'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಪ್ರಸಾರ ಯಾವಾಗ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಕೊನೆಯ ಹಂತ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಸದ್ಯ ಐವರು ಸ್ಪರ್ಧಿಗಳು ಫೈನಲಿಸ್ಟ್ ಆಗಿದ್ದು, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್ ಪೈಕಿ ಯಾರು ವಿಜೇತರಾಗಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 105 ಹಾಗೂ 106ನೇ ದಿನ ಫಿನಾಲೆ ನಡೆಯಲಿದ್ದು, ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 7 ಗಂಟೆಯಿಂದ ಪ್ರಸಾರ ಆಗಲಿದೆ.
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಗ್ರ್ಯಾಂಡ್ ಫಿನಾಲೆಯ ಚಿತ್ರೀಕರಣ ಗುಪ್ತವಾಗಿ ನಡೆಯಲಿದ್ಯಂತೆ. ಜೊತೆಗೆ ವಿನ್ನರ್ ಘೋಷಣೆ ಲೈವ್ ಆಗಿ ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿರುವ ಬಗ್ಗೆ ಮಾಹಿತಿ ಇದೆ.

ಒಂದ್ವೇಳೆ, ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಮೊದಲೇ ನಡೆದರೆ ಸೋಷಿಯಲ್ ಮೀಡಿಯಾದಲ್ಲಿ ವಿಜೇತರ ಕುರಿತು ಮಾಹಿತಿ ವೈರಲ್ ಆಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ಯಂತೆ.
ಅಂದ್ಹಾಗೆ, ಈ ಬಾರಿ ಯಾರನ್ನ ಗೆಲ್ಲಿಸಲು ನೀವು ನಿರ್ಧರಿಸಿದ್ದೀರಾ. ಚಂದನ್ ಶೆಟ್ಟಿ, ನಿವೇದಿತಾ, ಜೆಕೆ, ಶ್ರುತಿ ಹಾಗೂ ದಿವಾಕರ್ ಪೈಕಿ ನೀವು ಯಾರಿಗೆ ಮತ ಹಾಕ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...


Click it and Unblock the Notifications











