»   » ವಿಡಿಯೋ : 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಎರಡನೇ ಪ್ರೋಮೋ ನೋಡಿ

ವಿಡಿಯೋ : 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಎರಡನೇ ಪ್ರೋಮೋ ನೋಡಿ

Posted By:
Subscribe to Filmibeat Kannada

'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಎರಡನೇ ಪ್ರೋಮೋ ಇದೀಗ ಬಿಡುಗಡೆಯಾಗಿದೆ. ಕಾರ್ಯಕ್ರಮದ ಪ್ರೋಮೋವನ್ನು ಸ್ವತಃ ನಟ ಹಾಗೂ ಕಾರ್ಯಕ್ರಮದ ನಿರೂಪಕರಾದ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತರಕಾರಿ ಮಾರುಕಟ್ಟೆ ರೀತಿಯ ಸೆಟ್ ಹಾಕಿ ಪ್ರೋಮೋವನ್ನು ಶೂಟಿಂಗ್ ಮಾಡಲಾಗಿದೆ. ಎಂದಿನಂತೆ ಕಿಚ್ಚ ಇಲ್ಲಿ ತಮ್ಮ ಸ್ಟೈಲಿಶ್ ಲುಕ್ ನೊಂದಿಗೆ ಗಮನ ಸೆಳೆದಿದ್ದಾರೆ.

'Bigg Boss kannada 5' 2nd Promo Released

ಪ್ರೋಮೋದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವ ದಿನಾಂಕವನ್ನು ಬಹಿರಂಗ ಪಡಿಸಲಾಗಿದ್ದು, ಇದೇ ಅಕ್ಟೋಬರ್ 15 ರಿಂದ ಸಂಜೆ 8 ಗಂಟೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ.

'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮ ಸಿಕ್ಕಾಪಟ್ಟೆ ವಿಶೇಷತೆಗಳನ್ನು ಹೊಂದಿದೆ. ಈ ಬಾರಿಯ 'ಬಿಗ್ ಬಾಸ್‌' ನಲ್ಲಿ ಫಿಪ್ಟಿ-ಫಿಪ್ಟಿ ನಿಯಮವನ್ನು ಜಾರಿಗೆ ತಂದಿದ್ದಾರೆ. ಅಂದರೆ 'ಬಿಗ್ ಬಾಸ್' ಸ್ಪರ್ಧಿಗಳ ಪೈಕಿ ಅರ್ಧದಷ್ಟು ಸೆಲೆಬ್ರಿಟಿಗಳು ಇದ್ದರೇ, ಇನ್ನು ಅರ್ಧ ಭಾಗ ಸಾಮಾನ್ಯ ಜನರು ಇರಲಿದ್ದಾರೆ.

English summary
Watch Video: 'Bigg boss kannada season 5' 2nd Promo Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X