ತಮಗಾದ ಅವಮಾನವನ್ನ 'ಬಿಗ್ ಬಾಸ್' ಮುಂದೆ ಹೇಳಿಕೊಂಡ ಚಂದನ್ ಶೆಟ್ಟಿ
Recommended Video

ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಚಂದನ್ ಶೆಟ್ಟಿ ಇದ್ದಾಗ, ''ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನ ತೊಳೆದು ಇಡಲ್ಲ. ಅಡುಗೆ ಮನೆಯನ್ನ ಗಲೀಜಾಗಿ ಮೇನ್ಟೇನ್ ಮಾಡಿದ್ದಾರೆ'' ಅಂತೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳು ದೂರಿದ್ದರು.
ಇದೀಗ ಈ ವಾರ ಚಂದನ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅಡುಗೆ ಮನೆಯನ್ನ ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಆಶಿತಾ ಸೇರಿದಂತೆ ಒಟ್ಟು ಆರು ಮಂದಿಗೆ ವಹಿಸಿದ್ದಾರೆ.
ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಆರು ಮಂದಿ ಇದ್ದರೂ, ಮಲಗುವ ಮುನ್ನ ಪಾತ್ರೆಗಳನ್ನು ತೊಳಿದಿಟ್ಟಿಲ್ಲ. ಅಡುಗೆ ಮನೆಯನ್ನ ಕ್ಲೀನ್ ಮಾಡಿಲ್ಲ. ಇದನ್ನೆಲ್ಲ ಗಮನಿಸಿದ ಚಂದನ್ ಶೆಟ್ಟಿ, ತಮ್ಮ ಅಳಲನ್ನು 'ಬಿಗ್ ಬಾಸ್' ಮುಂದೆ ತೋಡಿಕೊಂಡಿದ್ದಾರೆ. ಮುಂದೆ ಓದಿರಿ....

ಇದೇ ವಿಷಯಕ್ಕೆ ದೊಡ್ಡ ರಾದ್ಧಾಂತ ಆಗಿತ್ತು
''ಕಳೆದ ವಾರ, ತೊಳೆಯಲು ಎರಡು ಪ್ಲೇಟ್, ಒಂದು ಬೌಲ್ ಬಾಕಿ ಇತ್ತು ಅಷ್ಟೇ. ಅಷ್ಟಕ್ಕೆ, ಇದೇ ವಿಷಯಕ್ಕೆ ದೊಡ್ಡ ರಾದ್ಧಾಂತ ಮಾಡಿದ್ದರು. ಈಗ ಇಷ್ಟೆಲ್ಲ ಪಾತ್ರೆಗಳನ್ನು ಬಿಟ್ಟಿದ್ದಾರೆ'' ಎಂದು ಕ್ಯಾಮರಾ ಮುಂದೆ ಚಂದನ್ ಶೆಟ್ಟಿ ಹೇಳುತ್ತಿದ್ದರು.

ಕಳೆದ ವಾರ ಪೆಟ್ಟು ಬಿದ್ದಿದ್ದರೂ, ಪಾತ್ರೆ ತೊಳೆದಿದ್ವಿ
''ಟಾಸ್ಕ್ ಅಂತ ಕಾರಣ ಹೇಳ್ತಾರೆ. ಕಳೆದ ವಾರ ಕೊಟ್ಟಿದ್ದ ಟಾಸ್ಕ್ ಮುಂದೆ ಇದೇನೂ ಅಲ್ಲ. ತೆಂಗಿನಕಾಯಿ ಸುಲಿಯುವ ಟಾಸ್ಕ್ ನಲ್ಲಿ ಕೈ ಹಾಗೂ ಕಾಲಿಗೆ ಗಾಯ ಆಗಿದ್ದರೂ, ಪಾತ್ರೆ ತೊಳೆದು ಮಲಗಿದ್ದೇವೆ'' - ಚಂದನ್ ಶೆಟ್ಟಿ

ಕರ್ತವ್ಯ ನಿರ್ವಹಿಸಿಲ್ಲ
''ಈಗ ಅಡುಗೆ ಡಿಪಾರ್ಟ್ಮೆಂಟ್ ನಲ್ಲಿ ಆರು ಜನ ಇದ್ದಾರೆ. ಅವರವರ ಕರ್ತವ್ಯ ಮಾಡಿ ಮುಗಿಸಬೇಕಿತ್ತು. ಇದನ್ನೇ ಇಟ್ಟುಕೊಂಡು ನಾಳೆ ನಾವು ಮಾತನಾಡಿ ದೊಡ್ಡ ವಿಷಯ ಮಾಡಬಹುದು. ಆದ್ರೆ, ಅದನ್ನ ಮಾಡುವ ಅವಶ್ಯಕತೆ ಇಲ್ಲ. ಮನೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ'' - ಚಂದನ್ ಶೆಟ್ಟಿ

ಮನಸ್ಸಿಗೆ ನೋವಾಗಿದೆ
''ಅವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪು ಅನ್ನೋದು ಸರಿ ಅಲ್ಲ. ಅದಕ್ಕೆ ನಮಗೆ ಆಗಿರುವ ಅವಮಾನ, ಕಷ್ಟವನ್ನ ನಾವು ನಿಮ್ಮ ಬಳಿ ಹೇಳಿಕೊಂಡಿದ್ದೇವೆ ಅಷ್ಟೆ. ಮನಸ್ಸಿಗೆ ನೋವಾಗಿ ನಿಮ್ಮ ಹತ್ತಿರ ಹಂಚಿಕೊಂಡಿದ್ದೇವೆ ಅಷ್ಟೆ'' - ಚಂದನ್ ಶೆಟ್ಟಿ.

ಬೆಣ್ಣೆ-ಸುಣ್ಣ
''ಇವರು ತಿಂದರೆ ಬೆಣ್ಣೆ, ನಾವು ತಿಂದರೆ ಸುಣ್ಣ. ಗೋಧಿ ಹಿಟ್ಟು ಕಲಿಸಿ, ಅರ್ಧಂಬರ್ಧ ಚಪಾತಿ ಮಾಡಿ ಹಾಗೇ ಇಟ್ಟಿದ್ದಾರೆ. ನಾವೇನಾದರೂ ಹಾಗೆ ಮಾಡಿದಿದ್ರೆ, ಗೋಧಿ ಹಿಟ್ಟು ವೇಸ್ಟ್ ಆಯ್ತು ಅಂತಿದ್ರು'' ಎಂದು ಇದೇ ಸಮಯಕ್ಕೆ ದಿವಾಕರ್ ಕೂಡ 'ಬಿಗ್ ಬಾಸ್'ಗೆ ದೂರು ಹೇಳುತ್ತಿದ್ದರು.


Click it and Unblock the Notifications











