twitter
    For Quick Alerts
    ALLOW NOTIFICATIONS  
    For Daily Alerts

    ಕಾಮನ್ ಮ್ಯಾನ್-ಸೆಲೆಬ್ರಿಟಿ ಭೇದಭಾವಕ್ಕೆ ತೆರೆ ಎಳೆದ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ

    |

    ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಜನಸಾಮಾನ್ಯರು ಭಾಗವಹಿಸಲು ಅವಕಾಶ ಕಲ್ಪಿಸಿದ್ದೇ ಈ ಬಾರಿ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರು 'ಕಾಮನ್ ಮ್ಯಾನ್'ಗಳಿಗೆ ಸ್ಪರ್ಧಿಗಳಾಗುವ ಗೋಲ್ಡನ್ ಚಾನ್ಸ್ ನೀಡಲಾಗಿತ್ತು.

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗುತ್ತಿದ್ದ ಹಾಗೆ, ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳ ನಡುವೆ ಕಂದಕ ನಿರ್ಮಾಣ ಆಯ್ತು. ಸೆಲೆಬ್ರಿಟಿ ಸ್ಪರ್ಧಿಗಳು ಲಿವಿಂಗ್/ಬೆಡ್ ರೂಮ್ ಏರಿಯಾದಲ್ಲೇ ಹೆಚ್ಚು ಕಾಲ ಕಳೆದರೆ, ಕಾಮನ್ ಮ್ಯಾನ್ ಸ್ಪರ್ಧಿಗಳು ಗಾರ್ಡನ್ ಏರಿಯಾಲ್ಲೇ ಠಿಕಾಣಿ ಹೂಡಿದರು. ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆದಿದ್ದೂ ಇದೆ.

    ''ಗುಂಪು ಇರಬಹುದು. ಆದ್ರೆ, ಯಾರ ಮನಸ್ಸಿನಲ್ಲಿಯೂ ಸೆಲೆಬ್ರಿಟಿ/ಕಾಮನ್ ಮ್ಯಾನ್ ಎಂಬ ಭೇದಭಾವ ಇಲ್ಲ. ಎಲ್ಲರೂ ಒಂದೇ'' ಎಂದು ಹಲವು ಸ್ಪರ್ಧಿಗಳು ಎಷ್ಟೇ ಬಾರಿ ಸ್ಪಷ್ಟನೆ ನೀಡಿದರೂ, ವೀಕ್ಷಕರು ಮಾತ್ರ ಅದನ್ನ ಪರಿಗಣಿಸಲೇ ಇಲ್ಲ.

    ಹೀಗಾಗಿ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ದಿನ 'ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್' ಎಂಬ ದೊಡ್ಡ ವಿವಾದಕ್ಕೆ ತೆರೆ ಎಳೆಯಲಾಯಿತು. ಮುಂದೆ ಓದಿರಿ...

    ರಿಯಾಝ್ ಹೇಳಿದ್ದೇನು.

    ರಿಯಾಝ್ ಹೇಳಿದ್ದೇನು.

    ಟಾಪ್ 3 ಹಂತದಲ್ಲಿ ಇದ್ದ ಜೆಕೆ, ಚಂದನ್ ಶೆಟ್ಟಿ ಹಾಗೂ ದಿವಾಕರ್... ಪೈಕಿ ಯಾರು ಸೇಫ್ ಆಗಬೇಕು ಎಂದು ಸುದೀಪ್ ಕೇಳಿದಾಗ, ''ಮೊದಲಿನಿಂದಲೂ ನಮ್ಮಲ್ಲಿ ಯಾರಾದರೂ ಒಬ್ಬರು ಗೆಲ್ಲಬೇಕು ಅಂತ ಇತ್ತು. ಇದೀಗ ಅದು ಇಲ್ಲ. ಆದರೂ, ನನ್ನ ಫ್ರೆಂಡ್ಸ್ ಪೈಕಿ ಒಬ್ಬರು ಗೆಲ್ಲಬೇಕು ಎಂಬ ಆಸೆ ನನಗೆ. ಹೀಗಾಗಿ ಚಂದನ್ ಶೆಟ್ಟಿ ಸೇಫ್ ಆಗಬೇಕು'' ಎಂದು ರಿಯಾಝ್ ಹೇಳಿದರು.

    ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

    ದಯಾಳ್ ಮಾಡಿದ ಕಾಮೆಂಟ್ ಏನು.?

    ದಯಾಳ್ ಮಾಡಿದ ಕಾಮೆಂಟ್ ಏನು.?

    ಟಾಪ್ 3 ಹಂತದಿಂದ ಜೆಕೆ ಔಟ್ ಆದಾಗ ಬೇಸರಗೊಂಡಿದ್ದ ದಯಾಳ್ ಗೆ.... ''ಚಂದನ್ ಶೆಟ್ಟಿ ಹಾಗೂ ದಿವಾಕರ್ ಪೈಕಿ ಯಾರು ಗೆಲ್ಲಬೇಕು.?'' ಎಂದು ಸುದೀಪ್ ಪ್ರಶ್ನಿಸಿದಾಗ, ''ನಾವು ಯಾರ ವಿರೋಧಿಯೂ ಅಲ್ಲ. ಗಾರ್ಡನ್ ಏರಿಯಾದಿಂದಲೇ ದಿವಾಕರ್ ಗೆಲ್ಲಲಿ ಅಂತ ಆಸೆ'' ಎಂದರು ದಯಾಳ್ ಪದ್ಮನಾಭನ್.

    ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬಾರದು ಎಂಬುದು ಇವರುಗಳ ಆಸೆಯಾಗಿತ್ತು.!ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬಾರದು ಎಂಬುದು ಇವರುಗಳ ಆಸೆಯಾಗಿತ್ತು.!

    ಕಾಲೆಳೆದ ಸುದೀಪ್.!

    ಕಾಲೆಳೆದ ಸುದೀಪ್.!

    ದಯಾಳ್ ಆಡಿದ ಮಾತನ್ನು ಕೇಳಿ, ''ರಿಯಾಝ್ ಅವರನ್ನ ಬ್ಯಾಕ್ ಸ್ಟೇಜ್ ಗೆ ಕರ್ಕೊಂಡ್ ಹೋದ್ರೆ, ಸಮಸ್ಯೆ ಪರಿಹಾರ ಆಗುತ್ತೆ'' ಅಂತ ಸುದೀಪ್ ಕಾಲೆಳೆದರು.

    'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

    ಜಗನ್ ನೀಡಿದ ಸ್ಪಷ್ಟನೆ ಏನು.?

    ಜಗನ್ ನೀಡಿದ ಸ್ಪಷ್ಟನೆ ಏನು.?

    ''ಕಾಮನ್ ಮ್ಯಾನ್, ಸೆಲೆಬ್ರಿಟಿ ಅನ್ನೋದು ಮೊದಲ ದಿನದಿಂದಲೂ ಇದೆ. ಇವತ್ತಿಗೂ ಇದೆ. ಈಗಲೂ ಗಾರ್ಡನ್ ಏರಿಯಾ, ಲಿವಿಂಗ್ ಏರಿಯಾ ಎಂಬ ಮಾತು ಬರುತ್ತಿದೆ. ಟಾಪ್ 2 ನಲ್ಲಿ ಒಬ್ಬರು ಸೆಲೆಬ್ರಿಟಿ (ಚಂದನ್ ಶೆಟ್ಟಿ), ಒಬ್ಬರು ಕಾಮನ್ ಮ್ಯಾನ್ (ದಿವಾಕರ್) ಇದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಾಗ ಇಬ್ಬರೂ ಸೆಲೆಬ್ರಿಟಿ ಆಗಿ ಆಚೆ ಬಂದಿದ್ದಾರೆ'' ಎಂದು ಜಗನ್ ಮಾತನಾಡಲು ಆರಂಭಿಸಿದರು.

    ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

    ಬೀಜ ಬಿತ್ತಿದ್ದು ಯಾರು.?

    ಬೀಜ ಬಿತ್ತಿದ್ದು ಯಾರು.?

    ''ಇಲ್ಲಿ ಸೆಲೆಬ್ರಿಟಿ, ಕಾಮನ್ ಮ್ಯಾನ್ ಅನ್ನೋದು ಇಲ್ಲವೇ ಇಲ್ಲ. ಮನೆಯೊಳಗೆ ನಾವು ಯಾವತ್ತೂ ಅದನ್ನ ಮಾತನಾಡಿಲ್ಲ. ಮನಸ್ಸಿನಲ್ಲೂ ಅದನ್ನ ಇಟ್ಟುಕೊಂಡಿಲ್ಲ. ಯಾರೋ ಒಬ್ಬರು ಆ ಬೀಜ ಹಾಕಿದರು. ಅದು ಇವತ್ತು ಆಲದ ಮರ ಆಗಿ ಇಲ್ಲಿರುವ ಅಷ್ಟೂ ಜನಕ್ಕೂ ತುಂಬಾ ಎಫೆಕ್ಟ್ ಆಗುತ್ತಿದೆ'' ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು ಜಗನ್.

    ಎಲ್ಲರೂ ಮನುಷ್ಯರೇ.!

    ಎಲ್ಲರೂ ಮನುಷ್ಯರೇ.!

    ''ನಿಮ್ಮ ಪ್ರಕಾರ ಬೀಜ ಹಾಕಿದ್ದು ಯಾರು.?'' ಎಂದು ಸುದೀಪ್ ಕೇಳಿದಾಗ, ''ಇಲ್ಲಿ ಇವತ್ತೂ ಗಾರ್ಡನ್ ಏರಿಯಾ ಅಂತ ರಿಯಾಝ್ ಮಾತನಾಡಿದರು. ಅದು ಬೇಡ. ಇವತ್ತು ಎಲ್ಲೇ ಹೋದರೂ, ಆ ಮಾತು ತುಂಬಾ ಖಾರವಾಗಿ ಕೇಳಿಸುತ್ತಿದೆ. ನಾವು ಖಂಡಿತ ಹಾಗೆ ನೋಡಿಲ್ಲ. ಸೆಲೆಬ್ರಿಟಿ ಆದ ಚಂದನ್ ಶೆಟ್ಟಿ, ದಿವಾಕರ್ ಗೆಲ್ಲಬೇಕು ಅಂತ ಹೇಳಿದ್ರು. ಹೀಗಿರುವಾಗ, ಎಲ್ಲಿದೆ ಸೆಲೆಬ್ರಿಟಿ ಮತ್ತು ಕಾಮನ್ ಮ್ಯಾನ್. ಎಲ್ಲರೂ ಮನುಷ್ಯರೇ.!'' ಎಂದರು ಜಗನ್.

    ಜನರಿಂದಲೇ ಎಲ್ಲ.!

    ಜನರಿಂದಲೇ ಎಲ್ಲ.!

    ''ಜನ ಇಲ್ಲ ಅಂದ್ರೆ ಯಾರೂ ಇಲ್ಲ. ಜನ ಟಿವಿ ಹಾಕಿಲ್ಲ, ಥಿಯೇಟರ್ ಗೆ ಬರ್ಲಿಲ್ಲ ಅಂದ್ರೆ ನಾವ್ಯಾರೂ ಇಲ್ಲ. ಜನರೇ ನಮಗೆ ದೇವರು. ಜನರಿಂದಲೇ ನಾವು ಊಟ ತಿನ್ನುವುದು. ಹೀಗಿರುವಾಗ, ಆ ಮಾತನ್ನ ತಂದು ಕೆಳಮಟ್ಟಕ್ಕೆ ನಮ್ಮನ್ನ ತರುವುದು ಬೇಡ ಅಂತ ಹೇಳ್ತೀನಿ'' - ಜಗನ್

    ಕ್ಷಮೆ ಕೇಳಿದ ರಿಯಾಝ್

    ಕ್ಷಮೆ ಕೇಳಿದ ರಿಯಾಝ್

    ''ಈ ತರಹ ಫೀಲಿಂಗ್ ಯಾಕೆ ತಂದುಕೊಳ್ಳುತ್ತಿದ್ದಾರೆ ಅಂತ ನನಗೂ ಗೊತ್ತಿಲ್ಲ. ಗಾರ್ಡನ್ ಗ್ಯಾಂಗ್ ಅಂದ್ರೆ ನಾವು ಹೊರಗಡೆ ತುಂಬಾ ಕಾಲ ಕಳೆಯುತ್ತಿದ್ವಿ. ಅ ಒಂದು ಆತ್ಮೀಯತೆಯಲ್ಲಿ ನಾನು ಗಾರ್ಡನ್ ಗುಂಪು ಅಂತ ಹೇಳಿದೆ. ಇದರಿಂದ ಅವರಿಗೆ ತೊಂದರೆ ಆಗುತ್ತಿದೆ ಅಂತ ಗೊತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿ'' ಎಂದು ಕೈಮುಗಿದರು ರಿಯಾಝ್.

    ಡ್ಯಾಮೇಜ್ ತುಂಬಾ ದೊಡ್ಡದು.!

    ಡ್ಯಾಮೇಜ್ ತುಂಬಾ ದೊಡ್ಡದು.!

    ''ಗಾರ್ಡನ್ ಏರಿಯಾ ಅಂತ ಯಾಕೆ ಹೇಳಿದ್ರು ಅಂತ ಈಗ ಅರ್ಥ ಆಯ್ತು. ಆದ್ರೆ, ಅದರಿಂದ ಆಗಿರುವ ಡ್ಯಾಮೇಜ್ ನಮಗೆ ಗೊತ್ತು. ಹೊರಗಡೆ ಜನ ಹೇಗೆ ಮಾತನಾಡುತ್ತಿದ್ದಾರೆ, ಸೆಲೆಬ್ರಿಟಿಗಳಿಗೆ ಹೇಗೆಲ್ಲ ಬೈಯ್ಯುತ್ತಿದ್ದಾರೆ ಅಂತ ನಮಗೆ ಗೊತ್ತು. ರಿಯಾಝ್ ಹೇಳಿರುವ ಮಾತನ್ನ ಜನ ಅರ್ಥ ಮಾಡಿಕೊಂಡು, ಅವರವರ ಅಭಿಪ್ರಾಯಗಳನ್ನ ಬದಲಿಸಿಕೊಳ್ಳಬಹುದು'' ಎಂದರು ಸಿಹಿ ಕಹಿ ಚಂದ್ರು

    ಸೆಲೆಬ್ರಿಟಿಗಳು ನತದೃಷ್ಟರು

    ಸೆಲೆಬ್ರಿಟಿಗಳು ನತದೃಷ್ಟರು

    ''ಹೊರಗಡೆ ಎಲ್ಲೇ ಹೋದರೂ ಕೇಳುವುದು ಇದೊಂದೇ ಪ್ರಶ್ನೆ. ಕೇಳಿಸಿಕೊಂಡರೆ ಬಹಳ ನೋವಾಗುತ್ತದೆ. ಈ ಸೀಸನ್ ನಲ್ಲಿ ನಿಜವಾಗಲೂ ಸೆಲೆಬ್ರಿಟಿಗಳು ನತದೃಷ್ಟರಾಗಿಬಿಟ್ಟಿದ್ದೇವೆ. ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿ ನಡುವಿನ ಶೀತಲ ಸಮರವನ್ನ ಇವತ್ತೇ ಮುಗಿಸಿಬಿಟ್ಟರೆ ಒಳ್ಳೆಯದ್ದು'' ಅಂತ ಜಯಶ್ರೀನಿವಾಸನ್ ಹೇಳಿದರು.

    ಸೆಲೆಬ್ರಿಟಿ ತರಹ ಯಾವತ್ತೂ ನಡೆದುಕೊಂಡಿಲ್ಲ.!

    ಸೆಲೆಬ್ರಿಟಿ ತರಹ ಯಾವತ್ತೂ ನಡೆದುಕೊಂಡಿಲ್ಲ.!

    ''ಮೊದಲ ವಾರ ನನಗೆ ಹಾಗೆ ಅನ್ಸಿತ್ತು. ಆದ್ರೆ, ಇವರೆಲ್ಲರೂ ನನ್ನ ಕುಟುಂಬದವರು ಇದ್ದಂತೆ. ಇವರ್ಯಾರು ನನ್ನನ್ನ ಕಾಮನ್ ಮ್ಯಾನ್ ಅಂತ ನೋಡಿಲ್ಲ. ದೇವ್ರಾಣೆ, ಸತ್ಯವಾಗ್ಲೂ ಹೇಳ್ತೀವಿ. ಇವರೆಲ್ಲರೂ ಕಾಮನ್ ಮ್ಯಾನ್. ಸೆಲೆಬ್ರಿಟಿ ಅಲ್ಲ. ಸೆಲೆಬ್ರಿಟಿ ತರಹ ಒಂದು ದಿನ ಕೂಡ ನಡೆದುಕೊಂಡಿಲ್ಲ'' ಅಂತ ದಿವಾಕರ್ ಹೇಳಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದರು. ಅಲ್ಲಿಗೆ, ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಎಂಬ ಭೇದಭಾವಕ್ಕೆ ತೆರೆಬಿತ್ತು.

    English summary
    Bigg Boss Kannada 5: Celebrity versus Common Man controversy ends in Grand Finale.
    Wednesday, January 31, 2018, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X