ದಿವಾಕರ್ ದುರ್ಬಲ ಸ್ಪರ್ಧಿಯೇ.? ಅನುಪಮಾ ಹೇಳಿದ ಮಾತಿನ ಅರ್ಥವೇನು.?

By Harshitha

ನಟಿ ಕೃಷಿ ತಾಪಂಡ ಹಾಗೂ ಶ್ರುತಿ ಪ್ರಕಾಶ್ ಜೊತೆಗೆ ಕಳೆದ ವಾರ ಮಾತನಾಡುತ್ತಿರುವಾಗ, ''ದಿವಾಕರ್ ಉಳಿದುಕೊಂಡಿರುವುದಕ್ಕೆ ಕಾರಣ ಏನು ಅಂತಲೇ ಗೊತ್ತಾಗುತ್ತಿಲ್ಲ'' ಎಂದು ನಟಿ ಅನುಪಮಾ ಗೌಡ ಕಾಮೆಂಟ್ ಮಾಡಿದ್ದರು.

ಇದೇ ಮಾತನ್ನ ಇಟ್ಟುಕೊಂಡು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಕರೆ ಮಾಡಿ ಅನುಪಮಾ ಗೌಡ ಅವರಿಗೆ 'ಕಾಲರ್ ಆಫ್ ದಿ ವೀಕ್' ನಿರ್ಮಲಾ ಎಂಬುವವರು ಪ್ರಶ್ನೆ ಕೇಳಿದರು.

Bigg Boss Kannada 5: Caller of the week questions Anupama Gowda

''ಕೃಷಿ ಜೊತೆ ನೀವು ಮಾತನಾಡುತ್ತಿರುವಾಗ, ದಿವಾಕರ್ ಇಷ್ಟು ದಿನ ಹೇಗೆ ಉಳಿದುಕೊಂಡಿದ್ದಾರೋ, ಅರ್ಥ ಆಗುತ್ತಿಲ್ಲ ಅಂತ ಹೇಳಿದ್ರಿ. ನಿಮಗೆ ಯಾಕೆ ಹಾಗೆ ಅನಿಸ್ತು. ದಿವಾಕರ್ ನಿಮಗಿಂತಲೂ ವೀಕ್ ಸ್ಪರ್ಧಿ ಅಂತ ನಿಮಗೆ ಅನ್ಸುತ್ತಾ.?'' ಎಂದು 'ಕಾಲರ್ ಆಫ್ ದಿ ವೀಕ್' ನಿರ್ಮಲಾ ಪ್ರಶ್ನೆ ಮಾಡಿದರು.

ಅದಕ್ಕೆ, ''ಇಲ್ಲ, ನನಗಿಂತ ವೀಕ್ ಸ್ಪರ್ಧಿ ಅಂತ ನಾನು ಹೇಳಿಲ್ಲ. ಈ ವಾರ ಟಾಸ್ಕ್ ವಿಷಯದಲ್ಲಿ ನಾನು ಅವರಲ್ಲಿ ತುಂಬಾ ಬದಲಾವಣೆ ನೋಡಿದೆ. ಬೇರೆ ದಿವಾಕರ್ ನನಗೆ ಕಾಣಿಸಿದರು. ಈ ವಿಚಾರದ ಬಗ್ಗೆ ನಾನು ಕೃಷಿ ಜೊತೆ ಮಾತನಾಡಿದೆ ಅಷ್ಟೆ. ಅದು ಬಿಟ್ಟರೆ ಬೇರೆ ಯಾರಿಗೂ ನಾನು ಕಂಪೇರ್ ಮಾಡಿಲ್ಲ'' ಎಂದರು ಸ್ಪಷ್ಟ ಪಡಿಸಿದರು ಅನುಪಮಾ ಗೌಡ.

More from Filmibeat

English summary
Bigg Boss Kannada 5: Week 9: Caller of the week questions Anupama Gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X