ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಕಾಡುತ್ತಿರುತ್ತದೆ. ನಾಮಿನೇಟ್ ಆದವರ ಪೈಕಿ ಒಬ್ಬರು ಔಟ್ ಆಗುವುದು ಖಚಿತ ಆದ್ದರಿಂದ ಡೇಂಜರ್ ಝೋನ್ ನಲ್ಲಿ ಇರುವವರಿಗೆ ಆತಂಕ ಹೆಚ್ಚು.
ಆದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಗೆ ಭಯ ಇಲ್ಲ, ಆತಂಕ ಕೂಡ ಇಲ್ಲ. ಯಾಕಂದ್ರೆ, ''ನಾಮಿನೇಟ್ ಆದಾಗಲೇ, ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತ ದಿವಾಕರ್ ರವರದ್ದು.
ಇದೇ ಸಿದ್ಧಾಂತವನ್ನ ನಿವೇದಿತಾ ಗೌಡ ರವರಿಗೆ ದಿವಾಕರ್ ಭೋದನೆ ಮಾಡುತ್ತಿದ್ದರು. ಮುಂದೆ ಓದಿರಿ...

ಬೇಸರಗೊಂಡಿದ್ದ ನಿವೇದಿತಾ ಗೌಡ
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಐದನೇ ವಾರ ಓಪನ್ ನಾಮಿನೇಷನ್ ನಡೆದಾಗ, ನಿವೇದಿತಾ ಗೌಡ ನಾಮಿನೇಟ್ ಆದರು. ಈ ಬಗ್ಗೆ ನಿವೇದಿತಾ ಗೌಡ ಕೊಂಚ ಬೇಸರಗೊಂಡಿದ್ದರು. ಆಗ, ದಿವಾಕರ್ ಆಕೆಗೆ ಬುದ್ಧಿಮಾತು ಹೇಳಿದರು.

ಜನರಿಗೆ ಪರಿಚಯ ಆಗುವುದು.!
''ನಾವು ನಾಮಿನೇಷನ್ ಗೆ ಬರಬೇಕು. ಬಂದಾಗಲೇ, ಜನರಿಗೆ ಪರಿಚಯ ಆಗುವುದು. ಟಿವಿಯಲ್ಲಿ ಆಡ್ ಬರುತ್ತದೆ. ಅದಕ್ಕೆ ದುಡ್ಡು ಯಾಕೆ ಕೊಡುತ್ತಾರೆ ಅಂದ್ರೆ, ಜನ ನೋಡಲಿ ಅಂತ'' ಎಂದು ತಮ್ಮ ಅಭಿಪ್ರಾಯವನ್ನ ದಿವಾಕರ್ ಹೊರಹಾಕಿದರು.

ಉಳಿಸಿದಾಗಲೇ ಬೆಲೆ ಗೊತ್ತಾಗುವುದು
''ಈಗ ನೀನು (ನಿವೇದಿತಾ) ನಾಮಿನೇಟ್ ಆಗಿದ್ದೀಯಾ. ನಿನ್ನ ಹೆಸರು ಟಿವಿ ಮೇಲೆ ಹೋದಾಗ ಜನರಿಗೆ ಪರಿಚಯ ಆಗುತ್ತೆ. ನಮ್ಮನ್ನ ಜನ ಉಳಿಸಿದಾಗಲೇ, ನಮ್ಮ ಬೆಲೆ ಗೊತ್ತಾಗುವುದು. ಉಳಿಸಿಲ್ಲ ಅಂದ್ರೆ ನಮ್ಮ ಬೆಲೆ ನಮಗೆ ಗೊತ್ತಾಗಲ್ಲ'' ಎಂದು ನಿವೇದಿತಾಗೆ ದಿವಾಕರ್ ಹೇಳಿದರು.

ಒಂದೇ ಬಾರಿ ನಾಮಿನೇಟ್ ಆಗಿ ಹೋಗಬಾರದು
''ಎರಡು ವಾರ ನೀನು (ನಿವೇದಿತಾ) ಉಳಿದುಕೊಂಡೆ. ಜನ ಉಳಿಸಿದ್ದಾರೆ. ತೇಜಸ್ವಿನಿ ಒಂದೇ ಬಾರಿ ನಾಮಿನೇಟ್ ಆಗಿದ್ದು. ಹಾಗೇ ಹೊರಟು ಹೋದರು. ಆ ತರಹ ಆಗಬೇಕಾ.? ಎಲಿಮಿನೇಷನ್ ಗೆ ಬಂದಾಗಲೇ, ನಾವು ಇದ್ದೀವಿ ಅಂತ ಬೆಲೆ'' ಎಂದರು ದಿವಾಕರ್


Click it and Unblock the Notifications











