ಜಗನ್ ಗೆ ಆಶಿತಾ ಮುತ್ತು ಕೊಟ್ಟ ಗುಟ್ಟು ಅನುಪಮಾ ಮುಂದೆ ರಟ್ಟು.!
Recommended Video

ಜಗನ್ನಾಥ್ ಚಂದ್ರಶೇಖರ್... ಅನುಪಮಾ ಗೌಡ ಮಾಜಿ ಪ್ರಿಯಕರ ಎಂಬ ಸತ್ಯ ಗೊತ್ತಿದ್ದರೂ, ಜಗನ್ ಜೊತೆಗೆ ಆಶಿತಾ ಕ್ಲೋಸ್ ಆಗಿದ್ದಾರೆ. ಸದಾ ಜಗನ್ ಪಕ್ಕದಲ್ಲೇ ಆಶಿತಾ ಇರುತ್ತಾರೆ. ತಮ್ಮ ಜೊತೆ ಜಗನ್ ಸರಿಯಾಗಿ ಮಾತನಾಡಲಿಲ್ಲ ಅಂದ್ರೆ, ಆಶಿತಾಗೆ ಕಿರಿಕಿರಿ ಆಗುತ್ತೆ.
ಇಷ್ಟೆಲ್ಲ ನಡೆಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯಲ್ಲಿ ಜಗನ್ ಕೆನ್ನೆಗೆ ಆಶಿತಾ ತುಟಿ ಒತ್ತಿದ್ದಾರೆ. ಜಗನ್ ಕೆನ್ನೆಗೆ ಆಶಿತಾ ಸಿಹಿ ಮುತ್ತು ನೀಡಿರುವ ವಿಷಯ ಮಾಜಿ ಪ್ರೇಯಸಿ ಅನುಪಮಾ ಗೌಡ ಇಲ್ಲಿಯವರೆಗೂ ಗೊತ್ತಿರಲಿಲ್ಲ. ಆದ್ರೆ, ಈಗ 'ಕಪಾಲಿ ಚಿತ್ರಮಂದಿರ'ದ ಕೃಪೆಯಿಂದ ಜಗನ್ ಕೆನ್ನೆ ಕೆಂಪಾದ ಸಂಗತಿ ಅನುಪಮಾ ಗೌಡ ಅರಿವಿಗೆ ಬಂದಿದೆ. ಮುಂದೆ ಓದಿರಿ...

'ಬಿಗ್ ಬಾಸ್' ಕೊಟ್ಟಿದ್ದ ಟಾಸ್ಕ್ ಏನು.?
ಆಧುನಿಕ ನಗರದ ಜನ ಜೀವನದ ಶೈಲಿಯನ್ನ ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್ ನಗರ' ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ ಮನೆಯ ವಿವಿಧ ಜಾಗಗಳಿಗೆ ವಿವಿಧ ಹೆಸರು ನೀಡಲಾಗಿತ್ತು. ಅದರಂತೆ ಕನ್ಫೆಶನ್ ಕೋಣೆಗೆ 'ಕಪಾಲಿ ಚಿತ್ರಮಂದಿರ' ಅಂತ ಹೆಸರು ಇಡಲಾಗಿತ್ತು.

ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ
'ಚಿತ್ರ ಪ್ರದರ್ಶನ' ಎಂದ ಕೂಡಲೆ 'ಬಿಗ್ ಬಾಸ್' ಮನೆಯಲ್ಲಿ ಮನರಂಜನೆಗೆ ಅವಕಾಶ ನೀಡಲಾಗಿದೆ ಎಂದುಕೊಳ್ಳಬೇಡಿ. ಕನ್ಫೆಶನ್ ರೂಮ್ ಅರ್ಥಾತ್ ಕಪಾಲಿ ಚಿತ್ರಮಂದಿರದಲ್ಲಿ 'ಬಿಗ್ ಬಾಸ್' ಮನೆಯಲ್ಲಿರುವವರ ನಿಜ ಬಣ್ಣ ಬಯಲು ಮಾಡಲಾಗುತ್ತಿತ್ತು.

ವಿಡಿಯೋ ಕ್ಲಿಪ್ ವೀಕ್ಷಿಸಿದ ಅನುಪಮಾ ಗೌಡ
ಕಪಾಲಿ ಚಿತ್ರಮಂದಿರದ ಒಳಗೆ ಸಿಹಿ ಕಹಿ ಚಂದ್ರು, ಜಗನ್, ಆಶಿತಾ ಬಳಿಕ ಹೋದವರು ಅನುಪಮಾ ಗೌಡ. ಅಲ್ಲಿ ಮುಂಗಡ ಹಣ ಪಾವತಿ ಮಾಡಿ, ಅನುಪಮಾ ಗೌಡ ಚಿತ್ರ ವೀಕ್ಷಿಸಿದರು.

ಒಳಗೆ ಏನಾಯ್ತು.?
'ಬಿಗ್ ಬಾಸ್' ಮನೆಯೊಳಗೆ ಜಗನ್ ಹಾಗೂ ಆಶಿತಾ ನಡುವೆ ನಡೆದ ಮಾತುಕತೆಯನ್ನ ಅನುಪಮಾ ಗೌಡ ವೀಕ್ಷಿಸಿದರು.

ಆಶಿತಾ ಮುತ್ತು ಕೊಟ್ಟ ವಿಡಿಯೋ
ಜಗನ್ ಕೆನ್ನೆಗೆ ಆಶಿತಾ ಮುತ್ತು ಕೊಟ್ಟ ವಿಡಿಯೋ ಕೂಡ 'ಕಪಾಲಿ ಚಿತ್ರಮಂದಿರ'ದಲ್ಲಿ ಪ್ಲೇ ಆಯ್ತು. ಅದನ್ನ ನೋಡಿ ಅನುಪಮಾ ಗೌಡ ಶಾಕ್ ಆಗಿದ್ದಂತೂ ಸುಳ್ಳಲ್ಲ.

ಅನುಪಮಾ ಪ್ರತಿಕ್ರಿಯೆ ಹೇಗಿತ್ತು.?
'ಕಪಾಲಿ ಚಿತ್ರಮಂದಿರ'ಕ್ಕೆ ಹೋಗಿ ಬಂದ ಬಳಿಕ, ''ಇದಿಷ್ಟೇ ಅಲ್ಲ, ಸುಮಾರು ನಡೆದಿದೆ. ಸಿನಿಮಾ ನೋಡಿದ ಮೇಲೆ ನನಗೇನು ಅನಿಸಲಿಲ್ಲ. ನಾವು ಎಲ್ಲರ ಬಗ್ಗೆ ಮಾತನಾಡಿದ್ದೇವೆ'' ಎಂದು ಅನುಪಮಾ ಗೌಡ ಸಮರ್ಥಿಸಿಕೊಳ್ಳುತ್ತಿದ್ದರು.

ಮುಂದಿನ ಗೇಮ್ ಪ್ಲಾನ್ ಏನು.?
ಒಂದ್ಕಡೆ, 'ಬಿಗ್ ಬಾಸ್' ಮನೆಯೊಳಗೆ ಅನುಪಮಾ ಗೌಡ ಬ್ರೇಕಪ್ ಕಹಾನಿ ಬಿಚ್ಚಿಟ್ಟ ಸತ್ಯ ಜಗನ್ ಗೆ ಗೊತ್ತಾಗಿದೆ. ಇನ್ನೊಂದ್ಕಡೆ, ಜಗನ್ ಕೆನ್ನೆಗೆ ಆಶಿತಾ ಮುತ್ತು ಕೊಟ್ಟ ಸಂಗತಿ ಅನುಪಮಾ ಅರಿವಿಗೆ ಬಂದಿದೆ. ಇದರಿಂದ, ಮಾಜಿ ಪ್ರೇಮಿಗಳ ಮಧ್ಯೆ 'ಬಿಗ್ ಬಾಸ್' ಮನೆಯೊಳಗೆ ಸಮರ ನಡೆಯಬಹುದಾ.?


Click it and Unblock the Notifications











