ಸಮೀರಾಚಾರ್ಯ ಪತ್ನಿ ಶ್ರಾವಣಿ ಆಸೆ ಈಡೇರಿಸಿದ ಚಂದನ್ ಶೆಟ್ಟಿ.!

By Harshitha

ಸಮೀರಾಚಾರ್ಯ ಪತ್ನಿ ಶ್ರಾವಣಿ ಆಸೆಯನ್ನ ಕನ್ನಡ rapper ಚಂದನ್ ಶೆಟ್ಟಿ ಈಡೇರಿಸಿದ್ದಾರೆ. ಹೌದು, ಸಮೀರಾಚಾರ್ಯ ಹಾಗೂ ಪತ್ನಿ ಶ್ರಾವಣಿ ಬಗ್ಗೆ ಹಾಡೊಂದನ್ನ ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ.

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ಸ್ಪರ್ಧಿಗಳ ಕುಟುಂಬದವರಿಗೆ 'ಬಿಗ್ ಬಾಸ್' ಮನೆಯೊಳಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಗ 'ದೊಡ್ಮನೆ'ಯೊಳಗೆ ಬಂದ ಸಮೀರಾಚಾರ್ಯ ಪತ್ನಿ ಶ್ರಾವಣಿ, ''ನನ್ನ ಮೇಲೆ ಹಾಡು ಮಾಡಿ'' ಎಂದು ಚಂದನ್ ಶೆಟ್ಟಿ ಬಳಿ ಕೇಳಿಕೊಂಡಿದ್ದರು. ಅದಕ್ಕೆ ಚಂದನ್ ಶೆಟ್ಟಿ ಕೂಡ ''ಓಕೆ'' ಎಂದಿದ್ದರು.

Bigg Boss Kannada 5: Chandan Shetty composes song for Sameer Acharya's wife Shravani

ಅಂದು ಶ್ರಾವಣಿ ಅವರಿಗೆ ಮಾತು ಕೊಟ್ಟ ಪ್ರಕಾರ ಇಂದು ಶ್ರಾವಣಿ ಮೇಲೆ ಚಂದನ್ ಶೆಟ್ಟಿ ಹಾಡು ಮಾಡಿದ್ದಾರೆ. ಅಸಲಿಗೆ, ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಿಂದ ಸಮೀರಾಚಾರ್ಯ ಹೊರಬಂದರು. ಸಮೀರಾಚಾರ್ಯ ಔಟ್ ಆಗಿದ್ದು ಚಂದನ್ ಶೆಟ್ಟಿಗೆ ಬೇಸರ ಆಗಿದೆ. ಹೀಗಾಗಿ ಸಮೀರಾಚಾರ್ಯ ಅವರನ್ನು ನೆನೆಯುತ್ತಾ ಶ್ರಾವಣಿಗಾಗಿ ಚಂದನ್ ಶೆಟ್ಟಿ ಹಾಡೊಂದನ್ನು ಸಂಯೋಜಿಸಿದರು. ಹಾಡಿನ ಸಾಹಿತ್ಯ ಹೀಗಿದೆ:

Bigg Boss Kannada 5: Chandan Shetty composes song for Sameer Acharya's wife Shravani

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ....

ಆ ತುಪ್ಪ ತಂದ್ರೂ ಖಾಲಿ
ಆ ಡ್ರೈ ಫ್ರೂಟ್ಸ್ ತಂದ್ರೂ ಖಾಲಿ
ಆ ಜ್ಯೂಸ್ ತಂದ್ರೂ ಖಾಲಿ
ಆ ಜಾಮೂನು ತಂದ್ರೂ ಖಾಲಿ
ರೀ ಯಾಕ್ರೀ ರೀ... ಎಲ್ಲಾ ತಿಂದು ಮುಗಿಸ್ಬಿಡೋದೇ...

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ....

ಆ ಬೇಗ ಏಳಬೇಕು
ಆ ಪೂಜೆ ಮಾಡಬೇಕು
ಆ ಊಟ ಮುಗಿಸಿಕೊಂಡು
ನಿದ್ದೆ ಮಾಡಬೇಕು
ರೀ ಯಾಕ್ರೀ ರೀ... ಏ ಬ್ಯಾಸರ ಬರ್ಲೀಕತ್ತದೆ...

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ....

More from Filmibeat

English summary
Bigg Boss Kannada 5: Week 15: Chandan Shetty composes song for Sameer Acharya's wife Shravani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X