'ಬಿಗ್ ಬಾಸ್' ಕನ್ಯಾಮಣಿ ನಿವೇದಿತಾ ಗೌಡ ಟ್ಯಾಲೆಂಟ್ ನ ನೀವು ಒಮ್ಮೆ ನೋಡಿ!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗೆ ಕೊಟ್ಟಿರುವಷ್ಟೇ ಪ್ರಾಮುಖ್ಯತೆಯನ್ನು ಕಾಮನ್ ಮ್ಯಾನ್ ಗಳಿಗೆ ನೀಡಲಾಗಿದೆ. ಅದೇ ರೀತಿ ಕಾಮನ್ ಮ್ಯಾನ್ ವಿಭಾಗದಲ್ಲಿ ಆಯ್ಕೆ ಆದ ನಿವೇದಿತಾ ಗೌಡ ಈಗ ಸೆಲೆಬ್ರಿಟಿಗಳನ್ನು ಮೀರಿಸುವ ಮಟ್ಟಕ್ಕೆ ಜನಪ್ರಿಯತೆ ಗಳಿಸಿದ್ದಾರೆ.
ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ 'ಬಿಗ್ ಬಾಸ್' ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ನಿವೇದಿತಾ ಗೌಡ ಅವರ ಐದು ಸೂಪರ್ ಹಿಟ್ ಡಬ್ ಸ್ಮ್ಯಾಶ್ ಗಳು ಇಲ್ಲಿವೆ ನೋಡಿ...
'ವೀರ ಮದಕರಿ' ಡಬ್ ಸ್ಮ್ಯಾಶ್
ವೀರ ಮದಕರಿ' ಚಿತ್ರದ ರಾಗಿಣಿ ಪಾತ್ರಕ್ಕೆ ನಿವೇದಿತಾ ಡಬ್ ಸ್ಮ್ಯಾಶ್ ಮಾಡಿದ್ದಾರೆ. ಇದನ್ನು 'ಬಿಗ್ ಬಾಸ್' ವೇದಿಕೆ ಮೇಲೆ ಸುದೀಪ್ ಅವರ ಬಳಿಯೂ ನಿವೇದಿತಾ ಹೇಳಿದ್ದರು.
ತಿನ್ಬೇಡಕಮ್ಮಿ
'ಲೂಸಿಯಾ' ಸಿನಿಮಾದ 'ತಿನ್ಬೇಡಕಮ್ಮಿ..' ಹಾಡಿಗೆ ನಿವೇದಿತಾ ಮಾಡಿರುವ ಡಬ್ ಸ್ಮ್ಯಾಶ್ ಕಣ್ಣುತುಂಬಿಕೊಳ್ಳಿ.
ರಕ್ಷಿತಾ ಆದ ನಿವೇದಿತಾ
'ಕಲಾಸಿಪಾಳ್ಯ' ಸಿನಿಮಾದ ರಕ್ಷಿತಾ ಆಗಿ ನಿವೇದಿತಾ ಕಂಗೊಳಿಸಿದ್ದಾರೆ.
ಪೂಜಾ ಗಾಂಧಿ ಸ್ಟೈಲ್
'ಕೃಷ್ಣ' ಚಿತ್ರದ ಹಾಡಿಗೆ ಮಳೆ ಹುಡುಗಿ ಪೂಜಾ ಗಾಂಧಿ ಸ್ಟೈಲ್ ನಲ್ಲಿ ನಿವೇದಿತಾ ಹಾಡಿ ಕುಣಿದಿದ್ದಾರೆ.
'ಬುಲ್ ಬುಲ್' ಡೈಲಾಗ್
'ಬಿಗ್ ಬಾಸ್' ಮನೆಯಲ್ಲಿ ಕಂಗ್ಲೀಷ್ ಮಾತನಾಡುವ ನಿವೇದಿತಾ. 'ಬುಲ್ ಬುಲ್ ' ಚಿತ್ರದ ಈ ಸಂಭಾಷಣೆಗೆ ಸಖತ್ ಆಗಿ ಡಬ್ ಸ್ಮ್ಯಾಶ್ ಮಾಡಿದ್ದಾರೆ.

ನಿವೇದಿತಾ ಗೌಡ ಬಗ್ಗೆ
ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ 'ಬಿಗ್ ಬಾಸ್' ಕಾರ್ಯಕ್ರಮದ ಎಂಟನೇ ಸ್ಪರ್ಧಿ. ಮೈಸೂರಿನಲ್ಲಿ ಹುಟ್ಟಿ ಬೆಳೆದ ನಿವೇದಿತಾ ಗೌಡಗಿನ್ನೂ ಹದಿನೆಂಟು ವರ್ಷ. 'ಬಿಗ್ ಬಾಸ್' ಕನ್ನಡದ ಐದು ಆವೃತ್ತಿಗಳಲ್ಲಿ ನಿವೇದಿತಾ ಗೌಡ ಅತಿ ಕಿರಿಯ ಸ್ಪರ್ಧಿ. 'ಬಿಗ್ ಬಾಸ್'ಗಾಗಿ ಬಿ.ಸಿ.ಎ ಸೆಮಿಸ್ಟರ್ ಪರೀಕ್ಷೆಯನ್ನೇ ಬಿಟ್ಟು ಬಂದಿದ್ದಾರೆ ಈ ನಿವೇದಿತಾ ಗೌಡ.


Click it and Unblock the Notifications











