'ಬಿಗ್ ಬಾಸ್ ಕನ್ನಡ-4': ಅರ್ಧಕರ್ಧ ಮನೆ ಸದಸ್ಯರು ಈ ವಾರ ಡೇಂಜರ್ ಝೋನಲ್ಲಿ.!

By Harshitha

''14 ಜನ ಒಂದು ಗುಂಪು, ನಾನು ಮಾತ್ರ ಬೇರೆ. 'ಬಿಗ್ ಬಾಸ್' ಮನೆಯಲ್ಲಿ ನಾನು ವಿರೋಧ ಪಕ್ಷದ ನಾಯಕ'' ಅಂತ ಹೇಳಿಕೊಳ್ಳುವ ಪ್ರಥಮ್ ವಿರುದ್ಧ ಬಹಿರಂಗವಾಗಿ 'ಬಿಗ್ ಬಾಸ್' ಮನೆಯಲ್ಲಿ ಎಲ್ಲರೂ ಬುಸುಗುಡುತ್ತಾರೆ. ಆದ್ರೆ, ನಾಮಿನೇಷನ್ ಪ್ರಕ್ರಿಯೆ ಶುರುವಾದಾಗಲೇ ನೋಡಿ, ಸ್ಪರ್ಧಿಗಳ ಅಸಲಿ ಮುಖ ಬಯಲಾಗುವುದು.

ಗುಂಪಲ್ಲಿ ಇರುವಾಗ 'ಗೋವಿಂದ' ಅಂತ ಎಲ್ಲರೂ ಒಟ್ಟಿಗೆ ಹೇಳಿದರೂ, ಯಾವಾಗ, ಯಾರಿಗೆ, ಯಾರಿಂದ ಉಂಡೆನಾಮ ಬೀಳುತ್ತೋ, ಊಹಿಸುವುದೇ ಕಷ್ಟ.

ಬೇಕಾದ್ರೆ, ಶಾಲಿನಿ ಮತ್ತು ಸಂಜನಾ ನಡುವೆ ಆದ ಘಟನೆಯನ್ನೇ ನೆನಪಿಸಿಕೊಳ್ಳಿ. ಸಂಜನಾ ಕಣ್ಣೀರು ಹಾಕುತ್ತಿರುವಾಗ, ''ನೀನು ನನ್ನ ಮಗಳು ಇದ್ದ ಹಾಗೆ'' ಅಂತ್ಹೇಳಿ ಸಮಾಧಾನ ಮಾಡಿದ್ದ ಶಾಲಿನಿ, ಕನ್ಫೆಶನ್ ರೂಮ್ ಒಳಗೆ ಕಾಲಿಟ್ಟರೆ, ಅದೇ 'ಮಗಳು' ಸಂಜನಾ ರವರನ್ನೇ ನಾಮಿನೇಟ್ ಮಾಡುತ್ತಾರೆ.

ನಿನ್ನೆ (ಮೂರನೇ ವಾರ - 15ನೇ ದಿನ) 'ಬಿಗ್ ಬಾಸ್' ಮನೆಯಲ್ಲಿ ಆದ ನಾಮಿನೇಷನ್ ಪ್ರಕ್ರಿಯೆ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿರಿ....

'ಕಾವ್ಯ' ಬಗ್ಗೆ ಕೆಮ್ಮಂಗಿಲ್ಲ.!

'ಕಾವ್ಯ' ಬಗ್ಗೆ ಕೆಮ್ಮಂಗಿಲ್ಲ.!

'ಬಿಗ್ ಬಾಸ್' ನೀಡಿದ್ದ 'ಬಲೂನ್' ಟಾಸ್ಕ್ ಗೆದ್ದ ಕಿರುತೆರೆ ನಟಿ ಕಾವ್ಯ ಶಾಸ್ತ್ರಿ ಈ ವಾರ ಮನೆಯ ಕ್ಯಾಪ್ಟನ್ ಆದರು. ಪರಿಣಾಮ, ಈ ವಾರ ಕಾವ್ಯ ಶಾಸ್ತ್ರಿ ರವರನ್ನ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ಯಾರೂ ನಾಮಿನೇಟ್ ಮಾಡುವಂತೆ ಇರ್ಲಿಲ್ಲ. [BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ]

ಡೇಂಜರ್ ಝೋನ್ ನಲ್ಲಿ ಕೀರ್ತಿ ಕುಮಾರ್

ಡೇಂಜರ್ ಝೋನ್ ನಲ್ಲಿ ಕೀರ್ತಿ ಕುಮಾರ್

'ಕಿರಿಕ್' ಕೀರ್ತಿ ಹೆಸರನ್ನ ಕ್ಯಾಪ್ಟನ್ ಕಾವ್ಯ ಶಾಸ್ತ್ರಿ ಸೂಚಿಸಿದ ಕಾರಣ, ಕೀರ್ತಿ ಕುಮಾರ್ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ.

ಮಾಳವಿಕಾ ವಿರುದ್ಧ ಅತ್ಯಧಿಕ ವೋಟ್ಸ್.!

ಮಾಳವಿಕಾ ವಿರುದ್ಧ ಅತ್ಯಧಿಕ ವೋಟ್ಸ್.!

ಅಚ್ಚರಿ ಅಂದ್ರೆ ಇದೇ ನೋಡಿ....ಕಳೆದ ವಾರ 'ಬಿಗ್ ಬಾಸ್' ಮನೆಯ ಸದಸ್ಯರಿಂದ ಅತ್ಯಧಿಕ ಮತ ಪಡೆದು ನಾಮಿನೇಟ್ ಆಗಿದ್ದವರು 'ಪಿರಿ ಪಿರಿ' ಪ್ರಥಮ್. ಆದ್ರೆ, ಈ ಬಾರಿ ಪ್ರಥಮ್ ಗಿಂತ ಹೆಚ್ಚಾಗಿ 'ಬಿಗ್ ಬಾಸ್' ಮನೆಯ ಸದಸ್ಯರಿಂದ ಟಾರ್ಗೆಟ್ ಆಗಿರುವುದು ನಟಿ ಮಾಳವಿಕಾ ಅವಿನಾಶ್.

ಮಾಳವಿಕಾ ಹೆಸರು ಹೇಳಿದವರು ಯಾರ್ಯಾರು?

ಮಾಳವಿಕಾ ಹೆಸರು ಹೇಳಿದವರು ಯಾರ್ಯಾರು?

ಗಾಯಕಿ ಚೈತ್ರ, ಓಂ ಪ್ರಕಾಶ್ ರಾವ್, ಸಂಜನಾ, ಶೀತಲ್ ಶೆಟ್ಟಿ, ನಿರಂಜನ್ ದೇಶಪಾಂಡೆ, ಕಾರುಣ್ಯ ರಾಮ್ ಸೇರಿದಂತೆ ಒಟ್ಟು ಏಳು ಮಂದಿ ನಟಿ ಮಾಳವಿಕಾ ಅವಿನಾಶ್ ವಿರುದ್ಧ ವೋಟ್ ಮಾಡಿದ್ದಾರೆ.

ಸ್ವತಃ ಮೋಹನ್ ಗೆ ಸರ್ ಪ್ರೈಸ್.!

ಸ್ವತಃ ಮೋಹನ್ ಗೆ ಸರ್ ಪ್ರೈಸ್.!

ತುಂಬಾ ಸೇಫ್ ಆಗಿ ಆಟ ಆಡುತ್ತಿರುವ ಮೋಹನ್, ಈ ವಾರ ನಾಮಿನೇಟ್ ಆಗುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಸ್ವತಃ ಮೋಹನ್ ರವರಿಗೂ ಇದು ಆಶ್ಚರ್ಯಕರ ಸಂಗತಿ.

ಮೋಹನ್ ವಿರುದ್ಧ 3 ವೋಟ್ಸ್

ಮೋಹನ್ ವಿರುದ್ಧ 3 ವೋಟ್ಸ್

ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ ಮತ್ತು ರೇಖಾ...ಮೋಹನ್ ರನ್ನ ನಾಮಿನೇಟ್ ಮಾಡಿದ್ದಾರೆ.

ಓಂ ಪ್ರಕಾಶ್ ರಾವ್ ಗೂ 3 ಮತ

ಓಂ ಪ್ರಕಾಶ್ ರಾವ್ ಗೂ 3 ಮತ

ನಿರ್ದೇಶಕ ಓಂ ಪ್ರಕಾಶ್ ರಾವ್ ರವರ ವಿರುದ್ಧ ಕೀರ್ತಿ, ಮಾಳವಿಕಾ ಮತ್ತು ಪ್ರಥಮ್ ಮತ ಹಾಕಿದ್ದರಿಂದ, ಅವರೂ ಕೂಡ ನಾಮಿನೇಟ್ ಆಗಿದ್ದಾರೆ. [ಓಂ ಪ್ರಕಾಶ್ ರಾವ್ ಮುಂಗೋಪಿ: ತಲೆ ಕೆಟ್ಟರೆ, ಒದೆ ಗ್ಯಾರೆಂಟಿ.!]

ಈ ಬಾರಿ ಕೂಡ ಪ್ರಥಮ್ ಫಿಕ್ಸ್

ಈ ಬಾರಿ ಕೂಡ ಪ್ರಥಮ್ ಫಿಕ್ಸ್

'ಬಿಗ್ ಬಾಸ್' ಮನೆಯಿಂದ ಹೊರಹೋಗಲು ಮೊದಲ ವಾರದಿಂದ ಸತತವಾಗಿ ಪ್ರಥಮ್ ನಾಮಿನೇಟ್ ಆಗುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಮಿಸ್ ಆಗಿಲ್ಲ. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಸಂಜನಾರದ್ದೂ ಸೇಮ್ ಕಥೆ

ಸಂಜನಾರದ್ದೂ ಸೇಮ್ ಕಥೆ

ಸತತವಾಗಿ ಮೂರನೇ ವಾರವೂ ನಾಮಿನೇಷನ್ ಲಿಸ್ಟ್ ನಲ್ಲಿ ಸಂಜನಾ ಇದ್ದಾರೆ.

ಹೊಸ ಎಂಟ್ರಿ ಕೊಟ್ಟ ಚೈತ್ರ

ಹೊಸ ಎಂಟ್ರಿ ಕೊಟ್ಟ ಚೈತ್ರ

ಚೈತ್ರ ಹೆಸರನ್ನ ಸಂಜನಾ ಮತ್ತು ಭುವನ್ ಹೇಳಿದ ಕಾರಣ...ಚೈತ್ರ ಕೂಡ ಈ ವಾರ ಎಲಿಮಿನೇಷನ್ ಭಯ ಎದುರಿಸಬೇಕು.

ಒಂದು ವೋಟ್ ಪಡೆದವರು...

ಒಂದು ವೋಟ್ ಪಡೆದವರು...

ನಟಿ ಕಾರುಣ್ಯ ರಾಮ್ ಮತ್ತು ನಿರಂಜನ್ ದೇಶಪಾಂಡೆ ಕೇವಲ ಒಂದು ವೋಟ್ ಪಡೆದ ಕಾರಣ ಸೇಫ್ ಆದರು.

ಏಳು ಜನರ ಭವಿಷ್ಯ ನಿಮ್ಮ ಕೈಯಲ್ಲಿದೆ

ಏಳು ಜನರ ಭವಿಷ್ಯ ನಿಮ್ಮ ಕೈಯಲ್ಲಿದೆ

ಮಾಳವಿಕಾ ಅವಿನಾಶ್, ಪ್ರಥಮ್, ಚೈತ್ರ, ಸಂಜನಾ, ಕೀರ್ತಿ, ಮೋಹನ್ ಮತ್ತು ಓಂ ಪ್ರಕಾಶ್ ರಾವ್...ಈ ಏಳು ಜನರ ಭವಿಷ್ಯ ಈಗ ನೀವು ಮಾಡುವ ಎಸ್.ಎಂ.ಎಸ್ ಮೇಲೆ ಅವಲಂಬಿತವಾಗಿದೆ.

ಯಾರು ಔಟ್ ಆಗಬೇಕು?

ಯಾರು ಔಟ್ ಆಗಬೇಕು?

ಮಾಳವಿಕಾ ಅವಿನಾಶ್, ಪ್ರಥಮ್, ಚೈತ್ರ, ಸಂಜನಾ, ಕೀರ್ತಿ, ಮೋಹನ್ ಮತ್ತು ಓಂ ಪ್ರಕಾಶ್ ರಾವ್...ಈ ಏಳು ಜನರ ಪೈಕಿ 'ಬಿಗ್ ಬಾಸ್' ಮನೆಯಿಂದ ಯಾರನ್ನ ಹೊರಹಾಕಲು ನೀವು ಬಯಸುತ್ತೀರಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

More from Filmibeat

English summary
Bigg Boss Kannada 4, Week 3 : Director Om Prakash Rao, Mohan, Pratham, Sanjana, Keerthi Kumar, Malavika Avinash and Chaitra are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X