'ಬಿಗ್ ಬಾಸ್ ಕನ್ನಡ-4': ಎಲಿಮಿನೇಟ್ ಆದ್ರಾ ಕಾವ್ಯ ಶಾಸ್ತ್ರಿ.?
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನಟಿ ಕಾವ್ಯ ಶಾಸ್ತ್ರಿ ಔಟ್ ಆಗಿದ್ದಾರಂತೆ. ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ 'ದೊಡ್ಮನೆ'ಯಿಂದ ಕಾವ್ಯ ಶಾಸ್ತ್ರಿ ನಿರ್ಗಮಿಸಿದ್ದಾರೆ.
ಕೆಲವೇ ನಿಮಿಷಗಳ ಹಿಂದೆಯಷ್ಟೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಶೂಟಿಂಗ್ ಮುಗಿಯಿತು. ಅದರಲ್ಲಿ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯತಿ ನಡೆಸಿದ ಬಳಿಕ ಆಂಕರ್ ಕಮ್ ನಟಿ ಕಾವ್ಯ ಶಾಸ್ತ್ರಿ ರವರನ್ನ ಹೊರಗಡೆ ಕರೆದಿದ್ದಾರೆ ಎನ್ನಲಾಗಿದೆ.

ಪ್ರಥಮ್, ಭುವನ್ ಪೊನ್ನಣ್ಣ, ರೇಖಾ ಮತ್ತು ಓಂ ಪ್ರಕಾಶ್ ರಾವ್....ಕಾವ್ಯ ವಿರುದ್ಧ ವೋಟ್ ಮಾಡಿದ್ದರಿಂದ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕಾವ್ಯ ಶಾಸ್ತ್ರಿ ನಾಮಿನೇಟ್ ಆಗಿದ್ದರು.
ಕಾವ್ಯ ಶಾಸ್ತ್ರಿ ಜೊತೆಗೆ ಪ್ರಥಮ್, ಓಂ ಪ್ರಕಾಶ್ ರಾವ್ ಮತ್ತು ನಿರಂಜನ್ ನಾಮಿನೇಟ್ ಆಗಿದ್ದರು. ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಕಾವ್ಯ ಶಾಸ್ತಿ ಹೊರಬಿದ್ದಿದ್ದಾರೆ ಅಂತ ಹೇಳಲಾಗಿದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.
More from Filmibeat
English summary
BBK4, WEEK 5: According to Colors Kannada Sources, Kannada Actress Kavya Shastry is eliminated from Bigg Boss Kannada 4 this Week.
bigg boss kannada 4 bigg boss reality show colors channel tv sudeep ಬಿಗ್ ಬಾಸ್ ಕನ್ನಡ 4 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಸುದೀಪ್


Click it and Unblock the Notifications











