ಪ್ರೈನ್ ಎಲಿಮಿನೇಷನ್ ಮಾಡಿ ಸ್ಪರ್ಧಿಗಳಿಗೆ ಇಂದು 'ಬಿಗ್ ಬಾಸ್' ಶಾಕ್ ಕೊಡ್ತಾರಾ.?

ಬೇರೆ ಸರ್ ಪ್ರೈಸ್ ಕಾದಿದ್ಯಾ.?

ಎಲಿಮಿನೇಷನ್ ಇದ್ಯೋ ಅಥವಾ 'ಬಿಗ್ ಬಾಸ್' ಬೇರೆ ಪ್ಲಾನ್ ಮಾಡಿದ್ದಾರೋ ಎಂಬುದನ್ನು ತಿಳಿಯಲು ಇಂದಿನ ಸಂಚಿಕೆಯನ್ನ ಮಿಸ್ ಮಾಡದೇ ನೋಡಿ.

English summary
Bigg Boss Kannada 4, Week 13 : 'Kirik' Keerthi, Malavika Avinash, Pratham and Bhuvan are nominated for this week's elimination. Since Voting lines are closed yesterday (Jan 2nd) night, There might be surprise elimination today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada