»   » ನಟಿ ಅನುಪಮಾ ಗೌಡ ಮದುವೆ ಆಗಲ್ವಂತೆ.! ಸಿಂಗಲ್ ಆಗಿ ಇರ್ತಾರಂತೆ.!

ನಟಿ ಅನುಪಮಾ ಗೌಡ ಮದುವೆ ಆಗಲ್ವಂತೆ.! ಸಿಂಗಲ್ ಆಗಿ ಇರ್ತಾರಂತೆ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡ ಮದುವೆನೇ ಆಗಲ್ವಂತೆ | Filmibeat Kannada

'ಅಕ್ಕ' ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡ ಸಿಂಗಲ್ ಆಗಿ ಇರ್ತಾರಂತೆ. ಮದುವೆನೇ ಆಗಲ್ವಂತೆ. ಹಾಗಂತ ಬೇರೆ ಯಾರೋ ಹೇಳ್ತಿಲ್ಲ. ಬದಲಾಗಿ ಸ್ವತಃ ಅನುಪಮಾ ಅವರೇ ಘೋಷಿಸಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಜೊತೆಗಿನ ತಮ್ಮ ಲವ್ ಹಾಗೂ ಬ್ರೇಕಪ್ ಕಹಾನಿಯನ್ನು ಬಹಿರಂಗ ಮಾಡಿದ್ದ ಅನುಪಮಾ ಇದೀಗ ಮದುವೆ ಆಗುವುದಿಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದಾರೆ.

''ನಾನು ಸಿಂಗಲ್ ಆಗಿ ಇರ್ತೀನಿ, ಮದುವೆ ಆಗಲ್ಲ'' ಅಂತ ಹೇಳಿದ ಅನುಪಮಾ ರನ್ನ ಸದ್ಯ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿಗೆ ಮ್ಯಾಚ್ ಮಾಡಲಾಗಿದೆ.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

Bigg Boss Kannada 5: Anupama Gowda wants to be single

''ಚಂದನ್ ಶೆಟ್ಟಿ ಮದುವೆ ಆಗುವ ಹುಡುಗಿ ಹೇಗಿರಬೇಕು.?'' ಎಂಬ ಟಾಪಿಕ್ ಶುರು ಆದಾಗ ಸಮೀರಾಚಾರ್ಯ, ದಿವಾಕರ್ ಹಾಗೂ ಚಂದನ್ ಶೆಟ್ಟಿ ಕಣ್ಣಿಗೆ ಬಿದ್ದಿದ್ದೇ ಅನುಪಮಾ ಗೌಡ. ಹೀಗಾಗಿ, ಮಂತ್ರ ಪಠಣ ಮಾಡಿ ತಮಾಷೆಗೆ ಚಂದನ್ ಶೆಟ್ಟಿ ಹಾಗೂ ಅನುಪಮಾ ಮದುವೆ ಮಾಡಿಸಿದರು ಸಮೀರಾಚಾರ್ಯ.

ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

ಈ ನಡುವೆ ''ನಾನು ಸಿಂಗಲ್ ಆಗಿ ಇರ್ತೀನಿ, ಮದುವೆ ಆಗಲ್ಲ'' ಎಂದರು ಅನುಪಮಾ. ಅಷ್ಟಕ್ಕೂ ಮದುವೆ ಆಗಲ್ಲ ಅಂತ ಅನುಪಮಾ ಹೇಳಿದ್ಯಾಕೆ.? ತಮ್ಮ ಹಿಂದಿನ ಲವ್ ಸ್ಟೋರಿ ಹಾಗೂ ಕಹಿ ಘಟನೆಗಳೇ ಅನುಪಮಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತಾ.? ನಮಗೆ ಗೊತ್ತಿಲ್ಲ. ಅಷ್ಟಕ್ಕೂ, ''ಸಿಂಗಲ್ ಆಗಿ ಇರ್ತೀನಿ'' ಅಂತ ಅನುಪಮಾ ಸೀರಿಯಸ್ ಆಗಿ ಹೇಳಿದ್ರೋ, ತಮಾಷೆಗೆ ಹೇಳಿದ್ರೋ.? ಅವರೊಬ್ಬರಿಗೆ ಮಾತ್ರ ಗೊತ್ತು.!

English summary
Bigg Boss Kannada 5: Week 13: Anupama Gowda wants to be single and doesn't want to get married.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X