ಅರ್ಧ ಕೋಟಿ ಬಹುಮಾನ ಹಣದಲ್ಲಿ ಚಂದನ್ ಶೆಟ್ಟಿ ಮತ್ತು ಫ್ಯಾಮಿಲಿ ಏನ್ ಮಾಡ್ತಾರೆ ಗೊತ್ತಾ.?

By Harshitha

Recommended Video

ಅರ್ಧ ಕೋಟಿ ಬಹುಮಾನ ಹಣದಲ್ಲಿ ಚಂದನ್ ಶೆಟ್ಟಿ ಮತ್ತು ಫ್ಯಾಮಿಲಿ ಏನ್ ಮಾಡ್ತಾರೆ ಗೊತ್ತಾ.? | Filmibeat Kannada

'ಮೂರೇ ಮೂರು ಪೆಗ್ ಗೆ...' ಹಾಡಿನ ಮೂಲಕ ಕರುನಾಡಲ್ಲಿ ಹೊಸ ಸಂಚಲನ ಹುಟ್ಟು ಹಾಕಿದ ಕನ್ನಡ Rapper ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಚಂದನ್ ಶೆಟ್ಟಿ, ಇದೀಗ ಅದೇ ಅಭಿಮಾನಿಗಳ ಕೃಪಾಕಟಾಕ್ಷದಿಂದ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇರುವಲ್ಲಿ ಯಶಸ್ವಿ ಆದ ಚಂದನ್ ಶೆಟ್ಟಿಗೆ, ಗೆಲುವಿನ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ (ಐವತ್ತು ಲಕ್ಷ) ಲಭಿಸಿದೆ.

ಬಹುಮಾನವಾಗಿ ಸಿಕ್ಕಿರುವ ಐವತ್ತು ಲಕ್ಷ ರೂಪಾಯಿಯಲ್ಲಿ ಚಂದನ್ ಶೆಟ್ಟಿ ಮತ್ತು ಕುಟುಂಬ ಏನ್ ಮಾಡ್ತಾರೆ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ತಂದೆ ಕೈಗೆ ಹಣ ಕೊಟ್ಟ ಚಂದನ್ ಶೆಟ್ಟಿ

ತಂದೆ ಕೈಗೆ ಹಣ ಕೊಟ್ಟ ಚಂದನ್ ಶೆಟ್ಟಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಗೆದ್ದ ಚಂದನ್ ಶೆಟ್ಟಿಗೆ ಐವತ್ತು ಲಕ್ಷ ರೂಪಾಯಿ ಇರುವ ಸೂಟ್ ಕೇಸ್ ನ ಸುದೀಪ್ ನೀಡಿದರು. ತಕ್ಷಣ ಆ ಸೂಟ್ ಕೇಸ್ ನ ಚಂದನ್ ಶೆಟ್ಟಿ ತಮ್ಮ ತಂದೆಗೆ ನೀಡಿದರು. ಇದಕ್ಕೆ ಕಾರಣ ಏನು ಅಂದ್ರೆ...

ಸ್ವಂತ ಮನೆ ಮಾಡಬೇಕು.!

ಸ್ವಂತ ಮನೆ ಮಾಡಬೇಕು.!

''ನಮ್ಮ ಕುಟುಂಬಕ್ಕೆ ಈ ಭೂಮಿ ಮೇಲೆ ಸ್ವಂತ ಜಾಗ ಅಂತ ಇಲ್ಲ. ಇದ್ದ ಆಸ್ತಿಯನ್ನ ಅನಿವಾರ್ಯ ಕಾರಣಗಳಿಂದ ಮಾರಬೇಕಾಯಿತು. ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬರುವ ಹಣದಲ್ಲಿ ನನ್ನ ತಂದೆ ಆಸೆಯನ್ನ ಈಡೇರಿಸುತ್ತೇನೆ'' ಎಂದು ವಾರಗಳ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು. ಆಡಿದ ಮಾತಿನಂತೆ, 'ಬಿಗ್ ಬಾಸ್' ಗೆದ್ದ ಮೇಲೆ ತಮ್ಮ ತಂದೆಗೆ ಬಹುಮಾನ ಹಣವನ್ನು ಚಂದನ್ ಶೆಟ್ಟಿ ನೀಡಿದರು.

ಚಂದನ್ ತಾಯಿ ಕೂಡ ಅದನ್ನೇ ಹೇಳಿದ್ದರು.!

ಚಂದನ್ ತಾಯಿ ಕೂಡ ಅದನ್ನೇ ಹೇಳಿದ್ದರು.!

''ನಮಗೆ ಸ್ವಂತ ಮನೆ ಇಲ್ಲ. ಇದ್ದ ಮನೆ ಕಳೆದುಕೊಂಡಿದ್ದೇವೆ. ಸಾಯುವ ಮುನ್ನ ಸ್ವಂತ ಮನೆ ಮಾಡಿಕೊಂಡು ನೆಮ್ಮದಿ ಆಗಿರಬೇಕು ಎಂಬ ಆಸೆ ಇದೆ. ಗೆದ್ದ ದುಡ್ಡಲ್ಲಿ ಮನೆ ಮಾಡಬೇಕು ಅಂತ ಆಸೆ ಇದೆ'' ಎಂದು ಚಂದನ್ ಶೆಟ್ಟಿ ತಾಯಿ ಕೂಡ ಹೇಳಿದ್ದರು.

ಯಾವುದೇ ಹಬ್ಬ ಮಾಡಿಲ್ಲ.!

ಯಾವುದೇ ಹಬ್ಬ ಮಾಡಿಲ್ಲ.!

ಮೂರು ತಿಂಗಳಿನಿಂದ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಕಾರಣ, ತಮ್ಮ ಮನೆಯಲ್ಲಿ ಚಂದನ್ ಶೆಟ್ಟಿ ಕುಟುಂಬ ಯಾವುದೇ ಹಬ್ಬ ಆಚರಿಸಲಿಲ್ವಂತೆ.

ಚಂದನ್ ಶೆಟ್ಟಿ ಪ್ರಾಣಿ ಪ್ರಿಯ

ಚಂದನ್ ಶೆಟ್ಟಿ ಪ್ರಾಣಿ ಪ್ರಿಯ

ಚಂದನ್ ಶೆಟ್ಟಿ ಪ್ರಾಣಿ ಪ್ರಿಯ. ಹೀಗಾಗಿ, 'ಬಿಗ್ ಬಾಸ್' ಗೆದ್ದಿರುವ ಚಂದನ್ ಶೆಟ್ಟಿಗೆ ಸರ್ಪ್ರೈಸ್ ನೀಡಲು ತಂದೆ-ತಾಯಿ ನಾಯಿ ಮರಿಯೊಂದನ್ನು ತಂದಿದ್ದಾರೆ.

More from Filmibeat

English summary
Bigg Boss Kannada 5 winner Chandan Shetty will fulfill his father's desire by purchasing a house in the prize money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X