'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಭಾಗ 2

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆಯ ಮೊದಲ ದಿನ ವರ್ಣರಂಜಿತವಾಗಿತ್ತು. ಶ್ರುತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಅವರನ್ನ ಎಲಿಮಿನೇಟ್ ಮಾಡಿ ಶಾಕ್ ಕೊಟ್ಟಿದ್ದ ಕಿಚ್ಚ ಸುದೀಪ್, ಎರಡೇ ದಿನ ಮತ್ತೊಂದು ಶಾಕ್ ನೀಡಿದರು.

ಟಾಪ್ 2 ಹಂತಕ್ಕೆ ಬಾರದ ಜಯರಾಂ ಕಾರ್ತಿಕ್ ಮೂರನೇ ಸ್ಥಾನಕ್ಕೆ ಎಲಿಮಿನೇಟ್ ಆದರು. ಕಾಮನ್ ಮ್ಯಾನ್ ದಿವಾಕರ್ ರನ್ನರ್ ಅಪ್ ಆದರೆ ಕನ್ನಡ rapper ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದರು.

ಇನ್ನೂ ಮೊದಲ ದಿನದ ಹಾಗೆ, ಎರಡನೇ ದಿನವೂ ಕಲರ್ ಫುಲ್ ಡ್ಯಾನ್ಸ್ ಪರ್ಫಾಮೆನ್ಸ್ ಗಳು 'ಬಿಗ್ ಬಾಸ್' ವೇದಿಕೆ ಮೇಲೆ ಕಿಚ್ಚು ಹಚ್ಚಿದವು. ಬನ್ನಿ ಹಾಗಾದ್ರೆ, 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆಯ ಎರಡನೇ ದಿನದ ಹೈಲೈಟ್ಸ್ ನೋಡ್ಕೊಂಡ್ ಬರೋಣ...

ಸುದೀಪ್ ಹಾಡುಗಳಿಗೆ ಜಗನ್ ಡ್ಯಾನ್ಸ್

ಸುದೀಪ್ ಹಾಡುಗಳಿಗೆ ಜಗನ್ ಡ್ಯಾನ್ಸ್

ಸುದೀಪ್ ಅವರ 'ಡವ್ ಡವ್ ದುನಿಯಾ ಕಣೋ..', 'ಸೊಂಟದ ವಿಷ್ಯ..', 'ಸವಾಲಿಗೂ ಕವಾಲಿಗೂ ಸೈಯಾರೆ ಸೈಯ್ಯಾ..', 'ಕಾಲೇಜು ಕನ್ಯೆಯರ ಬಸ್ಸು..' ಹಾಡುಗಳಿಗೆ ಜಗನ್ ಸ್ಟೆಪ್ ಹಾಕಿದರು.

ಜಗಳಕ್ಕೆ ಶುಭಂ

ಜಗಳಕ್ಕೆ ಶುಭಂ

ಮೊದಲು ಸ್ನೇಹಿತರಾಗಿ ನಂತರ ಜಗಳ ಮಾಡಿಕೊಂಡಿದ್ದ ಚಂದನ್ ಶೆಟ್ಟಿ, ದಿವಾಕರ್ ಹಾಗೂ ರಿಯಾಝ್ ನಡುವಿನ ಭಿನ್ನಾಭಿಪ್ರಾಯವನ್ನ ಸುದೀಪ್ ಶಮನ ಮಾಡಿದರು.

ಸ್ಟೆಪ್ ಹಾಕಿದ ಸಿಹಿ ಕಹಿ ಚಂದ್ರು

ಸ್ಟೆಪ್ ಹಾಕಿದ ಸಿಹಿ ಕಹಿ ಚಂದ್ರು

'ತುಂಡ್ಹೈಕ್ಳ ಸಾವಾಸ...' ಹಾಡಿಗೆ ಸಿಹಿ ಕಹಿ ಚಂದ್ರು ಬೊಂಬಾಟ್ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು.

ಹೆಜ್ಜೆ ಹಾಕಿದ ಸಮೀರಾಚಾರ್ಯ

ಹೆಜ್ಜೆ ಹಾಕಿದ ಸಮೀರಾಚಾರ್ಯ

'ಹರೇ ರಾಮ...' ಹಾಡಿಗೆ ಸಮೀರಾಚಾರ್ಯ ಕೂಡ ಹೆಜ್ಜೆ ಹಾಕಿದರು.

ಜೆಕೆ ಔಟ್

ಜೆಕೆ ಔಟ್

ಚಂದನ್ ಶೆಟ್ಟಿ, ದಿವಾಕರ್ ಹಾಗೂ ಜಯರಾಂ ಕಾರ್ತಿಕ್... ಮೂವರಲ್ಲಿ ಜೆಕೆ 'ಬಿಗ್ ಬಾಸ್' ಮನೆಯಿಂದ ಹೊರಬಂದರು.

'ಬಿಗ್ ಬಾಸ್' ಮನೆಗೆ ಸುದೀಪ್ ಎಂಟ್ರಿ

'ಬಿಗ್ ಬಾಸ್' ಮನೆಗೆ ಸುದೀಪ್ ಎಂಟ್ರಿ

ಫಿನಾಲೆ ತಲುಪಿದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ಅವರನ್ನ 'ಬಿಗ್ ಬಾಸ್' ವೇದಿಕೆಗೆ ಕರೆತರಲು ಕಿಚ್ಚ ಸುದೀಪ್ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟರು.

ವೇದಿಕೆಗೆ ಬಂದ ಚಂದನ್-ದಿವಾಕರ್

ವೇದಿಕೆಗೆ ಬಂದ ಚಂದನ್-ದಿವಾಕರ್

106 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ಅವರು ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಎಂಟ್ರಿ ಕೊಟ್ಟರು.

ವಿನ್ನರ್ ಘೋಷಿಸಿದ ಸುದೀಪ್

ವಿನ್ನರ್ ಘೋಷಿಸಿದ ಸುದೀಪ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಚಂದನ್ ಶೆಟ್ಟಿ ಎಂದು ಸುದೀಪ್ ಘೋಷಿಸಿದರು.

ಅದ್ಧೂರಿ ತೆರೆ

ಅದ್ಧೂರಿ ತೆರೆ

106 ದಿನಗಳ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿತ್ತು.

More from Filmibeat

English summary
Bigg Boss Kannada 5: In pics- Grand Finale highlights part-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X