ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?

By Harshitha

Recommended Video

Bigg boss season 05 : ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?

ಡೈಲಾಗ್ ನಂಬರ್ 1: ಕ್ಯಾಪ್ಟನ್ ಆದಾಗ ರಿಯಾಝ್ ಹಣ್ಣನ್ನ ಎಲ್ಲರಿಗೂ ಸಮನಾಗಿ ಹಂಚಿದ್ದಕ್ಕೆ, 'ಇದು ಚೀಪ್ ಥಿಂಕಿಂಗ್' ಅಂತ ಸುದೀಪ್ ಎದುರೇ ಆಶಿತಾ ಕಾಮೆಂಟ್ ಮಾಡಿದ್ದರು. ಸಾಲದಕ್ಕೆ ನಾವು ಎಲ್ಲವನ್ನೂ ಹಂಚಿಕೊಂಡು ತಿನ್ನುತ್ತೇವೆ ಎಂದು ದೊಡ್ಡತನ ಮೆರೆದಿದ್ದರು.

ಡೈಲಾಗ್ ನಂಬರ್ 2: 'ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ' ಅಂತ ಅನುಪಮಾ ರೋಷಾವೇಶದಿಂದ ಹೇಳಿದ್ದರು.

ಡೈಲಾಗ್ ನಂಬರ್ 3: ಹಾಲನ್ನ ಎತ್ತಿಟ್ವಿ ನಿಜ, ಆದ್ರೆ ಅದರಿಂದ ಏನನ್ನೂ ಮಾಡಿಕೊಂಡು ತಿಂದಿಲ್ಲ. ಒಂದು ಟೀ ಮಾಡೋಕೆ ಅಂತ ನಿಂತರೆ ನಾಲ್ಕು ಜನ ಮುಂದೆ ನಿಲ್ಲುತ್ತಾರೆ, ಹಿಂಸೆ ಆಗುತ್ತದೆ ಅಂತ ಅನುಪಮಾ ಗೌಡ ಕಣ್ಣು ಕೆಂಪಗೆ ಮಾಡಿಕೊಂಡಿದ್ದರು.

ಈಗ ಈ ಎಲ್ಲ ಡೈಲಾಗ್ ಗಳೇ ಸೆಲೆಬ್ರಿಟಿ ಸ್ಪರ್ಧಿಗಳಿಗೆ ತಿರುಗೇಟು ನೀಡುತ್ತಿವೆ. ಹಣ್ಣು ಹಂಚಿಕೆ ಮಾಡಿದ್ದಕ್ಕೆ ಆಶಿತಾ 'ಚೀಪ್' ಎಂದಿದ್ದರು. ಆದ್ರೆ, ಅದೇ ಆಶಿತಾಗೆ ಅನುಪಮಾ ಗೌಡ ಬಿಸ್ಕತ್ತು, ಕೇಕ್ ಲೆಕ್ಕ ಹಾಕಿ ತೆಗೆದುಕೊಂಡಿದ್ದು ಕಾಣಲಿಲ್ಲ.! ಒಮ್ಮೆ ಹಾಲನ್ನ ಮುಚ್ಚಿಟ್ಟು ದೊಡ್ಡ ರಾಮಾಯಣಕ್ಕೆ ಕಾರಣವಾಗಿದ್ದ ಅನುಪಮಾ ಈಗ ಚಾಕಲೇಟ್ ಕದ್ದು ತಿಂದಿದ್ದಾರೆ.

ಮತ್ತೆತ್ತಿದರೆ, ಜನಸಾಮಾನ್ಯ ಸ್ಪರ್ಧಿಗಳತ್ತ ಬೆಟ್ಟು ಮಾಡುವ ಸೆಲೆಬ್ರಿಟಿ ಸ್ಪರ್ಧಿಗಳನ್ನ ವೀಕ್ಷಕರು ತೀರಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಡುಗೆ ಮನೆಯಲ್ಲಿ ಅನುಪಮಾ ಗೌಡ ವರ್ತನೆ ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಛೀಮಾರಿ ಹಾಕುತ್ತಿದ್ದಾರೆ. ಮುಂದೆ ಓದಿರಿ....

ಕಳ್ಳಿ ಅನುಪಮಾ ಗೌಡ.!

ಕಳ್ಳಿ ಅನುಪಮಾ ಗೌಡ.!

ಚಾಕಲೇಟ್ ಕದ್ದು ತಿಂದ ಅನುಪಮಾ ಗೌಡ ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿರುವುದು ಹೀಗೆ....

ಇದು ವೀಕ್ಷಕರ ಖಡಕ್ ಪ್ರಶ್ನೆ

ಇದು ವೀಕ್ಷಕರ ಖಡಕ್ ಪ್ರಶ್ನೆ

ಚಾಕಲೇಟ್ ಕದ್ದು ತಿನ್ನುವ, ಹಾಲು ಮುಚ್ಚಿಡುವ ಸೆಲೆಬ್ರಿಟಿಗಳ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ''ಇದೇ ಕೆಲಸವನ್ನ ಜನಸಾಮಾನ್ಯ ಸ್ಪರ್ಧಿಗಳು ಮಾಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಗಳು ಸುಮ್ಮನೆ ಬಿಡ್ತಿದ್ರಾ'' ಅನ್ನೋದು ವೀಕ್ಷಕರ ಪ್ರಶ್ನೆ.

ಸುದೀಪ್ ಮಾತನಾಡಬೇಕು

ಸುದೀಪ್ ಮಾತನಾಡಬೇಕು

ರಿಯಾಝ್ ಮಾಡಿದ ಕೆಲಸ ತಪ್ಪು ಎನ್ನುವ ಸೆಲೆಬ್ರಿಟಿಗಳು ಅನುಪಮಾ ಮಾಡಿದ ಕೆಲಸಕ್ಕೆ ಏನಂತಾರೆ.? ''ಬರುವ ಶನಿವಾರ ಈ ಟಾಪಿಕ್ ಬಗ್ಗೆ ಸುದೀಪ್ ಮಾತನಾಡಲೇಬೇಕು'' ಅಂತ ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

ನಾಚಿಕೆ ಇಲ್ವಾ.?

ನಾಚಿಕೆ ಇಲ್ವಾ.?

''ಹಣ್ಣನ್ನ ರಿಯಾಝ್ ಹಂಚಿದರೆ ಚೀಪ್, ಅದೇ ಸೆಲೆಬ್ರಿಟಿಗಳು ಚಾಕಲೇಟ್ ಕದ್ದು ತಿಂದರೆ ಕ್ಯೂಟ್. ಡಬಲ್ ಸ್ಟ್ಯಾಂಡರ್ಡ್ ಇರುವ ಸೆಲೆಬ್ರಿಟಿಗಳಿಗೆ ನಾಚಿಕೆ ಅನ್ನೋದೇ ಇಲ್ವಾ.?'' - ವೀಕ್ಷಕರ ಪ್ರಶ್ನೆ

ಬೇಜವಾಬ್ದಾರಿ ಯಾರಿಗೆ ಹೆಚ್ಚು.?

ಬೇಜವಾಬ್ದಾರಿ ಯಾರಿಗೆ ಹೆಚ್ಚು.?

''ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಬೇಜವಾಬ್ದಾರಿ ಜಾಸ್ತಿ'' ಎಂಬುದು ವೀಕ್ಷಕರ ಅಭಿಪ್ರಾಯ.

ಈ ಕಾಮೆಂಟ್ಸ್ ನೋಡಿ....

ಈ ಕಾಮೆಂಟ್ಸ್ ನೋಡಿ....

'ಬಿಗ್ ಬಾಸ್' ಕಾರ್ಯಕ್ರಮವನ್ನ ವೀಕ್ಷಕರು ಎಷ್ಟು ಸೂಕ್ಷ್ಮವಾಗಿ ನೋಡುತ್ತಾರೆ ಎಂಬುದಕ್ಕೆ ಈ ಕಾಮೆಂಟ್ ಸಾಕ್ಷಿ.

ಇದು ಚೀಪ್ ಅಲ್ವಾ.?

ಇದು ಚೀಪ್ ಅಲ್ವಾ.?

ಮೂರು ಜನ ಸೆಲೆಬ್ರಿಟಿಗಳು ಚಾಕಲೇಟ್ ತಿನ್ನುತ್ತಿರುವಾಗ, ಸಮೀರಾಚಾರ್ಯ ಜೊತೆ ಹಂಚಿಕೊಂಡು ತಿನ್ನಲಿಲ್ಲ. ಇದು ಚೀಪ್ ಅಲ್ವಾ.? ಇದಕ್ಕೆ ಮನುಷ್ಯತ್ವ ಅಂತಾರಾ ಅನ್ನೋದು ವೀಕ್ಷಕರ ಪ್ರಶ್ನೆ

ಪ್ರಜ್ಞೆ ಬೇಡ್ವಾ.?

ಪ್ರಜ್ಞೆ ಬೇಡ್ವಾ.?

ಜನ ನೋಡುತ್ತಿರುತ್ತಾರೆ ಎಂಬ ಸಾಮಾನ್ಯ ಜ್ಞಾನ ಇಲ್ಲದೆ, ಈ ತರಹ ಕೆಲಸ ಮಾಡುವ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಏನ್ನನ್ನಬೇಕು.?

ಇದು ಯಾವ ನ್ಯಾಯ

ಇದು ಯಾವ ನ್ಯಾಯ

''ರಿಯಾಝ್ ಮಾಡಿದರೆ ತಪ್ಪು, ಇವರೆಲ್ಲ ಮಾಡಿದರೆ ಸರಿ... ವಾವ್.! ಇದು ಯಾವ ನ್ಯಾಯ... ಸುದೀಪ್ ಪ್ಲೀಸ್ ಕೇಳಿ ಇದನ್ನ'' - ಇದು ವೀಕ್ಷಕರ ಆಗ್ರಹ

ಸಾವಿರ ಸಲ ಬರೆಸಬೇಕಿತ್ತು

ಸಾವಿರ ಸಲ ಬರೆಸಬೇಕಿತ್ತು

''ಹಾಗಲಕಾಯಿ ಜ್ಯೂಸ್ ಕುಡಿಸುವ ಬದಲು, ನಾನು ಮಾಡಿದ್ದು ತಪ್ಪು ಅಂತ ಸಾವಿರ ಸಲ ಬರೆಯಿಸಬೇಕಿತ್ತು'' 'ಬಿಗ್ ಬಾಸ್' ಕೊಟ್ಟ ಶಿಕ್ಷೆ ಬಗ್ಗೆ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿರುವುದು ಹೀಗೆ....

'ಕಳ್ಳಿ' ಬೋರ್ಡ್ ಕೊಡಬೇಕಿತ್ತು

'ಕಳ್ಳಿ' ಬೋರ್ಡ್ ಕೊಡಬೇಕಿತ್ತು

''ಅನುಪಮಾಗೆ 'ಕಳ್ಳಿ' ಅನ್ನೋ ಬೋರ್ಡ್ ಕೊಟ್ಟು ಒಂದು ದಿನ ಪೂರ್ತಿ ಹಾಕಿಕೊಳ್ಳಬೇಕು ಎನ್ನಬೇಕಿತ್ತು'' ಎಂಬುದು ವೀಕ್ಷಕರ ಅಭಿಪ್ರಾಯ

More from Filmibeat

English summary
Bigg Boss Kannada 5: Week 5: Viewers express their displeasure against Anupama Gowda stealing chocolate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X