»   » ಜೆ.ಕೆ, ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ ಬಿಟ್ರೆ ಇನ್ಯಾರೂ ದಿವಾಕರ್ ಗೆ ಗೊತ್ತೇ ಇಲ್ಲ.!

ಜೆ.ಕೆ, ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ ಬಿಟ್ರೆ ಇನ್ಯಾರೂ ದಿವಾಕರ್ ಗೆ ಗೊತ್ತೇ ಇಲ್ಲ.!

Posted By:
Subscribe to Filmibeat Kannada

ಅಚ್ಚರಿ ಅನಿಸಿದರೂ ಇದೇ ಸತ್ಯ.! ಕಿರುತೆರೆಯ ಸೂಪರ್ ಸ್ಟಾರ್ ಜೆ.ಕೆ (ಕಾರ್ತಿಕ್), ಸಿಹಿ ಕಹಿ ಚಂದ್ರು ಹಾಗೂ ಚಂದನ್ ಶೆಟ್ಟಿ ಬಿಟ್ಟರೆ 'ಬಿಗ್ ಬಾಸ್' ಮನೆಯೊಳಗೆ ಈ ಬಾರಿ ಕಾಲಿಟ್ಟಿರುವ ಇತರೆ ಸೆಲೆಬ್ರಿಟಿ ಸ್ಪರ್ಧಿಗಳ್ಯಾರೂ 'ಸೇಲ್ಸ್ ಮ್ಯಾನ್' ದಿವಾಕರ್ ಗೆ ಗೊತ್ತೇ ಇಲ್ಲ.!

ದಿನದ ಬಹುತೇಕ ಹೊತ್ತು ಆಯುರ್ವೇದದ ಪ್ರಾಡೆಕ್ಟ್ ಮಾರಾಟ ಮಾಡಲು ಊರೂರು ಅಲೆಯುವ ದಿವಾಕರ್ ಹೆಚ್ಚಾಗಿ ಟಿವಿ ನೋಡಲ್ಲ. ಹೀಗಾಗಿ, ಅವರಿಗೆ ನಟ ಜಗನ್ನಾಥ್, ನಟಿ ಅನುಪಮಾ, ನಟಿ ಆಶಿತಾ, ನಟಿ ತೇಜಸ್ವಿನಿ, ನಟಿ ಕೃಷಿ ತಾಪಂಡ ಹಾಗೂ ನಿರ್ದೇಶಕ ದಯಾಳ್ ಪದ್ಮನಾಭನ್ ರವರ ಪರಿಚಯ ಇಲ್ಲ.

Bigg Boss Kannada 5: Divakar doesn't know anyone else except JK, Chandru and Chandan

ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

ಸೆಲೆಬ್ರಿಟಿಗಳು ತಮ್ಮನ್ನ ತಾವು ಪರಿಚಯ ಮಾಡಿಕೊಂಡ ಬಳಿಕ, ತಾವು ಇಂತಹ ಸಿನಿಮಾ/ಧಾರಾವಾಹಿಯಲ್ಲಿ ಅಭಿನಯಿಸಿದ್ದೇವೆ ಅಂತ ಹೇಳಿಕೊಂಡ ನಂತರ ದಿವಾಕರ್ ಗೆ ಗೊತ್ತಾಗಿದೆ.

'ಕಾಮನ್ ಮ್ಯಾನ್' ದಿವಾಕರ್ ಗೆ ಸೂಪರ್ ಅಧಿಕಾರ ಕೊಟ್ಟ 'ಮಾಸ್' ಮೇಘ

''ಇಲ್ಲಿರುವವರು ಯಾರು ಏನು ಅಂತಲೇ ಗೊತ್ತಿಲ್ಲ. ಯಾವ ಸಿನಿಮಾ ಮಾಡಿದ್ದಾರೋ, ಯಾವ ಧಾರಾವಾಹಿ ಮಾಡಿದ್ದಾರೋ, ಗೊತ್ತಿಲ್ಲ. ಅವರು ಹೇಳಿದ ಮೇಲೆ ನನಗೆ ಗೊತ್ತಾಗಿದ್ದು. ಜೆ.ಕೆ, ಸಿಹಿ ಕಹಿ ಚಂದ್ರು, ಚಂದನ್ ಬಿಟ್ಟರೆ ಬೇರೆ ಯಾರೂ ನನಗೆ ಗೊತ್ತಿಲ್ಲ'' ಎಂದು ಸ್ವತಃ ದಿವಾಕರ್, ಕಿಚ್ಚ ಸುದೀಪ್ ಮುಂದೆ ಹೇಳಿದರು.

English summary
Bigg Boss Kannada 5: Divakar doesn't know anyone else except JK, Sihi Kahi Chandru and Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X