ದಿವಾಕರ್ ಫಿನಾಲೆವರೆಗೂ ಬಂದಿರೋದು ಅನುಕಂಪದಿಂದ.! ಒಪ್ತೀರಾ.?
ಜನಸಾಮಾನ್ಯ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಮನೆಯ ಬಾಗಿಲು ತೆರೆದಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ. ಇದೇ ಶೋಗೆ ಎಂಟ್ರಿಕೊಟ್ಟವರು ಕಾಮನ್ ಮ್ಯಾನ್ ದಿವಾಕರ್.
ಹೆಗಲ ಮೇಲೆ ಬ್ಯಾಗ್ ನೇತು ಹಾಕಿಕೊಂಡು ಊರೂರು ತಿರುಗುತ್ತಾ ತೈಲ ಮಾರಾಟ ಮಾಡುತ್ತಿದ್ದ ಸೇಲ್ಸ್ ಮ್ಯಾನ್ ದಿವಾಕರ್ ಇದೀಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಟಾಪ್ 3 ಹಂತದವರೆಗೂ ಬಂದಿದ್ದಾರೆ.
ಮೊದಮೊದಲು ಗಲಾಟೆ, ಗದ್ದಲ, ಜಗಳಗಳಿಂದ ಗುರುತಿಸಿಕೊಂಡ ದಿವಾಕರ್, ಬಳಿಕ ಕೆಲವು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮಲ್ಲಿದ್ದ ನಟನಾ ಪ್ರತಿಭೆಯನ್ನ ಹೊರಹಾಕಿದರು.
ಆಗಾಗ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಿದ್ದ ದಿವಾಕರ್, ಜನರ ಅನುಕಂಪ ಗಳಿಸಿ ಫಿನಾಲೆವರೆಗೂ ಬಂದಿದ್ದಾರಾ.? ಅನುಕಂಪದ ಅಲೆ ಸೃಷ್ಟಿಸಲು ದಿವಾಕರ್ ತಮ್ಮ ಕಷ್ಟವನ್ನ ಪದೇ ಪದೇ ಹೇಳಿಕೊಳ್ತಿದ್ರಾ.? ಇದು ದಿವಾಕರ್ ಆಟದ ಸ್ಟ್ರಾಟೆಜಿನಾ.? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದ್ರೆ, ದಿವಾಕರ್ ಜೊತೆಗೆ 'ಬಿಗ್ ಬಾಸ್' ಎಂಬ ಚಿನ್ನದ ಪಂಜರದೊಳಗೆ ಬಂಧಿಯಾಗಿದ್ದ ಕೆಲ ಸ್ಪರ್ಧಿಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ. ಓದಿರಿ...

ಕಿಚ್ಚ ಸುದೀಪ್ ಕೇಳಿದ ಪ್ರಶ್ನೆ ಏನು.?
''ದಿವಾಕರ್ ಅವರು ತಮ್ಮ ಹಳೇ ಗೋಳುಗಳನ್ನ ಮೆಡೆಲ್ ತರಹ ಕುತ್ತಿಗೆಗೆ ಹಾಕೊಂಡು ಅನುಕಂಪದಿಂದ ಫಿನಾಲೆ ತನಕ ಬಂದಿದ್ದಾರೆ'' ಎಂಬ ಹೇಳಿಕೆ ಕೊಟ್ಟರು ಕಿಚ್ಚ ಸುದೀಪ್. ಅದಕ್ಕೆ ವ್ಯಕ್ತವಾದ ಅಭಿಪ್ರಾಯಗಳು ಇಂತಿವೆ...

ದಿವಾಕರ್ ಒಪ್ಪಿಕೊಳ್ಳಲಿಲ್ಲ
''ಅನುಕಂಪದಿಂದ ಬಂದಿದ್ದೇನೆ ಅಂತ ಒಪ್ಪಿಕೊಳ್ಳಲ್ಲ. ಪ್ರತಿಯೊಬ್ಬರಿಗೂ ಒಂದೊಂದು ತರಹ ಕಷ್ಟ ಇರುತ್ತದೆ. ಆದ್ರೆ, ನಾವಿಲ್ಲಿ ಯಾವ ತರಹ ಇದ್ವಿ. ಅದು ಕೂಡ ಮುಖ್ಯ ಆಗುತ್ತದೆ'' ಎಂದು ದಿವಾಕರ್ ತಮ್ಮನ್ನ ತಾವು ಸಮರ್ಥಿಸಿಕೊಂಡರು.

ಅದೊಂದೇ ಕಾರಣ ಅಲ್ಲ
''ಅವರು ಕಷ್ಟ ಪಟ್ಟಿರೋದನ್ನ ತುಂಬಾ ಎಕ್ಸ್ ಪ್ರೆಸ್ ಮಾಡುತ್ತಾರೆ. ಆದ್ರೆ, ಅದೊಂದೇ ಇಲ್ಲಿ ಕೌಂಟ್ ಆಗಲ್ಲ. ನಾವು ಇಲ್ಲಿ ಹೇಗೆ ಇರ್ತೀವಿ, ಅದೇ ಜಾಸ್ತಿ ಕೌಂಟ್ ಆಗುತ್ತೆ ಅನ್ಸುತ್ತೆ'' ಎಂದರು ನಿವೇದಿತಾ ಗೌಡ

ಚಂದನ್ ಶೆಟ್ಟಿ ಏನಂತಾರೆ.?
''ಕಷ್ಟ ಪಟ್ಟಿರುವ ವ್ಯಕ್ತಿ ಬಿಗ್ ಬಾಸ್ ಮನೆಯೊಳಗೆ ತನ್ನ ಟ್ಯಾಲೆಂಟ್ ತೋರಿಸಿಕೊಂಡು ಬರ್ತಿರೋದು, ಜನರಿಗೆ ಇಷ್ಟ ಆಗಿರಬಹುದು. ಇದೇ ಕಾರಣಕ್ಕೆ ಫಿನಾಲೆಗೆ ಬಂದಿರಬಹುದು. ಆದ್ರೆ, ಅನುಕಂಪ ಕಾರಣ ಅಲ್ಲ ಅನ್ಸುತ್ತೆ'' - ಚಂದನ್ ಶೆಟ್ಟಿ

ಶ್ರುತಿಗೆ ಹಾಗೆ ಅನ್ಸಲ್ಲ
''ಕಷ್ಟ ಪಟ್ಟಿದ್ದಕ್ಕಿಂತ ಖುಷಿ ಪಟ್ಟ ಕ್ಷಣಗಳನ್ನು ಹೆಚ್ಚು ಹೇಳಿಕೊಂಡಿದ್ದಾರೆ. ಹೀಗಾಗಿ ನನಗೆ ಅನುಕಂಪ ಅಂತೇನೂ ಅನ್ಸಲ್ಲ'' - ಶ್ರುತಿ ಪ್ರಕಾಶ್

ಸಾಫ್ಟ್ ಕಾರ್ನರ್ ಇರುತ್ತದೆ
''ಇದೂ ಒಂದು ಕಾರಣ ಅಂತ ಹೇಳ್ಬಹುದು. ಯಾಕಂದ್ರೆ, ಹೊಸಬರ ಜೊತೆಗೆ ಮಾತನಾಡುವಾಗ, ಅವರ ಕಷ್ಟಗಳನ್ನು ಕೇಳಿಸಿಕೊಂಡರೆ ಅನುಕಂಪ ಬಂದೇ ಬರುತ್ತದೆ. ಸಾಫ್ಟ್ ಕಾರ್ನರ್ ಕೂಡ ಬಂದೇ ಬರುತ್ತದೆ. ದಿವಾಕರ್ ಮೇಲೆ ಜನರಿಗೆ ಸಾಫ್ಟ್ ಕಾರ್ನರ್ ಮೂಡಿರಬಹುದು'' - ಜಯರಾಂ ಕಾರ್ತಿಕ್

ಕಷ್ಟ-ಸುಖ ಹಂಚಿಕೊಳ್ಳುವುದು ಸಾಮಾನ್ಯ
''ಒಂದು ಮನೆಯಲ್ಲಿ ಇರುವಾಗ ಕಷ್ಟ-ಸುಖ ಹಂಚಿಕೊಳ್ಳುವುದು ಸಾಮಾನ್ಯ. ಹಾಗಂತ ಅನುಕಂಪದ ಮೇಲೆ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎನ್ನುವುದು ಖಂಡಿತ ನಿಜ ಅಲ್ಲ'' - ಸುಮ

ನೀವೇನಂತೀರಿ.?
'ಬಿಗ್ ಬಾಸ್' ಮನೆಯೊಳಗೆ ದಿವಾಕರ್ ಜರ್ನಿ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











