'ಬಿಗ್ ಬಾಸ್ ಕನ್ನಡ-5': ಗ್ರ್ಯಾಂಡ್ ಫಿನಾಲೆಯಿಂದ ಹೊರಬಂದ ಮೊದಲ ಸ್ಪರ್ಧಿ ಶ್ರುತಿ

By Harshitha

ಗೆಲ್ಲಲು ಒಂದೇ ಒಂದು ಹೆಜ್ಜೆ ಬಾಕಿ ಇರುವಾಗ ಶ್ರುತಿ ಪ್ರಕಾಶ್ ಎಡವಿ ಬಿದ್ದಿದ್ದಾರೆ. ಕೊನೆಯ ಕ್ಷಣದಲ್ಲಿ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ ಗಾಯಕಿ ಮತ್ತು ನಟಿ ಶ್ರುತಿ ಪ್ರಕಾಶ್.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ, ಅಂದ್ರೆ 105 ನೇ ದಿನ ಸೂಟ್ ಕೇಸ್ ಹಿಡಿದು 'ಬಿಗ್ ಬಾಸ್' ಮನೆಯ ನೀಲಿ ಗೇಟ್ ನಿಂದ ಆಚೆ ಬಂದಿದ್ದಾರೆ ಶ್ರುತಿ ಪ್ರಕಾಶ್.

bigg-boss-kannada-5-grand-finale-shruti-prakash-eliminated

105 ದಿನಗಳ ಕಾಲ 'ದೊಡ್ಮನೆ'ಯೊಳಗೆ ಯಾರೊಂದಿಗೂ ಕಿತ್ತಾಡದೆ, ಗಾಸಿಪ್ ಮಾಡದೆ, ಡಬಲ್ ಗೇಮ್ ಆಡದೆ ಗ್ರ್ಯಾಂಡ್ ಫಿನಾಲೆ ತಲುಪಿದ್ದವರು ಮುಂಬೈನಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ ಪ್ರಕಾಶ್.

'ಬಿಗ್ ಬಾಸ್' ಮನೆಯೊಳಗೆ ನಟಿ ಶ್ರುತಿ ಪ್ರಕಾಶ್ ಹೆಚ್ಚು ಕಾಲ ಕಳೆದಿದ್ದು ನಟ ಜಯರಾಂ ಕಾರ್ತಿಕ್ ಜೊತೆಗೆ. ಇತ್ತ ಚಂದನ್ ಶೆಟ್ಟಿಗೆ ಇದೇ ಶ್ರುತಿ ಪ್ರಕಾಶ್ ಮೇಲೆ ಕ್ರಷ್ ಆಗಿತ್ತು. ಹೀಗಾಗಿ ಈ ಬಾರಿ 'ಬಿಗ್' ಮನೆ ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಗಿತ್ತು.

ಶ್ರುತಿ ಪ್ರಕಾಶ್ ಜೊತೆಗೆ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಗೂ ದಿವಾಕರ್ ಟಾಪ್ 5 ಹಂತ ಅರ್ಥಾತ್ ಫೈನಲಿಸ್ಟ್ ಆಗಿದ್ದರು. ಐದು ಜನರ ಪೈಕಿ ಶ್ರುತಿ ಪ್ರಕಾಶ್ ಮೊದಲು ಎಲಿಮಿನೇಟ್ ಆಗಿದ್ದಾರೆ.

''ಟಾಪ್ 3 ಹಂತಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೆ ಬೇಜಾರಿದೆ. ಆದ್ರೆ, ಇಲ್ಲಿಯವರೆಗೂ ಬಂದಿರುವುದಕ್ಕೆ ಖುಷಿ ಇದೆ'' ಎಂದು ಹೊರಗೆ ಬಂದ್ಮೇಲೆ ಶ್ರುತಿ ಪ್ರಕಾಶ್ ಹೇಳಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

More from Filmibeat

English summary
Bigg Boss Kannada 5 Grand Finale: Shruti Prakash eliminated from #BBK5 House.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X