ದಿವಾಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಲೀಕ್ ಆಗಿದೆ.! ಇದು ಸತ್ಯವೋ.? ಸುಳ್ಳೋ.?
Recommended Video

ಮೂರುವರೆ ತಿಂಗಳ ಹಿಂದೆ ದಿವಾಕರ್ ಮುಖ ಪರಿಚಯ ಯಾರಿಗೆ ಇತ್ತೋ ಇಲ್ವೋ.. ಆದ್ರೀಗ ದಿವಾಕರ್ ಯಾರು ಅಂತ ಕೇಳಿದ್ರೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇರುವ ಜನ ಥಟ್ ಅಂತ ಹೇಳ್ತಾರೆ ದಿವಾಕರ್ 'ಸೇಲ್ಸ್ ಮ್ಯಾನ್' ಅಂತ.! ಊರೂರು ತಿರುಗಿ ಆರ್ಯುವೇದ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್ ಗೆ ಈ ಮಟ್ಟದ ಜನಪ್ರಿಯತೆ, ಖ್ಯಾತಿ ತಂದುಕೊಟ್ಟಿದ್ದು 'ಬಿಗ್ ಬಾಸ್' ಕಾರ್ಯಕ್ರಮ.
ದಿವಾಕರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಜನಸಾಮಾನ್ಯ ಸ್ಪರ್ಧಿ, ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದ್ರೀಗ, ದಿವಾಕರ್ ಓರ್ವ ನಟ ಕೂಡ ಎಂಬ ಸಂಗತಿ ಲೀಕ್ ಆಗಿದೆ.
ಸಿನಿಮಾ ಒಂದರಲ್ಲಿ ದಿವಾಕರ್ ಕಾಣಿಸಿಕೊಂಡಿರುವ ಫೋಟೋ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗುತ್ತಿದೆ. ಮುಂದೆ ಓದಿರಿ...

ಇದೇ ನೋಡಿ ಆ ಫೋಟೋ.!
ಸಿನಿಮಾ ಒಂದರಲ್ಲಿ ವಿಲನ್ ಗಳ ಗುಂಪಿನಲ್ಲಿ ದಿವಾಕರ್ ಕಾಣಿಸಿಕೊಂಡಿರುವ ಸ್ಕ್ರೀನ್ ಶಾಟ್ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. (ಚಿತ್ರಕೃಪೆ: ಟ್ರೋಲ್ ಗುರು)

ಇದು ಯಾವ ಸಿನಿಮಾ.?
ಈ ಸ್ಕ್ರೀನ್ ಶಾಟ್ ನೋಡಿದ್ಮೇಲೆ, ಇದು 'ಉಗ್ರಂ' ಸಿನಿಮಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ, 'ಉಗ್ರಂ' ಚಿತ್ರವನ್ನ ದುರ್ಬೀನು ಹಾಕೊಂಡು ಹುಡುಕಿದ್ರೂ, ಕೆಲವರಿಗೆ ದಿವಾಕರ್ ಕಾಣುತ್ತಿಲ್ಲ. ಹೀಗಾಗಿ, ಈ ಫೋಟೋ ರಿಯಲ್ಲೋ.? ಫೋಟೋಶಾಪೋ.? ಅಥವಾ ಬೇರೆ ಚಿತ್ರದ್ದೋ.? ಅಂತ ಕ್ಲಾರಿಟಿ ಸಿಗುತ್ತಿಲ್ಲ. (ಚಿತ್ರಕೃಪೆ: ಟ್ರೋಲ್ ಬಿಗ್ ಬಾಸ್ 5)

ಜ್ಯೂನಿಯರ್ ಆರ್ಟಿಸ್ಟ್ ಆಗಿದ್ರಾ ದಿವಾಕರ್.?
ಜ್ಯೂನಿಯರ್ ಆರ್ಟಿಸ್ಟ್ ಆಗಿ ವಿಲನ್ ಸೈಡಲ್ಲಿ ನಿಲ್ಲುವ ಪಾತ್ರ ನಿರ್ವಹಿಸಿದ್ರಾ ದಿವಾಕರ್.? ಈ ಪ್ರಶ್ನೆಗೆ ಸ್ವತಃ ದಿವಾಕರ್ ಅವರೇ ಉತ್ತರ ಕೊಡ್ಬೇಕು.!

ಶಾರ್ಟ್ ಮೂವಿ ಮಾಡಿದ್ದಾರೆ ದಿವಾಕರ್.!
ಬೆಳ್ಳಿತೆರೆ ಮೇಲೆ ದಿವಾಕರ್ ಕಾಣಿಸಿಕೊಂಡಿದ್ರೋ, ಬಿಟ್ರೋ ಆದ್ರೆ, ಕಿರುಚಿತ್ರವೊಂದರಲ್ಲಿ ಮಾತ್ರ ದಿವಾಕರ್ ಕಾಣಿಸಿಕೊಂಡಿರುವುದು ಪಕ್ಕಾ. ತಮಿಳಿನ ಶಾರ್ಟ್ ಮೂವಿಯೊಂದರಲ್ಲಿ ದಿವಾಕರ್ ಮಿಂಚಿದ್ದಾರೆ.

ಕಿರುಚಿತ್ರದ ಬಗ್ಗೆ ಎಲ್ಲೂ ಹೇಳಲೇ ಇಲ್ಲ ದಿವಾಕರ್.!
''ನಾನು ವಿಷ್ಣುವರ್ಧನ್ ಫ್ಯಾನ್'' ಅಂತೆಲ್ಲ ಹೇಳಿಕೊಳ್ತಿದ್ದ ದಿವಾಕರ್, ಕಿರುಚಿತ್ರದಲ್ಲಿ ಅಭಿನಯಿಸಿರುವ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಯಾವತ್ತೂ ಹೇಳಿಕೊಂಡಿಲ್ಲ.

ದಿವಾಕರ್ ಗೆ ಟ್ಯಾಲೆಂಟ್ ಇದೆ
''ಹತ್ತು ವರ್ಷಗಳ ಹಿಂದೆ ದಿವಾಕರ್ ಬೆಂಗಳೂರಿಗೆ ಬಂದಿದ್ದು ವಿಷ್ಣುವರ್ಧನ್ ಅವರನ್ನ ಮೀಟ್ ಮಾಡೋಕೆ. ಅವರಿಗೆ ಕಲಾವಿದ ಆಗಬೇಕು ಎಂಬ ಆಸೆ ಇದೆ. ಮಿಮಿಕ್ರಿ ಮಾಡುವ ಟ್ಯಾಲೆಂಟ್ ಇದೆ'' ಅಂತ ದಿವಾಕರ್ ಪತ್ನಿ ಮಮತಾ ಹೇಳ್ತಾರೆ.

ಯಾರೂ ಫೋನ್ ಮಾಡ್ಲಿಲ್ಲ.!
''ಕೆಲವರು ನೀನು ಹೀರೋ ಆಗಬೇಕು ಅಂತಾರೆ. ನಿನ್ನ ವಾಯ್ಸ್ ಚೆನ್ನಾಗಿದೆ, ಡಬ್ಬಿಂಗ್ ಮಾಡು ಅಂತಾರೆ. ಕೆಲವರು ನನ್ನ ನಂಬರ್ ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಇವತ್ತಿನ ವರೆಗೂ ಯಾರೂ ಫೋನ್ ಮಾಡಿಲ್ಲ'' ಎಂದು ಸುದೀಪ್ ಮುಂದೆ 'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನ ದಿವಾಕರ್ ಹೇಳಿದ್ದರು.

ಮಾಡಿರುವ ಕೆಲಸ ಏನೇನು.?
ಒಂಬತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದೇನೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದೇನೆ. ಜೀವನ ನಡೆಸಲು ಏನೇನು ಕೆಲಸ ಮಾಡಬೇಕೋ, ಎಲ್ಲವನ್ನೂ ಮಾಡಿದ್ದೇನೆ. ಎಮ್ಮೆ ಮೇಯಿಸಿದ್ದೇನೆ. ಕೂಲಿ, ಗಾರೆ ಕೆಲಸ ಮಾಡಿದ್ದೇನೆ. ಹೊಟ್ಟೆ ಹಸಿವು ಆದಾಗ ಭಿಕ್ಷೆ ಕೂಡ ಬೇಡಿದ್ದೇನೆ'' ಎಂದು ತಮ್ಮ ಸೆಲ್ಫಿ ವಿಡಿಯೋದಲ್ಲಿ ದಿವಾಕರ್ ಹೇಳಿಕೊಂಡಿದ್ದರು. ಆದ್ರೆ, ಕಿರುಚಿತ್ರದಲ್ಲಿ ಆಕ್ಟ್ ಮಾಡಿರುವ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ.

ಅನುಕರಣೆ ಮಾಡಿದ್ದ ದಿವಾಕರ್
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಅವರನ್ನ ದಿವಾಕರ್ ಚೆನ್ನಾಗಿ ಅನುಕರಣೆ ಮಾಡಿದ್ದರು. ಕುಡುಕನಾಗಿ ಹಾಗೂ ರಾಜಕಾರಣಿ ಆಗಿ ಎಲ್ಲರನ್ನೂ ನಗಿಸಿದ್ದರು.

ದಿವಾಕರ್ ಉತ್ತರ ಕೊಡ್ಬೇಕು.!
ಅಲ್ಲ, 'ಬಿಗ್ ಬಾಸ್' ಮನೆಯೊಳಗೆ ಬಾಯ್ತೆರೆದರೆ ''ನಾನು ಸೇಲ್ಸ್ ಮ್ಯಾನ್. ತುಂಬಾ ಕಷ್ಟ ಪಟ್ಟಿದ್ದೇನೆ'' ಅಂತೆಲ್ಲ ಹೇಳಿಕೊಳ್ಳುತ್ತಿದ್ದ ದಿವಾಕರ್ ಕ್ಯಾಮರಾ ಮುಂದೆ ಕೂಡ ಕಾಣಿಸಿಕೊಂಡಿದ್ದೆ ಅಂತ ಯಾಕೆ ಹೇಳಲಿಲ್ಲ ಎಂದು 'ಬಿಗ್ ಬಾಸ್' ಪ್ರಿಯರು ಪ್ರಶ್ನೆ ಮಾಡ್ತಿದ್ದಾರೆ. ಇದಕ್ಕೆ ದಿವಾಕರ್ ಉತ್ತರ ಕೊಡ್ಬೇಕು.


Click it and Unblock the Notifications











