ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ
'ಬಿಗ್ ಬಾಸ್ ಕನ್ನಡ 5'ನೇ ಆವೃತ್ತಿಯಲ್ಲಿ ಮನೆಯೊಳಗೆ ಒಟ್ಟು 17 ಜನ ಸ್ಪರ್ಧಿಗಳು ಪ್ರವೇಶ ಮಾಡಿದ್ದಾರೆ. ಎಲ್ಲರೂ ಒಂದೊಂದು ರೀತಿಯಲ್ಲಿ ಡಿಫ್ರೆಂಟ್ ಆಗಿದ್ದಾರೆ. ಈ 17 ಜನರ ಪೈಕಿ ಮೈಸೂರಿನ ಯುವಕಿ ನಿವೇದಿತಾ ಗೌಡ ಮೊದಲ ದಿನವೇ 'TRP' ಗಳಿಸಿದ್ದಾರೆ.
ಹೌದು, ನಿವೇದಿತಾ ಗೌಡ 'ಬಿಗ್ ಬಾಸ್' ವೇದಿಕೆಗೆ ಬರುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಇನ್ನು ಅವರ ವೇಷಭೂಷಣ, ಮಾತು, ಅವರು ಮಾತನಾಡುವ ಕನ್ನಡ....ಎಲ್ಲವೂ ಬಿಗ್ ಬಾಸ್ ಮನೆಯ ಹಾಟ್ ಟಾಪಿಕ್ ಆಗಿದೆ. ಇದು ಟ್ರೋಲಿಗರನ್ನ ಕೆರಳಿಸಿದೆ. ಹೀಗಾಗಿ, ಮೊದಲ ದಿನವೇ ಟ್ರೋಲಿಗರಿಗೆ ನಿವೇದಿತಾ ಗೌಡ ಆಹಾರವಾಗಿದ್ದಾರೆ.
ಅಷ್ಟಕ್ಕೂ, ಈ ನಿವೇದಿತಾ ಗೌಡ ಯಾರು? ಟ್ರೋಲಿಗರು ಏನಂತಾ ಟ್ರೋಲ್ ಮಾಡ್ತಿದ್ದಾರೆ ಅಂತ ಮುಂದೆ ಓದಿ......

ಪ್ರಥಮ್ ಗೆ ತಕ್ಕ ಪಾಟ್ನರ್ ಅಂತೆ
ಅಪ್ಪಿ ತಪ್ಪಿ ಕಳೆದ ಬಾರಿ ಬಿಗ್ ಬಾಸ್ ಗೆ ನಿವೇದಿತಾ ಗೌಡ ಬಂದಿದ್ದರೇ, ಪ್ರಥಮ್ ಮತ್ತು ಈಕೆಯ ಕಾಂಬಿನೇಷನ್ ಸೂಪರ್ ಆಗಿರುತ್ತಿತ್ತಂತೆ.

ಅಲ್ಲಿ 'ಕಬಾಲಿ ಡಾ', ಇಲ್ಲಿ 'ನಿವೇದಿತಾ ಗೇವ್ ಡಾ'
ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರದ ''ಕಬಾಲಿ ಡಾ'' ಡೈಲಾಗ್ ಹೆಚ್ಚು ಫೇಮಸ್. ಅದೇ ಸ್ಟೈಲ್ ನಲ್ಲಿ ನಿವೇದಿತಾ ಗೌಡ ಕೂಡ ಮೋಡಿ ಮಾಡಿದ್ದಾರೆ.

ಸಂಜನಾಗೆ ತಕ್ಕ ಸ್ಪರ್ಧಿ
ಕಳೆದ ಆವೃತ್ತಿಯಲ್ಲಿದ್ದ ಸಂಜನಾ ಅವರಿಗೆ ನಿವೇದಿತಾ ಗೌಡ ದೊಡ್ಡ ಸ್ಪರ್ಧಿ ಅಂತೆ.

ಕಂಗ್ಲೀಷ್ ಸ್ನೇಹಿತರಿಗೆ ಟ್ಯಾಗ್ ಮಾಡಿ
ನಿಮ್ಮಲ್ಲಿ ಯಾರಾದ್ರೂ ಕಂಗ್ಲೀಷ್ ಮಾತನಾಡುವ ಸ್ನೇಹಿತರಿದ್ದಾರೆ ನಿವೇದಿತಾ ಗೌಡ ಅವರನ್ನ ಟ್ಯಾಗ್ ಮಾಡಬಹುದಂತೆ.

ಹಾಲಿವುಡ್ 'ಜಾನಿಸ್' ಪ್ರತಿರೂಪ
ನಿವೇದಿತಾ ಗೌಡ ಅವರನ್ನ 'ಫ್ರೆಂಡ್ಸ್' ಖ್ಯಾತಿ ಜಾನಿಸ್ ಪಾತ್ರಕ್ಕೆ ಹೋಲಿಸಲಾಗುತ್ತಿದೆ.

ಸಂಜನಾ ತಂಗಿ ಬಂದ್ರು
ನಿವೇದಿತಾ ಗೌಡ ಅವರ ಲುಕ್, ಗೆಟಪ್ ಎಲ್ಲವೂ ನೋಡಿದ ಟ್ರೋಲಿಗರು ಸಂಜನಾ ಅವರ ತಂಗಿ ಎಂದು ಕಾಲೆಳೆಯುತ್ತಿದ್ದಾರೆ.

'ಬಿಗ್' ಮನೆಯಲ್ಲಿ ಸ್ಕೂಲ್ ಹುಡುಗಿ
'ಬಿಗ್ ಬಾಸ್ ಕನ್ನಡ 5' ಮನೆಗೆ ಸ್ಕೂಲ್ ಹುಡುಗಿ ಪ್ರವೇಶ ಆಗಿದೆ ಎಂದು ನಿವೇದಿತಾ ಗೌಡ ಅವರ ಬಗ್ಗೆ ಚರ್ಚೆಯಾಗುತ್ತಿದೆ.

ಬ್ರಿಟಿಷ್ ಅವರು ಬಿಟ್ಟು ಹೋದ ಹುಡುಗಿ
ಭಾರತ ಬಿಟ್ಟು ಹೋಗುವಾಗ ಬ್ರಿಟಿಷ್ ನವರು ನಿವೇದಿತಾ ಗೌಡರನ್ನ ಮಾತ್ರ ಬಿಟ್ಟು ಹೋದರಂತೆ.

ಕನ್ನಡ ಬರಲ್ವಾ ಅಮ್ಮಿ....
ಮೂಲತಃ ಮೈಸೂರಿನವರಾಗಿದ್ದು, ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವುದಿಲ್ಲವೆಂದು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರನ್ನ ಟ್ರೋಲ್ ಪೇಜ್ ಗಳು ಟ್ರೋಲ್ ಮಾಡಿವೆ.
ಚಿತ್ರಕೃಪೆ: ಟ್ರೋಲ್ ಪೇಜ್ ಗಳು


Click it and Unblock the Notifications











