ಎರಡನೇ ಅವಕಾಶ ಗಿಟ್ಟಿಸಿಕೊಂಡ ಕೃಷಿ ಇದೆಲ್ಲ ನಿಮಗೆ ಬೇಕಿತ್ತಾ.?
ವೀಕ್ಷಕರ ಇಚ್ಛೆ ಪ್ರಕಾರ ಹೋದರೆ, ಅದಾಗಲೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ನಟಿ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾಗಿದೆ. ಆದ್ರೆ, ಕಲರ್ಸ್ ವಾಹಿನಿ ಮನಸ್ಸು ಮಾಡಿ ಕೃಷಿಗೆ ಎರಡನೇ ಅವಕಾಶ ಕಲ್ಪಿಸಿ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಹೋಗಲು ಅನುಮತಿ ನೀಡಿದ್ದಾರೆ.
ರೀಎಂಟ್ರಿ ಪಡೆದುಕೊಂಡ ಬಗ್ಗೆ ಹೆಮ್ಮೆ ಪಡದೆ, ''ನಾಟಕ ಮಾಡುತ್ತಿದ್ದಾರೆ, ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾರೆ'' ಅಂತ ಕೆಲವರು ಮಾಡಿದ ಕಾಮೆಂಟ್ ಗಳನ್ನು ಅರಗಿಸಿಕೊಳ್ಳಲು ಆಗದೆ, 'ಬಿಗ್ ಬಾಸ್' ಮನೆಯೊಳಗೆ ಕೃಷಿ ಕಣ್ಣೀರಧಾರೆ ಸುರಿಸಿದರು. ಸಾಲದಕ್ಕೆ, ''ನಾನು ಇಲ್ಲಿ ಇರಲ್ಲ. ಹೊರಗೆ ಹೋಗುತ್ತೇನೆ'' ಅಂತ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ತಮ್ಮ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿಕೊಂಡರು.
ಬಳಿಕ ಜೆಕೆ ಜೊತೆ ಮಾತನಾಡಿದ್ಮೇಲೆ ಸರಿ ಹೋದ ಕೃಷಿ, ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೂಡ ಕೇಳಿದರು.
ಕೃಷಿ ಅವರ ಈ ವರ್ತನೆಯನ್ನ ಸೂಕ್ಷ್ಮವಾಗಿ ಗಮನಿಸಿದ ವೀಕ್ಷಕರೊಬ್ಬರು, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದರು.

'ಕಾಲರ್ ಆಫ್ ವೀಕ್' ಕೇಳಿದ ಪ್ರಶ್ನೆ ಏನು.?
''ಕೋಟ್ಯಾಂತರ ಕನ್ನಡಿಗರಿಗೆ 'ಬಿಗ್ ಬಾಸ್' ಎನ್ನುವುದು ಒಂದು ಬೃಹತ್ ವೇದಿಕೆ. ಅಂಥದ್ರಲ್ಲಿ, ನಿಮಗೆ ಈ ವೇದಿಕೆ ಸಿಕ್ಕಿದೆ. ಹೀಗಿರುವಾಗ, ನೀವು ''ನಾನು ಹೋಗಬೇಕು. ಇರಲ್ಲ'' ಅಂತ ಹೇಳ್ತಿದ್ರಿ. ಇದರಿಂದ ನೀವು 'ಬಿಗ್ ಬಾಸ್'ಗೆ ತೋರಿಸುವ ಗೌರವ ಏನು.?'' ಎಂದು ವೀಕ್ಷಕರೊಬ್ಬರು ಕೃಷಿಗೆ ಪ್ರಶ್ನೆ ಕೇಳಿದರು.

ಕೃಷಿ ಕೊಟ್ಟ ಸ್ಪಷ್ಟನೆ ಏನು.?
''ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಭಾವಾವೇಶದಲ್ಲಿ ನಾನು ಹಾಗೆ ಮಾಡಿದೆ. ಇನ್ಮುಂದೆ ನಾನು ಯಾವತ್ತೂ ಹಾಗೆ ಮಾಡಲ್ಲ. ನಿಮ್ಮೆಲ್ಲರಿಗೂ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ'' ಎಂದರು ಕೃಷಿ.

ಸುದೀಪ್ ಹೇಳಿದ್ದೇನು.?
''ನೀವು ಆಸೆ ಪಟ್ಟು 'ಬಿಗ್ ಬಾಸ್' ಮನೆಯೊಳಗೆ ಬಂದ್ರಿ. ಎಲ್ಲೋ ಹೋಗುತ್ತಿರುವವರನ್ನ ಕರೆದು ನಾವು ಒಳಗೆ ಹಾಕಿದ್ದಲ್ಲ. ನಿಮಗೆ ಇದು ಸಿಕ್ಕಿರುವ ಎರಡನೇ ಅವಕಾಶ. ಜೀವನ ಅಂದುಕೊಂಡ್ರೆ ಒಮ್ಮೆ ಸತ್ತು ಬದುಕಿದ್ದೀರಾ'' ಎಂದು ಕೃಷಿಗೆ ಸುದೀಪ್ ಬುದ್ಧಿ ಮಾತು ಹೇಳಿದರು.

ಮತ್ತೆ ಕ್ಷಮೆ ಕೇಳಿದ ಕೃಷಿ
ಸುದೀಪ್ ಆಡಿದ ಮಾತು ಕೇಳಿ ಮತ್ತೊಮ್ಮೆ ಕೃಷಿ ಕ್ಷಮೆ ಕೇಳಿದರು. ''ಕ್ಷಮೆ ಕೇಳಿದ ಹಾಗೆ ನಡೆದುಕೊಳ್ಳಿ'' ಎಂದು ಕೃಷಿಗೆ ಸಲಹೆ ಕೊಟ್ಟರು ಸುದೀಪ್.


Click it and Unblock the Notifications











