ಆತ್ಮಹತ್ಯೆಗೆ ಯತ್ನಿಸಿದ್ದ ಅನುಪಮಾ: ದೊಡ್ಡ ರಹಸ್ಯ ಬಯಲು ಮಾಡಿದ 'ಅಕ್ಕ'.!

By Harshitha

Recommended Video

ಅನುಪಮಾ ಗೌಡ ಬಾಯ್ಬಿಟ್ಟ ತನ್ನ ಜೀವನದ ದೊಡ್ಡ ರಹಸ್ಯ | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಅಕ್ಕ' ಧಾರಾವಾಹಿ ಮೂಲಕ ಗುರುತಿಸಿಕೊಂಡ ಕಿರುತೆರೆ ನಟಿ ಅನುಪಮಾ ಗೌಡ ಇದೀಗ ಕರುನಾಡ ಮನೆ ಮನಗಳಿಗೆ ಇನ್ನಷ್ಟು ಹತ್ತಿರ ಆಗಿ, ಜನಪ್ರಿಯತೆ ಗಳಿಸಿರುವುದು 'ಬಿಗ್ ಬಾಸ್' ಕಾರ್ಯಕ್ರಮದಿಂದ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲ ವಾರವೇ ಕ್ಯಾಪ್ಟನ್ ಆಗಿ, ಎಲ್ಲ ಸ್ಪರ್ಧಿಗಳಿಗೂ ಪೈಪೋಟಿ ನೀಡುತ್ತಿರುವ ಪ್ರಬಲ ಸ್ಪರ್ಧಿ ಅನುಪಮಾ ಗೌಡ.

ಆಟದಲ್ಲಿ ಚುರುಕಾಗಿರುವ ಅನುಪಮಾ ಗೌಡ, ಇದೇ 'ಬಿಗ್ ಬಾಸ್' ಮನೆಯಲ್ಲಿ ತಮ್ಮ ಲವ್ ಹಾಗೂ ಬ್ರೇಕಪ್ ಕಹಾನಿಯನ್ನ ಬಹಿರಂಗಗೊಳಿಸಿ, ಕಣ್ಣೀರು ಸುರಿಸಿದ್ದರು.

ಈಗ ಮತ್ತೊಂದು ರಹಸ್ಯವನ್ನ ನಟಿ ಅನುಪಮಾ ಗೌಡ ಬಯಲು ಮಾಡಿದ್ದಾರೆ. ಒಂದುವರೆ ವರ್ಷದ ಹಿಂದೆ ನಟಿ ಅನುಪಮಾ ಗೌಡ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆ ಘಟನೆಯನ್ನ 'ಬಿಗ್ ಬಾಸ್' ಕ್ಯಾಮರಾ ಮೂಲಕ ಇಡೀ ಕರ್ನಾಟಕದ ಜನತೆ ಮುಂದೆ ಹೇಳಿಕೊಂಡಿದ್ದಾರೆ ಅನುಪಮಾ ಗೌಡ. ಪೂರ್ತಿ ವಿವರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಆತ್ಮಹತ್ಯೆ ಘಟನೆಯನ್ನ ಅನುಪಮಾ ಬಾಯ್ಬಿಟ್ಟಿದ್ದು ಯಾಕೆ.?

ಆತ್ಮಹತ್ಯೆ ಘಟನೆಯನ್ನ ಅನುಪಮಾ ಬಾಯ್ಬಿಟ್ಟಿದ್ದು ಯಾಕೆ.?

ಒಂದುವರೆ ವರ್ಷದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಕಹಿ ಘಟನೆಯನ್ನ ಅನುಪಮಾ ಹೇಳಿಕೊಳ್ಳುವುದಕ್ಕೆ ಕಾರಣ 'ಬಿಗ್ ಬಾಸ್'. ಹೊಸ ವರ್ಷದ ಹೊಸ್ತಿಲಲ್ಲಿ ಇದ್ದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಆಗ 'ದೊಡ್ಡ ರಹಸ್ಯ'ವನ್ನ ಅನುಪಮಾ ಬಿಚ್ಚಿಡಲೇಬೇಕಾಯಿತು.

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

ಹೊಸ ವರ್ಷಕ್ಕೆ ಕಾಲಿರಿಸುವ ಶುಭ ಸಂದರ್ಭದಲ್ಲಿ ಸ್ಪರ್ಧಿಗಳು ತಮ್ಮ ಮನಸ್ಸಿನಲ್ಲಿ ಇರುವ ಯಾವುದಾದರೂ ಒಂದು ಗುಟ್ಟು, ಯಾರೊಂದಿಗೂ ಇಲ್ಲಿಯವರೆಗೂ ಹಂಚಿಕೊಂಡಿರದ ರಹಸ್ಯವೊಂದನ್ನು ಹಂಚಿಕೊಳ್ಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು.

ಕ್ಯಾಮರಾ ಮುಂದೆ ಅನುಪಮಾ ಗೌಡ ಹೇಳಿದ್ದೇನು.?

ಕ್ಯಾಮರಾ ಮುಂದೆ ಅನುಪಮಾ ಗೌಡ ಹೇಳಿದ್ದೇನು.?

''ಒಂದುವರೆ ವರ್ಷದ ಹಿಂದೆ ಕೆಲವು ಕಾರಣಗಳಿಂದಾಗಿ ತುಂಬಾ ಬೇಸರ ಆಗಿ ಬದುಕಿರಬಾರದು ಅಂತ ನಿರ್ಧಾರ ಮಾಡಿ ಟ್ಯಾಬ್ಲೆಟ್ಸ್ ತೆಗೆದುಕೊಂಡಿದ್ದೆ. ತುಂಬಾ ಹತಾಶೆಗೊಂಡಿದ್ದೆ'' ಎಂದು ತಮ್ಮ ಜೀವನದ ಕಹಿ ಘಟನೆಯನ್ನ ಅನುಪಮಾ ಬಹಿರಂಗ ಪಡಿಸಿದರು.

ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು.?

ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು.?

''ಯಾರೂ ಇಲ್ಲ, ಯಾವುದೂ ಇಲ್ಲ ಅಂತ ಅನಿಸಲು ಶುರು ಆಗಿತ್ತು. ನಾನು ತುಂಬಾ ಅಸಹಾಯಕಳಾಗಿದ್ದೆ. ಹೀಗಾಗಿ ಅಂತಹ ಒಂದು ನಿರ್ಧಾರವನ್ನ ತೆಗೆದುಕೊಂಡಿದ್ದೆ'' - ಅನುಪಮಾ ಗೌಡ

ನೇಹ ಕಂಡ್ರೆ ತುಂಬಾ ಗೌರವ ಯಾಕೆ.?

ನೇಹ ಕಂಡ್ರೆ ತುಂಬಾ ಗೌರವ ಯಾಕೆ.?

''ಪ್ರತಿ ಬಾರಿ ಎಲ್ಲೇ ಹೋದರೂ ನೇಹಳನ್ನ ನೆನಪು ಮಾಡಿಕೊಳ್ಳುತ್ತೇನೆ. ಯಾಕಂದ್ರೆ, ಅವತ್ತು ನಾನು ಆ ತರಹ ಪ್ರಯತ್ನ ಪಟ್ಟಾಗ ನನ್ನ ಜೊತೆಗೆ ಇಡೀ ದಿನ ಇದ್ದು, ಆಕೆ ನನ್ನನ್ನ ನೋಡಿಕೊಂಡರು. ನನಗೆ ಎರಡನೇ ಲೈಫ್ ಸಿಗಲು ನೇಹ ಪ್ರಮುಖ ಕಾರಣ. ಹೀಗಾಗಿ ನೇಹ ಕಂಡ್ರೆ ನನಗೆ ತುಂಬಾ ಗೌರವ ಇದೆ'' - ಅನುಪಮಾ ಗೌಡ

ನನ್ನನ್ನ ನಾನೇ ಪ್ರೀತಿಸುತ್ತೇನೆ.!

ನನ್ನನ್ನ ನಾನೇ ಪ್ರೀತಿಸುತ್ತೇನೆ.!

''ನಾನು ಈಗ ಆ ತರಹ ಇಲ್ಲ. ನಿಮಗೆ ಆ ತರಹ ಯೋಚನೆ ಬಂದಾಗ, ದಯವಿಟ್ಟು ತೆಗೆದು ಹಾಕಿ. ನನ್ನನ್ನ ನಾನೇ ಪ್ರೀತಿಸಲು ಶುರು ಮಾಡಿದ್ದೇನೆ. ಮೊದಲು ನೀವು ನಿಮ್ಮನ್ನ ಪ್ರೀತಿಸಿ. ಇದೇ ನನ್ನ ಸೀಕ್ರೆಟ್'' ಎಂದರು ಅನುಪಮಾ ಗೌಡ

More from Filmibeat

English summary
Bigg Boss Kannada 5: Week 12: Anupama Gowda reveals her biggest secret in BBK House. Anupama Gowda had attempted suicide one and a half years ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X