For Quick Alerts
  ALLOW NOTIFICATIONS  
  For Daily Alerts

  ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

  By Harshitha
  |

  'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳು.

  ವರ್ಷಗಳ ಕಾಲ ಪ್ರೇಮದ ಅಮಲಿನಲ್ಲಿ ತೇಲಾಡಿದ ಈ ಜೋಡಿಯ ಪ್ರೀತಿ ಎರಡು ವರ್ಷಗಳ ಹಿಂದಷ್ಟೇ ಮುರಿದು ಬಿದ್ದಿತ್ತು. ಕಳೆದ ಎರಡು ವರ್ಷಗಳಿಂದ ನಾನೊಂದು ತೀರಾ... ನೀನೊಂದು ತೀರಾ ಅಂತ ತಮ್ಮ ತಮ್ಮ ದಾರಿಯಲ್ಲಿ ಸಾಗುತ್ತಿದ್ದ ಅನುಪಮಾ ಗೌಡ ಹಾಗೂ ಜಗನ್ನಾಥ್ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಮುಖಾಮುಖಿ ಆಗಿದ್ದಾರೆ.

  'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

  ಮಾಜಿ ಪ್ರಿಯತಮ ಎದುರಿಗೆ ಓಡಾಡಿಕೊಂಡು ಇರುವಾಗಲೇ, ಅನುಪಮಾ ಗೌಡಗೆ ಹಳೆಯದ್ದೆಲ್ಲ ನೆನಪಾಗುತ್ತಿದೆ. ಹೃದಯ ಭಾರ ಎನಿಸುತ್ತಿದೆ. ಹಳೆಯ ನೆನಪುಗಳಿಗೆ ಜಾರುತ್ತಿರುವ ಅನುಪಮಾ ಗೌಡ ತಮ್ಮ ಪ್ರೀತಿ ಮುರಿದು ಬಿದ್ದದ್ದು ಯಾಕೆ ಎಂಬ ಸಂಗತಿಯನ್ನ ನೆನೆದು 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಮುಂದೆ ಓದಿರಿ...

  ಬ್ರೇಕಪ್ ಕಹಾನಿ ಬಿಚ್ಚಿಟ್ಟ ಅನುಪಮಾ ಗೌಡ

  ಬ್ರೇಕಪ್ ಕಹಾನಿ ಬಿಚ್ಚಿಟ್ಟ ಅನುಪಮಾ ಗೌಡ

  ಅನುಪಮಾ ಗೌಡ ರನ್ನ ಪ್ರೀತಿಸುತ್ತಿದ್ದ ಜಗನ್ನಾಥ್ 'ಮದುವೆ ಆಗುವ ಬಗ್ಗೆ' ವಿಶ್ವಾಸದಿಂದ ಎಲ್ಲೂ, ಯಾರೊಂದಿಗೂ ಹೇಳಲೇ ಇಲ್ವಂತೆ. ಹಾಗಂತ ತಮ್ಮ 'ಬ್ರೇಕಪ್ ಕಹಾನಿ' ಬಗ್ಗೆ ಅನುಪಮಾ ಗೌಡ ವಿವರಿಸಲು ಶುರು ಮಾಡಿದರು.

  ಬ್ರೇಕಪ್ ಆದ ಸಂಗತಿ ಎಲ್ಲರಿಗೂ ಗೊತ್ತಿತ್ತು.!

  ಬ್ರೇಕಪ್ ಆದ ಸಂಗತಿ ಎಲ್ಲರಿಗೂ ಗೊತ್ತಿತ್ತು.!

  ಪ್ರೀತಿ ಮುರಿದು ಬಿದ್ದಿದೆ ಎಂದು ತಾವು ಅರಗಿಸಿಕೊಳ್ಳುವ ಮುನ್ನವೇ, ಕಿರುತೆರೆ ಲೋಕದಲ್ಲಿ ತಮ್ಮ ಬ್ರೇಕಪ್ ಸಂಗತಿ ಹರಿದಾಡಿತ್ತು ಎಂದು ಅನುಪಮಾ ಗೌಡ ಹೇಳಿದ್ದಾರೆ.

  ಜಗನ್ ಜೊತೆ ಮದುವೆ ಆಗುವ ಆಸೆ ಇತ್ತು.!

  ಜಗನ್ ಜೊತೆ ಮದುವೆ ಆಗುವ ಆಸೆ ಇತ್ತು.!

  ಅಷ್ಟಕ್ಕೂ, ಜಗನ್ನಾಥ್ ರವರನ್ನ ಮದುವೆ ಆಗಬೇಕು ಎಂಬ ಆಸೆ ಅನುಪಮಾ ಗೌಡ ರವರಿಗಿತ್ತಂತೆ. ಆದ್ರೆ, ಮದುವೆ ಆಗಲು ಅನುಪಮಾ ಗೌಡ ಸ್ವಲ್ಪ ಕಾಲಾವಕಾಶ ಕೇಳಿದ್ದರಂತೆ.

  ಜವಾಬ್ದಾರಿ ಹೆಚ್ಚು ಇತ್ತು

  ಜವಾಬ್ದಾರಿ ಹೆಚ್ಚು ಇತ್ತು

  ''ಮದುವೆ ಆಗುವ ವಿಚಾರದಲ್ಲಿ ನಾನು ಟೈಮ್ ಕೇಳುತ್ತಿದ್ದೆ. ಯಾಕಂದ್ರೆ, ನಾನು ಇಂಡಸ್ಟ್ರಿ ಬಿಡಬೇಕಿತ್ತು. ನನಗೂ ಕುಟುಂಬ ಇದೆ. ನಾನೇ ದೊಡ್ಡ ಮಗಳು. ನನ್ನ ಕುಟುಂಬಕ್ಕೆ ನಾನು ಒಂದು ವ್ಯವಸ್ಥೆ ಮಾಡಿ ಮದುವೆ ಆಗಬೇಕಿತ್ತು'' ಎಂದು ಕಣ್ಣೀರು ಸುರಿಸುತ್ತಾ ತೇಜಸ್ವಿನಿ ಬಳಿ ಅನುಪಮಾ ಗೌಡ ಹೇಳಿಕೊಂಡರು.

  ಕಾರಿನ ಗ್ಲಾಸ್ ಒಡೆದು ಹಾಕಿದ್ದೆ

  ಕಾರಿನ ಗ್ಲಾಸ್ ಒಡೆದು ಹಾಕಿದ್ದೆ

  ''ಜಗನ್ ನ ಕಳೆದುಕೊಳ್ಳುತ್ತಿದ್ದೇನೆ ಎಂಬ ಸಿಟ್ಟಿನಲ್ಲಿ ಅವನ ಕಾರಿನ ಗ್ಲಾಸ್ ಹೊಡೆದು ಹಾಕಿದ್ದೆ. ಬ್ರೇಕಪ್ ಆಗಿರುವುದನ್ನ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗೆ ಕಷ್ಟ ಆಗುತ್ತಿದೆ. ಬಿಟ್ಟಿರಲು ಆಗುತ್ತಿಲ್ಲ ಅಂತ ಎಷ್ಟೋ ಬಾರಿ ಹೇಳಿದ್ದೇನೆ'' ಎಂದು ಕಣ್ಣೀರು ಹಾಕುತ್ತಾ ಅನುಪಮಾ ಗೌಡ ಹೇಳಿದರು.

  ಕಾರಣ ಇಲ್ಲದೆ ಬ್ರೇಕಪ್ ಆಗಿದೆ

  ಕಾರಣ ಇಲ್ಲದೆ ಬ್ರೇಕಪ್ ಆಗಿದೆ

  ''ಎರಡು ವರ್ಷ ಆಗಿದೆ. ಯಾವುದೇ ಕಾರಣ ಇಲ್ಲದೆ ಬ್ರೇಕಪ್ ಆಗಿದ್ದು. ನಾನಿನ್ನೂ ಅದೇ ನೋವಿನಲ್ಲಿ ಇದ್ದೇನೆ'' ಎಂದು ದುಃಖತಪ್ತರಾದರು ಅನುಪಮಾ ಗೌಡ.

  ಉಂಗುರ ಬದಲಿಸಿಕೊಂಡಿದ್ದರು

  ಉಂಗುರ ಬದಲಿಸಿಕೊಂಡಿದ್ದರು

  ಅಸಲಿಗೆ, ಪ್ರೀತಿಸುತ್ತಿರುವಾಗ... ಜಗನ್ ಹುಟ್ಟುಹಬ್ಬದಂದು ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದರಂತೆ. ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡ ಬಳಿಕ ಅದೇ ರೀತಿ ಇಬ್ಬರೂ ತಮ್ಮ ತಮ್ಮ ಕೈ ಮೇಲೆ ಒಂದೇ ರೀತಿಯ ಟಾಟ್ಯೂ ಹಾಕಿಸಿಕೊಂಡಿದ್ದರಂತೆ. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಬರುವ ಮುನ್ನ ಅನುಪಮಾ ಗೌಡ ಜೊತೆಗೆ ಹಾಕಿಸಿಕೊಂಡಿದ್ದ ಟಾಟ್ಯೂನ ಜಗನ್ ಬದಲಿಸಿಕೊಂಡಿದ್ದಾರೆ.

  ಟಾಟ್ಯೂ ಬದಲಾಗಿದೆ

  ಟಾಟ್ಯೂ ಬದಲಾಗಿದೆ

  ಜಗನ್ ಟಾಟ್ಯೂ ಬದಲಾಯಿಸಿಕೊಂಡಿರುವ ವಿಷಯ ಅನುಪಮಾ ಗೌಡಗೆ ಗೊತ್ತಿಲ್ಲ. 'ಬಿಗ್ ಬಾಸ್' ಮನೆಯೊಳಗೆ ಬಂದ ನಾಲ್ಕು ದಿನ ಆದ್ಮೇಲೆ ಟಾಟ್ಯೂ ಬದಲಾಗಿರುವ ಸಂಗತಿ ಅನುಪಮಾ ಗೌಡಗೆ ಗೊತ್ತಾಗಿದೆ.

  ಶಾಕ್ ಆಗಿದೆ

  ಶಾಕ್ ಆಗಿದೆ

  ''ಬೇರೆ ಟಾಟ್ಯೂ ನೋಡಿದ ಮೇಲೆ ಇನ್ನೂ ಬೇಜಾರಾಯ್ತು. ಇಲ್ಲಿಗೆ ಬಂದ ಮೇಲೆ ನನಗೆ ಗೊತ್ತಾಗಿದ್ದು. 'ನಾನು ಅದನ್ನ ಚೇಂಜ್ ಮಾಡಲ್ಲ. ಹಾಗೇ ಇಟ್ಟುಕೊಳ್ಳುತ್ತೇನೆ' ಅಂತ ಹೇಳಿ ಅವನೇ ಬದಲಾಗಿದ್ದಾನೆ. ಸಡನ್ ಆಗಿ ಬೇರೆ ಟಾಟ್ಯೂ ನೋಡಿ ಶಾಕ್ ಆಯ್ತು'' - ಅನುಪಮಾ ಗೌಡ

  ಇಂಡಸ್ಟ್ರಿ ಬಿಡುವ ಬಗ್ಗೆ ಅನುಪಮಾ ಮಾತು

  ಇಂಡಸ್ಟ್ರಿ ಬಿಡುವ ಬಗ್ಗೆ ಅನುಪಮಾ ಮಾತು

  ಬ್ರೇಕಪ್ ಕಹಾನಿಯನ್ನು ನೆನೆಯುತ್ತಾ ಕಿರುತೆರೆ ಲೋಕಕ್ಕೆ ಗುಡ್ ಬೈ ಹೇಳುವ ಬಗ್ಗೆ ಅನುಪಮಾ ಗೌಡ ಮಾತನಾಡಿದ್ದಾರೆ.

  ಪರಸ್ಪರ ಮಾತನಾಡುವುದಿಲ್ಲ

  ಪರಸ್ಪರ ಮಾತನಾಡುವುದಿಲ್ಲ

  ಮಾಜಿ ಪ್ರೇಮಿಗಳಾಗಿದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಗೌಡ ಹಾಗೂ ಜಗನ್ನಾಥ್ ಹೆಚ್ಚಾಗಿ ಪರಸ್ಪರ ಮಾತನಾಡಿಕೊಳ್ಳುತ್ತಿಲ್ಲ.

  English summary
  Bigg Boss Kannada 5: Week 3: Anupama Gowda reveals her breakup story with Jagannath Chandrashekar while talking to Tejaswini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X