For Quick Alerts
  ALLOW NOTIFICATIONS  
  For Daily Alerts

  ಟೀಚರ್ ಮೇಲೆ ಕ್ರಷ್: ಕಪಾಳಕ್ಕೆ ಹೊಡೆಸಿಕೊಂಡಿದ್ದ ಜಗನ್.!

  By Harshitha
  |
  Bigg Boss Kannada Season 5 : ತನ್ನ ಮೊದಲ ಕ್ರಶ್ ಬಗ್ಗೆ ಮಾತನಾಡಿದ ಜಗನ್

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ''ತಮ್ಮ ಮೊದಲ ಪ್ರೀತಿ ಬಗ್ಗೆ ಹಂಚಿಕೊಳ್ಳಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದೇ 'ಈ ಪ್ರೀತಿ ಒಂಥರಾ ಕಚಗುಳಿ'. ಇದರ ಅನುಸಾರ ಮನೆಯ ಸದಸ್ಯರು ತಮ್ಮ ಮೊದಲ ಪ್ರೀತಿಯ ಸುಂದರ ಕ್ಷಣಗಳನ್ನು ಇತರೆ ಸದಸ್ಯರ ಮುಂದೆ ಹಂಚಿಕೊಳ್ಳಬೇಕಿತ್ತು.

  ಈ ಚಟುವಟಿಕೆಯ ಬಗ್ಗೆ ಕೇಳಿಸಿಕೊಳ್ಳುತ್ತಿದ್ದಂತೆಯೇ, ಅನುಪಮಾ ಗೌಡ ತಲೆ ಚಚ್ಚಿಕೊಂಡರು.

  ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

  ಮೊದಲ ಪ್ರೀತಿ ಬಗ್ಗೆ ಮೊದಲು ನಾನು ಹೇಳುವೆ ಎಂದು ಜಗನ್ನಾಥ್ ಚಂದ್ರಶೇಖರ್ ಮುಂದೆ ಬಂದಾಗ, ಎಲ್ಲರ ಕಣ್ಣು ಅನುಪಮಾ ಗೌಡ ಮೇಲೆ ಇತ್ತು.! ಯಾಕಂದ್ರೆ, ಅನುಪಮಾ ಗೌಡ ಹಾಗೂ ಜಗನ್ ಒಂದ್ಕಾಲದಲ್ಲಿ ಪ್ರೇಮ ಪಕ್ಷಿಗಳು. ತಮ್ಮ ಲವ್ ಸ್ಟೋರಿ ಬಗ್ಗೆ ಜಗನ್ ಮಾತನಾಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದ್ದಾಗಲೇ, ಏಳನೇ ಕ್ಲಾಸ್ ನ ಸ್ಟೋರಿ ಹೇಳಲು ಜಗನ್ ಶುರು ಮಾಡಿದರು. ಮುಂದೆ ಓದಿರಿ....

  ಮೊದಲನೇ ಕ್ರಷ್ ಬಗ್ಗೆ ಜಗನ್ ಮಾತು

  ಮೊದಲನೇ ಕ್ರಷ್ ಬಗ್ಗೆ ಜಗನ್ ಮಾತು

  ''ನಾನು ಏಳನೇ ಕ್ಲಾಸ್ ನಲ್ಲಿ ಇದ್ದಾಗ, ಕಂಪ್ಯೂಟರ್ ಲ್ಯಾಬ್ ಟೀಚರ್ ಇದ್ದರು. ಅವರು ಇಡೀ ಸ್ಕೂಲ್ ನಲ್ಲಿ ತುಂಬಾ ಸುಂದರವಾಗಿ ಇದ್ದರು. ಅವರು ಮೊದಲನೇ ದಿನ ಸ್ಕೂಲ್ ಗೆ ಬಂದಾಗ, ಅವರನ್ನ ನೋಡಿದಾಗ ನನಗೆ ಮೊದಲ ಬಾರಿಗೆ ಕ್ರಷ್ ಫೀಲ್ ಆಯ್ತು'' ಎಂದರು ಜಗನ್ನಾಥ್ ಚಂದ್ರಶೇಖರ್.

  ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

  ಕಪಾಳಕ್ಕೆ ಹೊಡೆದಿದ್ದ ಟೀಚರ್

  ಕಪಾಳಕ್ಕೆ ಹೊಡೆದಿದ್ದ ಟೀಚರ್

  ''ನಮಗೆ ಕಂಪ್ಯೂಟರ್ ಲ್ಯಾಬ್ ಕ್ಲಾಸ್ ಇರಲಿಲ್ಲ. ಆದರೂ, ಅವರನ್ನ ನೋಡಲು ನಾನು ಕಂಪ್ಯೂಟರ್ ಲ್ಯಾಬ್ ಗೆ ಹೋಗುತ್ತಿದ್ದೆ. ಆರು ತಿಂಗಳು ಕಳೆದ ನಂತರ ನಾನು ಅವರ ಬಳಿ ಹೋಗಿ, ''ನನಗೆ ನಿಮ್ಮ ಮೇಲೆ ಕ್ರಷ್ ಇದೆ'' ಅಂತ ಹೇಳಿದೆ. ಅವರು ನನ್ನ ಬಳಿ ಎರಡು ದಿನ ಮಾತನಾಡಿರಲಿಲ್ಲ. ಮೂರನೇ ದಿನ ನನ್ನನ್ನ ಕರೆದು ಕಪಾಳಕ್ಕೆ ಹೊಡೆದರು'' ಎಂದು ತಮ್ಮ ಮೊದಲ ಕ್ರಷ್ ಬಗ್ಗೆ ಜಗನ್ ಮಾತನಾಡಿದರು.

  ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

  ಅನುಪಮಾ ತಲೆ ಎತ್ತಲಿಲ್ಲ.!

  ಅನುಪಮಾ ತಲೆ ಎತ್ತಲಿಲ್ಲ.!

  ಜಗನ್ ಇಷ್ಟೆಲ್ಲ ಹೇಳುವಾಗ, ಮಾಜಿ ಪ್ರಿಯತಮೆ ಅನುಪಮಾ ಗೌಡ ತಲೆ ಎತ್ತಲಿಲ್ಲ. ಜಗನ್ ಮುಖ ನೋಡಲೇ ಇಲ್ಲ. ಜಗನ್ ಮಾತು ಮುಗಿಸಿದ ಮೇಲೆ ಚಪ್ಪಾಳೆ ತಟ್ಟಿದರು ಅಷ್ಟೆ.

  ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

  ಡಲ್ ಆಗಿದ್ದ ಆಶಿತಾ

  ಡಲ್ ಆಗಿದ್ದ ಆಶಿತಾ

  ತಮ್ಮ ಮೊದಲ ಕ್ರಷ್ ಬಗ್ಗೆ ಜಗನ್ ಹೇಳುವಾಗ, ಆಶಿತಾ ಡಲ್ ಆಗಿ ಕುಳಿತಿದ್ದರು. ಕಳೆದ ವಾರ ತುಂಬಾ ಕ್ಲೋಸ್ ಆಗಿದ್ದ ಆಶಿತಾ ಹಾಗೂ ಜಗನ್ ಮಧ್ಯೆ ಈ ವಾರ ಶೀತಲ ಸಮರ ನಡೆಯುತ್ತಿರುವ ಹಾಗಿದೆ.

  English summary
  Bigg Boss Kannada 5: Week 5: Jaganath Chandrashekar speaks about his first crush.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X