Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಚ್ಚ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ 'ಸೇಲ್ಸ್ ಮ್ಯಾನ್' ದಿವಾಕರ್.!

ಕಳೆದ ವಾರವಷ್ಟೇ 'ಕೆಂಪೇಗೌಡ' ಸ್ಟೈಲ್ ನಲ್ಲಿ ಮೀಸೆ ಬಿಟ್ಟು ಕಿಚ್ಚ ಸುದೀಪ್ ಗಮನ ಸೆಳೆದಿದ್ದ ದಿವಾಕರ್ ಇದೀಗ ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ದಿವಾಕರ್ ಗೆ ಹೊಸ ಹೇರ್ ಸ್ಟೈಲ್ ಮಾಡಿದವರು ಬೇರೆ ಯಾರೂ ಅಲ್ಲ, ದಿವಾಕರ್ ಆಪ್ತ ಗೆಳೆಯ ಚಂದನ್ ಶೆಟ್ಟಿ.
'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?
ಕಿವಿ ಮೇಲ್ಭಾಗದಲ್ಲಿ ಇದ್ದ ಕೂದಲನ್ನ ಟ್ರಿಮ್ ಮಾಡಿ, ನೆತ್ತಿ ಮೇಲಿದ್ದ ಕೂದಲನ್ನ ಹಾಗೇ ಬಿಟ್ಟು, ದಿವಾಕರ್ ಗೆ ಚಂದನ್ ಶೆಟ್ಟಿ ಹೊಸ ಹುರುಪು ನೀಡಿದ್ದಾರೆ.
ತಮ್ಮ ಹೇರ್ ಸ್ಟೈಲ್ ನೋಡಿಕೊಂಡು ಖುಷಿ ಪಟ್ಟ ದಿವಾಕರ್, ''ನಾನೊಬ್ಬ ಸೇಲ್ಸ್ ಮ್ಯಾನ್. ಎಂ.ಜಿ.ರೋಡ್ ನಲ್ಲಿ ಈ ತರಹ ಹೇರ್ ಸ್ಟೈಲ್ ಮಾಡಿಕೊಂಡು ಹೋಗುವವರನ್ನ ನೋಡಿದರೆ ನನಗೆ ಇಷ್ಟ ಆಗುತ್ತಿರಲಿಲ್ಲ. ಆದ್ರೆ, ಈಗ ಚಂದನ್ ಶೆಟ್ಟಿ ನನಗೆ ಸ್ಟೈಲ್ ಮಾಡಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ'' ಎಂದರು.
ಸುದೀಪ್ 'ಕೆಂಪೇಗೌಡ' ಲುಕ್ ನಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್.!
''ನನ್ನ ಗೆಳೆಯನಿಗೆ ನಾನು ಮೊಟ್ಟ ಮೊದಲ ಬಾರಿಗೆ ಹೇರ್ ಸ್ಟೈಲ್ ಮಾಡಿದ್ದೇನೆ. ಫುಟ್ ಬಾಲ್ ಪ್ಲೇಯರ್ ತರಹ ರೆಡಿ ಮಾಡಿದ್ದೇನೆ'' ಎಂದು ಹೊಸ ಲುಕ್ ನಲ್ಲಿದ್ದ ದಿವಾಕರ್ ನ 'ಬಿಗ್ ಬಾಸ್'ಗೆ ಚಂದನ್ ಶೆಟ್ಟಿ ಪರಿಚಯಿಸಿದರು.
ಅಂದ್ಹಾಗೆ, ದಿವಾಕರ್ ರವರ ಹೊಸ ಹೇರ್ ಸ್ಟೈಲ್ ಹೇಗಿದೆ.? ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....