ಇವರೆಲ್ಲ 'ಬಿಗ್ ಬಾಸ್' ಯಾಕೆ ಗೆಲ್ಲಬೇಕು.? ಅರ್ಹತೆ ಏನಿದೆ.?

By Harshitha

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲು ಇನ್ನೊಂದೇ ದಿನ ಬಾಕಿ ಇದೆ. ಈಗಿರುವ ಐದು ಫೈನಲಿಸ್ಟ್ ಗಳ ಪೈಕಿ ಯಾರೇ ಗೆಲ್ಲಬೇಕಾದರೂ, ವೀಕ್ಷಕರ ಬೆಂಬಲ ಅತಿ ಮುಖ್ಯ. ಹೀಗಾಗಿ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು ವಿಶೇಷ ಅವಕಾಶ ನೀಡಿದ್ದರು.['ಬಿಗ್ ಬಾಸ್' ಗೆಲ್ಲುವ ಅರ್ಹತೆ ಯಾರಿಗಿದೆ.? ಓದುಗರೇ.. ನೀವೇ ಮತ ಹಾಕಿ, ಗೆಲ್ಲಿಸಿ..!]

'ತಾವು ಯಾಕೆ ವಿಜೇತರಾಗಬೇಕು.? ತಮ್ಮಲ್ಲಿರುವ ಗುಣ ಲಕ್ಷಣಗಳೇನು.? ಪ್ರಶಸ್ತಿ ಗೆಲ್ಲಲು ಯಾಕೆ ಅರ್ಹರು.? ಎಂಬುದನ್ನು ವಿವರಿಸಲು ಸ್ಪರ್ಧಿಗಳಿಗೆ 'ಬಿಗ್ ಬಾಸ್' ಚಾನ್ಸ್ ಕೊಟ್ಟಿದ್ದರು. ಆಗ ಸ್ಪರ್ಧಿಗಳು ಮಾಡಿದ ಭಾಷಣದ ಆಯ್ದ ಭಾಗ ಇಲ್ಲಿದೆ ಓದಿರಿ...

ನಟಿ ರೇಖಾ ಏನಂದರು.?

ನಟಿ ರೇಖಾ ಏನಂದರು.?

''ಇಂಗ್ಲೀಷ್ ನಲ್ಲಿ ಒಂದು ಫ್ರೇಸ್ ಇದೆ. Self Praise is Donkey's Praise ಅಂತ. ನಾನು.. ನಾನು ಅನ್ನೋದು ನನ್ನಲ್ಲಿ ಸ್ವಲ್ಪ ಕಮ್ಮಿ ಇದೆ. That is my Biggest Strenght ಅಂತ ನಾನು ಒಪ್ಪಿಕೊಳ್ಳುತ್ತೇನೆ. ಟ್ರೋಫಿನ ನಾನು ಯಾಕೆ ಗೆಲ್ಲಬೇಕು ಅಂದ್ರೆ, ಅದೇ ದೊಡ್ಡ ಕಾರಣ. People Management, Situational Management ನಲ್ಲಿ ನನಗೆ ಗೊತ್ತಿರುವುದನ್ನು ಮಾಡಿದ್ದೇನೆ. ಇಲ್ಲಿ ಬಂದು ನಾನು ತುಂಬಾ ಕಲಿತಿದ್ದೇನೆ. ತಾಳ್ಮೆ ಮತ್ತು ಸಹನೆ ಇಲ್ಲ ಅಂದ್ರೆ, ಎಲ್ಲರೂ ಎಲ್ಲ ಸಂದರ್ಭದಲ್ಲೂ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತೆ. ಇಷ್ಟು ದಿನ ನನ್ನನ್ನ ಕರ್ಕೊಂಡ್ ಬಂದಿದ್ದೀರಾ. ಇನ್ಮುಂದೆ ಕೂಡ ಕೈಹಿಡಿಯುತ್ತೀರಾ ಅಂತ ಅನ್ಸುತ್ತೆ'' - ನಟಿ ರೇಖಾ ['ಬಿಗ್ ಬಾಸ್' ಸ್ಪರ್ಧಿಗಳ 'ಮುಖವಾಡ' ಕಳಚಿದ ವೀಕ್ಷಕ ಮಹಾಪ್ರಭುಗಳು.!]

ಮೋಹನ್ ಭಾಷಣ ಹೇಗಿತ್ತು.?

ಮೋಹನ್ ಭಾಷಣ ಹೇಗಿತ್ತು.?

''ಗೆಲುವನ್ನು ಪಡೆದುಕೊಳ್ಳುವುದು ಅಷ್ಟೇ ಅಲ್ಲ, ಗೆಲುವನ್ನ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟೆ. ಜನ ಗೆಲುವನ್ನು ಕೊಟ್ಟರು. 20 ವರ್ಷ ಆದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಬಿಜಿ ಇದ್ದೀನಿ. ಸಕ್ಸಸ್ ಕಾಪಾಡಿಕೊಳ್ಳುವ ಮೆಚ್ಯೂರಿಟಿ ನನಗೆ ಇದೆ. ನನಗೆ ಲೀಡರ್ ಶಿಪ್ ಕ್ವಾಲಿಟಿ ಇದೆ. ನಾಮಿನೇಷನ್ ನಲ್ಲಿ ಕೂತಾಗಲೆಲ್ಲ ಜನ ನನ್ನ ಮೆಚ್ಚಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ಐದು ಜನ ಪ್ರತಿಭಾವಂತರು. ಯಾರು ಗೆದ್ದರೂ, ಇನ್ನೊಬ್ಬರಿಗೆ ಜೆಲಸಿ ಬರಲ್ಲ. ಎಲ್ಲೋ ಒಂದು ಕಡೆ ಗೆಲ್ಲಬೇಕು ಎಂಬ ಆಸೆ ನನಗಿದೆ. ಯಾಕಂದ್ರೆ ನನ್ನ ಜೀವನದ ಅತ್ಯಂತ ಹಿತಕರ, ಕಷ್ಟಕರ, ವಿಶೇಷವಾದ ಜರ್ನಿ ಇದು. ಗೆಲ್ಲುವ ಯೋಗ್ಯತೆ ನನಗಿದ್ದರೆ, ದಯವಿಟ್ಟು ನನ್ನ ಕೈಹಿಡಿದು ಗೆಲ್ಲಿಸಿ'' - ಮೋಹನ್ [ನಟಿ ಮಾಳವಿಕಾ ಕಂಡ್ರೆ ಮೋಹನ್ ಗೆ ಹೊಟ್ಟೆಕಿಚ್ಚಾ.?]

ಮಾಳವಿಕಾ ರವರಿಗೆ ಅರ್ಹತೆ ಏನಿದೆ.?

ಮಾಳವಿಕಾ ರವರಿಗೆ ಅರ್ಹತೆ ಏನಿದೆ.?

''ಪ್ರತಿಭೆ ಅನ್ನೋದು ಎಲ್ಲರಲ್ಲೂ ಇದೆ. ಪ್ರಾರಂಭದ ದಿನಗಳಲ್ಲಿ ನನಗೆ ಎಷ್ಟು ಹಿಂಜರಿಕೆ ಇತ್ತೋ, ಅಷ್ಟೇ ಹಿಂಜರಿಕೆ ಬೇರೆಯವರಿಗೂ ಇತ್ತು ಅಂತ ಕಾಣುತ್ತೆ ನನ್ನ ಜೊತೆ ಬೆರೆಯುವುದಕ್ಕೆ. ಜನರ ಮಟ್ಟಿಗೆ.. ಹಲವು ಬಾರಿ ನಾಮಿನೇಟ್ ಆಗಿದ್ದರೂ ಕೂಡ ನನ್ನನ್ನ ಸೇಫ್ ಮಾಡಿದ್ದಾರೆ. ಸಾಮಾನ್ಯವಾಗಿ ನಾನು ಮತಯಾಚನೆ ಮಾಡಿರುವುದು ರಾಜಕೀಯ ಪಕ್ಷಕ್ಕೆ. ಇಲ್ಲಿ ಜನ ನನ್ನನ್ನ 11 ಬಾರಿ ಗೆಲ್ಲಿಸಿದ್ದಾರೆ. ಗೆಲುವು ಮತ್ತೆ ಜನರ ಕೈಯಲ್ಲಿ ಇದೆ. ನಾನು ಅರ್ಹಳು, ಅದು ನಿಮಗೂ ಅನಿಸಲಿ ಅನ್ನೋದು ನನ್ನ ಆಶಯ. ಸಮರ್ಥರ ಗೆಲುವಾಗಲಿ...'' - ಮಾಳವಿಕಾ ಅವಿನಾಶ್

ಕೀರ್ತಿ ಬಾಯಿಂದ ಬಂದ ಮಾತುಗಳೇನು.?

ಕೀರ್ತಿ ಬಾಯಿಂದ ಬಂದ ಮಾತುಗಳೇನು.?

''ಫೈನಲಿಸ್ಟ್ ಗಳ ಹೆಸರಲ್ಲಿ ನನ್ನ ಹೆಸರಿದೆ ಅನ್ನೋದನ್ನೇ ನಾನು ನನ್ನ ಗೆಲುವು ಅಂತ ಭಾವಿಸುತ್ತೇನೆ. ಇಲ್ಲಿ ತುಂಬ ಇಷ್ಟಪಟ್ಟು, ಕಷ್ಟಪಟ್ಟು ಆಡಿದ್ದೇನೆ. ಇಲ್ಲಿ ತುಂಬಾ ಕಡಿಮೆ ಬಾರಿ ನಾಮಿನೇಟ್ ಆಗಿರುವವನು ನಾನು. ನನಗೆ ಈ ಹಂತಕ್ಕೆ ತಂದು ನಿಲ್ಲಿಸಿದ್ದೀರಾ, ಟ್ರೋಫಿ ಗೆಲ್ಲುವುದಕ್ಕೂ ಅರ್ಹ ಎನ್ನುವುದಾದರೆ ನನಗೆ ಆಶೀರ್ವದಿಸಿ..'' - 'ಕಿರಿಕ್' ಕೀರ್ತಿ

ಪ್ರಥಮ್ ಹೇಳಿದ್ದಿಷ್ಟು....

ಪ್ರಥಮ್ ಹೇಳಿದ್ದಿಷ್ಟು....

''ಎಲ್ಲ ಕರ್ನಾಟಕದ ಮಹಾಜನತೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಈ 18 ಜನರಲ್ಲಿ ನಾನು ಮತ್ತು ಇನ್ನೊಂದಿಬ್ಬರು ಹೊಸಬರು. ಒಳಗಡೆ ಬಂದಾಗ ಒಂದೇ ವಾರಕ್ಕೆ ಹೊರಗೆ ಹೋಗ್ತೀನಾ ಅಂತ ನನ್ನ ತಲೆಯಲ್ಲಿ ಇತ್ತು. 14 ಬಾರಿ ಸತತವಾಗಿ ನನಗೆ ಜನಾದೇಶ ನೀಡಿದ್ದಾರೆ. ನಿಜವಾಗ್ಲೂ ಗೆಲ್ತೀನಿ ಅಂತ ಆಸೆ ನನಗೆ ಇರಲಿಲ್ಲ. 8ನೇ ವಾರಕ್ಕೆ ಹೋಗ್ತೀನಿ ಅಂತ ಅಂದುಕೊಂಡಿದ್ದೆ. ಅದರಲ್ಲಿ ಇಷ್ಟು ವಾರ ನನ್ನನ್ನ ಉಳಿಸಿದ್ದೀರಾ. ಅದು ಬಹಳ ದೊಡ್ಡದು. ಏನೂ ಅಲ್ಲದ ಸಾಮಾನ್ಯ ಹುಡುಗ ನಾನು. ಈ ಮನೆಯಲ್ಲಿ ಕ್ಯಾಪ್ಟನ್ ಆದೆ, ಡಿಕ್ಟೇಟರ್ ಇದೆ. ಈ ಮನೆಯಿಂದ ನನಗೆ ಅಪ್ಪ-ಅಮ್ಮ ಸಿಕ್ಕಿರುವುದು ಎಷ್ಟು ನಿಜವೋ, ಇಲ್ಲಿ ನನಗೆ ನನ್ನದೇ ಆದ ಕುಟುಂಬ ಸಿಕ್ಕಿರುವುದು ಕೂಡ ಅಷ್ಟೇ ನಿಜ. ಫೈನಲಿಸ್ಟ್ ಆಗಿರುವುದು ಕೂಡ ಅಷ್ಟೇ ಹೆಮ್ಮೆ. ಇಷ್ಟು ದಿನ ಕೈ ಹಿಡಿದವರಿಗೆ ಇನ್ನೊಂದು ದಿನ ಕೈಹಿಡಿಯಲ್ವಾ.?'' - ಪ್ರಥಮ್ [ಪ್ರಥಮ್ 'ದೇವ್ರಾಣೆ' ಇರೋದೇ ಹೀಗೆ.. 'ಚಾಲೆಂಜ್' ಮಾಡ್ತೀವಿ..!]

More from Filmibeat

English summary
Bigg Boss Kannada 4: Who deserves to Win the show.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X