'ಮಾರಿ ಹಬ್ಬ' ಶುರು: ಮಾಳವಿಕಾ, ಮೋಹನ್ ಟಾರ್ಗೆಟ್ ಆದರು.!

By Harshitha

ಒಂದು ವಾರ ಸೀಕ್ರೆಟ್ ರೂಮ್ ನಲ್ಲಿದ್ದು, ಯಾರ್ಯಾರು ಹೇಗ್ಹೇಗೆ... ಯಾರ್ಯಾರ ಬಗ್ಗೆ ಏನೆಲ್ಲ ಮಾತುಗಳು ಕೇಳಿಬರುತ್ತಿವೆ ಅಂತ ನಟಿ ಶಾಲಿನಿ ಹಾಗೂ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಡೀಟೇಲ್ ಆಗಿ ಸ್ಟಡಿ ಮಾಡಿದ ಬಳಿಕ 'ಬಿಗ್ ಬಾಸ್' ಮನೆಗೆ ರೀಎಂಟ್ರಿ ಕೊಟ್ಟಿದ್ದಾರೆ.

ಯಾರ್ಯಾರು ಹೇಗ್ಹೇಗೆ ಅಂತ ಈಗಾಗಲೇ ಕೀರ್ತಿ ಕುಮಾರ್ ಮತ್ತು ನಿರಂಜನ್ ದೇಶಪಾಂಡೆ ಜೊತೆ ಶೀತಲ್ ಶೆಟ್ಟಿ ಹಾಗೂ ಶಾಲಿನಿ ಡಿಸ್ಕಷನ್ ಕೂಡ ಮಾಡಿದ್ದಾಗಿದೆ. ಅದರ ಪರಿಣಾಮ, ಈ ವಾರ ಮೇನ್ ಟಾರ್ಗೆಟ್ ಆಗಿರುವವರು ನಟಿ ಮಾಳವಿಕಾ ಅವಿನಾಶ್ ಮತ್ತು ಮೋಹನ್.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 36ನೇ ದಿನ ನಡೆದ ನಾಮಿನೇಷನ್ ಪ್ರಕ್ರಿಯೆಯ ಸಂಪೂರ್ಣ ವರದಿ ಇಲ್ಲಿದೆ ಓದಿರಿ....

ನಿರಂಜನ್ ದೇಶಪಾಂಡೆ ಸೇಫ್

ನಿರಂಜನ್ ದೇಶಪಾಂಡೆ ಸೇಫ್

'ಬಿಗ್ ಬಾಸ್' ಮನೆಯ ಈ ವಾರದ ಕ್ಯಾಪ್ಟನ್ ಆದ ಕಾರಣ ಆರ್.ಜೆ ನಿರಂಜನ್ ದೇಶಪಾಂಡೆ ಬಗ್ಗೆ ಯಾರೂ ಕೆಮ್ಮಂಗಿರಲಿಲ್ಲ. ['ಬಿಗ್ ಬಾಸ್' ಮನೆಗೆ ನಟಿ ಶಾಲಿನಿ, ಶೀತಲ್ ಶೆಟ್ಟಿ ರೀಎಂಟ್ರಿ.!]

ಇಮ್ಯೂನಿಟಿ ಪಡೆದವರು

ಇಮ್ಯೂನಿಟಿ ಪಡೆದವರು

ಕಳೆದ ವಾರದ ಟಾಸ್ಕ್ ವಿಜೇತರಾಗಿದ್ದ ಕೀರ್ತಿ ಕುಮಾರ್, ಓಂ ಪ್ರಕಾಶ್ ರಾವ್, ರೇಖಾ ಮತ್ತು ಸಂಜನಾ ಈ ವಾರ ಎಲಿಮಿನೇಷನ್ ನಿಂದ ಸೇಫ್ ಆಗಿದ್ದರು. [ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ']

ಮೊದಲನೇ ಬಾರಿ ನಾಮಿನೇಟ್ ಆಗಿರುವ ಕಾರುಣ್ಯ ರಾಮ್

ಮೊದಲನೇ ಬಾರಿ ನಾಮಿನೇಟ್ ಆಗಿರುವ ಕಾರುಣ್ಯ ರಾಮ್

ಆರು ವಾರಗಳಲ್ಲಿ ಇದೇ ಮೊದಲ ಬಾರಿಗೆ ನಟಿ ಕಾರುಣ್ಯ ರಾಮ್ ನಾಮಿನೇಟ್ ಆಗಿದ್ದಾರೆ.

ಕಾರುಣ್ಯ ರಾಮ್ ರನ್ನ ನಾಮಿನೇಟ್ ಮಾಡಿದವರು...

ಕಾರುಣ್ಯ ರಾಮ್ ರನ್ನ ನಾಮಿನೇಟ್ ಮಾಡಿದವರು...

ನಟಿ ಮಾಳವಿಕಾ ಅವಿನಾಶ್, ಸಂಜನಾ, ಓಂ ಪ್ರಕಾಶ್ ರಾವ್, ಶಾಲಿನಿ, ಭುವನ್ ಮತ್ತು ಪ್ರಥಮ್...ಕಾರುಣ್ಯ ರಾಮ್ ರವರನ್ನ ನಾಮಿನೇಟ್ ಮಾಡಿದರು.

ಮಾಳವಿಕಾ ವಿರುದ್ಧ ಆರು ವೋಟ್ ಗಳು.!

ಮಾಳವಿಕಾ ವಿರುದ್ಧ ಆರು ವೋಟ್ ಗಳು.!

ಸಂಜನಾ, ರೇಖಾ, ಮೋಹನ್, ಓಂ ಪ್ರಕಾಶ್ ರಾವ್, ಕೀರ್ತಿ ಮತ್ತು ಶೀತಲ್ ಶೆಟ್ಟಿ....ಒಟ್ಟು ಆರು ಮಂದಿ ಹೆಸರು ಸೂಚಿಸಿದ ಕಾರಣ ನಟಿ ಮಾಳವಿಕಾ ಅವಿನಾಶ್ ಗೆ ಎಲಿಮಿನೇಷನ್ ಬಿಸಿ ತಟ್ಟಿದೆ.

ಡೇಂಜರ್ ಝೋನ್ ನಲ್ಲಿ ಮೋಹನ್

ಡೇಂಜರ್ ಝೋನ್ ನಲ್ಲಿ ಮೋಹನ್

ಮಾಳವಿಕಾ ಅವಿನಾಶ್, ರೇಖಾ, ಶಾಲಿನಿ, ಕೀರ್ತಿ, ಶೀತಲ್ ಶೆಟ್ಟಿ...ನಟ ಮೋಹನ್ ರವರನ್ನ ನಾಮಿನೇಟ್ ಮಾಡಿದರು.

ಭುವನ್ ಗೆ ಎರಡೇ ವೋಟ್ ಗಳು

ಭುವನ್ ಗೆ ಎರಡೇ ವೋಟ್ ಗಳು

ಭುವನ್ ಪೊನ್ನಣ್ಣ ವಿರುದ್ಧ ಮೋಹನ್ ಮತ್ತು ಪ್ರಥಮ್ ಮಾತ್ರ ವೋಟ್ ಮಾಡಿದರು. ಹೀಗಿದ್ದರೂ, ಭುವನ್ ಪೊನ್ನಣ್ಣ ನಾಮಿನೇಟ್ ಆಗಿದ್ದಾರೆ.

ಪ್ರಥಮ್ ಗೆ ಒಂದೇ ವೋಟ್.!

ಪ್ರಥಮ್ ಗೆ ಒಂದೇ ವೋಟ್.!

ಭುವನ್ ಮಾತ್ರ ಪ್ರಥಮ್ ಹೆಸರನ್ನು ಸೂಚಿಸಿದ ಕಾರಣ ಪ್ರಥಮ್ ನಾಮಿನೇಟ್ ಆಗಲಿಲ್ಲ.

ನಿರಂಜನ್ ದೇಶಪಾಂಡೆ ಬಿಡಲಿಲ್ಲ.!

ನಿರಂಜನ್ ದೇಶಪಾಂಡೆ ಬಿಡಲಿಲ್ಲ.!

'ಬಿಗ್ ಬಾಸ್' ಮನೆ ಸದಸ್ಯರಿಂದ 'ಒಳ್ಳೆ ಹುಡುಗ' ಅಂತ ಕರೆಯಿಸಿಕೊಂಡಿದ್ದರೂ, ಈ ವಾರ ಪ್ರಥಮ್ ರನ್ನ 'ಕ್ಯಾಪ್ಟನ್' ನಿರಂಜನ್ ದೇಶಪಾಂಡೆ ನೇರವಾಗಿ ಮಾಡಿದರು.

ಸತತ ಆರನೇ ಬಾರಿ.!

ಸತತ ಆರನೇ ಬಾರಿ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಆರು ವಾರಗಳ ಜರ್ನಿಯಲ್ಲಿ ಸತತ ಆರನೇ ಬಾರಿ ನಾಮಿನೇಟ್ ಆಗಿರುವ ಏಕೈಕ ಸ್ಪರ್ಧಿ ಪ್ರಥಮ್.

ಒಂದು ವೋಟ್ ನಲ್ಲಿ ಮಿಸ್ ಆದವರು.!

ಒಂದು ವೋಟ್ ನಲ್ಲಿ ಮಿಸ್ ಆದವರು.!

ನಟಿ ಶಾಲಿನಿ ಹಾಗೂ ಶೀತಲ್ ಶೆಟ್ಟಿ ವಿರುದ್ಧ ತಲಾ ಒಂದು ವೋಟ್ ಬಿದ್ದಿತ್ತು. ಇಬ್ಬರ ಪೈಕಿ ಯಾರಿಗಾದರೂ ಒಂದು ವೋಟ್ ಎಕ್ಸ್ ಟ್ರಾ ಬಿದ್ದಿದ್ದರೂ, ಡೇಂಜರ್ ಝೋನ್ ಗ್ಯಾರೆಂಟಿ ಇತ್ತು. ಆದ್ರೆ ಅಷ್ಟರಲ್ಲೇ ಮಿಸ್ ಆದರು.

ಈ ಐವರ ಭವಿಷ್ಯ ನಿಮ್ಮ ಕೈಯಲ್ಲಿದೆ

ಈ ಐವರ ಭವಿಷ್ಯ ನಿಮ್ಮ ಕೈಯಲ್ಲಿದೆ

ಮಾಳವಿಕಾ ಅವಿನಾಶ್, ಮೋಹನ್, ಕಾರುಣ್ಯ ರಾಮ್, ಭುವನ್ ಪೊನ್ನಣ್ಣ ಮತ್ತು ಪ್ರಥಮ್...ಈ ಐವರ ಭವಿಷ್ಯ ನೀವು ಹಾಕುವ ಎಸ್.ಎಂ.ಎಸ್ ಮೇಲೆ ಅವಲಂಬಿತವಾಗಿದೆ.

ನಿಮ್ಮ ವೋಟ್ ಯಾರಿಗೆ?

ನಿಮ್ಮ ವೋಟ್ ಯಾರಿಗೆ?

ಮಾಳವಿಕಾ ಅವಿನಾಶ್, ಮೋಹನ್, ಕಾರುಣ್ಯ ರಾಮ್, ಭುವನ್ ಪೊನ್ನಣ್ಣ ಮತ್ತು ಪ್ರಥಮ್...ಈ ಐವರ ಪೈಕಿ ನಿಮ್ಮ ಮತ ಯಾರಿಗೆ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ....

More from Filmibeat

English summary
Bigg Boss Kannada 4, Week 6 : Director Pratham, Malavika Avinash, Mohan, Bhuvan Ponnanna and Karunya Ram are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X