twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!

    By Harshitha
    |

    Recommended Video

    ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಯಲ್ಲಿ ಜೈ ಶ್ರೀನಿವಾಸನ್ ಗೆ ಜ್ಞಾನೋದಯ | Filmibeat Kannada

    'ಬಿಗ್ ಬಾಸ್' ಕಾರ್ಯಕ್ರಮ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದೊಂದು ವ್ಯಕ್ತಿತ್ವಗಳ ಅಥವಾ ಮನುಷ್ಯನ ಮನಸ್ಸಿನ ಅಧ್ಯಯನಕ್ಕೆ ಒಂದೊಳ್ಳೆ ವೇದಿಕೆ.

    'ಬಿಗ್ ಬಾಸ್' ನೀಡುವ ಹಲವು ಚಟುವಟಿಕೆಗಳು ಸ್ಪರ್ಧಿಗಳ ಆತ್ಮಾಭಿಮಾನಕ್ಕೆ ಸವಾಲು ಒಡ್ಡುತ್ತವೆ. ಅಹಂಕಾರದ ನಿರಸನಕ್ಕೆ ಕಾರಣವಾಗುತ್ತವೆ. ಜೀವನದಲ್ಲಿ ಎಂದೋ ಮಾಡಿರುವ ತಪ್ಪು, ಸ್ಪರ್ಧಿಗಳಿಗೆ 'ಬಿಗ್ ಬಾಸ್' ಮನೆಯಲ್ಲಿ ಅರಿವಾಗುತ್ತದೆ ಅಂದ್ರೆ ಅದು ಶೋ ಪರಿಕಲ್ಪನೆಗೆ ಸಿಕ್ಕ ಯಶಸ್ಸು.

    ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ

    ಸದ್ಯ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ. ತಮ್ಮ ತಪ್ಪಿನ ಅರಿವಾಗಿ, ತಪ್ಪಿತಸ್ತ ಮನೋಭಾವ ಅವರಲ್ಲಿ ಕಾಡುತ್ತಿದೆ. ಮುಂದೆ ಓದಿರಿ...

    ಶೋ ಗಾಗಿ ಎಲ್ಲವೂ ಮಾಡಬೇಕು.!

    ಶೋ ಗಾಗಿ ಎಲ್ಲವೂ ಮಾಡಬೇಕು.!

    ಮನೆಯಲ್ಲಿ ಹೇಗೆ ಇದ್ದರೂ, ಕುಟುಂಬದವರು ಮಾತ್ರ ಪ್ರಶ್ನೆ ಮಾಡುತ್ತಾರೆ. ಆದ್ರೆ, 'ಬಿಗ್ ಬಾಸ್' ಶೋಗೆ ಬಂದ್ಮೇಲೆ ಹಾಗಾಗಲ್ಲ. ಸ್ಪರ್ಧಿಗಳ ಪ್ರತಿಯೊಂದು ನಡವಳಿಕೆಯನ್ನ ನೂರಾರು ಕ್ಯಾಮರಾಗಳು ಸೆರೆಹಿಡಿಯುತ್ತಿದ್ದರೆ, ಅದನ್ನ ಕೋಟ್ಯಾಂತರ ಜನ ವೀಕ್ಷಿಸುತ್ತಿರುತ್ತಾರೆ. ಮೈಯೆಲ್ಲ ಕಣ್ಣಾಗಿ ಇರಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗಿದೆ. ಇದರ ಮಧ್ಯೆ ಏನೇ ಹೆಚ್ಚು ಕಮ್ಮಿ ಆದರೂ, ಯಾರು ಯಾರಿಗಾದರೂ ಕ್ಷಮೆ ಕೇಳುತ್ತಾರೆ. ಪರಿಚಯ ಇಲ್ಲದವರಿಗೆ ಕ್ಷಮೆ ಕೇಳಿ ದೊಡ್ಡ ಗುಣ ಮೆರೆಯುವ ಸ್ಪರ್ಧಿಗಳು, ತಮ್ಮ ಮನೆಯವರಿಗೂ ಹಾಗೇ ಕ್ಷಮೆ ಕೇಳಿದ್ರೆ ಜೀವನ ಎಂತಹ ಸೊಗಸು.! ಸದ್ಯ ಜಯಶ್ರೀನಿವಾಸನ್ ಅವರಿಗೆ ಜ್ಞಾನೋದಯ ಆಗಿರುವುದು ಈ ವಿಚಾರಕ್ಕೆ.

    ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!

    ತಪ್ಪಿನ ಅರಿವಾಗಿದೆ

    ತಪ್ಪಿನ ಅರಿವಾಗಿದೆ

    ''ನನ್ನದೇ ತಪ್ಪು ಇದ್ದರೂ ಎಷ್ಟೋ ಬಾರಿ ಹೆಂಡತಿಗೆ ಬೈಯ್ದಿದ್ದೇನೆ. ಇಲ್ಲಿ (ಬಿಗ್ ಬಾಸ್ ಮನೆಯಲ್ಲಿ) ತಪ್ಪು ಮಾಡಿದರೆ ಕ್ಷಮೆ ಕೇಳುತ್ತೇವೆ. ಆದ್ರೆ, ಮನೆಯಲ್ಲಿ ಏನೇ ಮಾಡಿದರೂ ಕ್ಷಮೆ ಕೇಳಲ್ಲ'' ಎನ್ನುತ್ತಿದ್ದ ಜಯಶ್ರೀನಿವಾಸನ್ ಗೆ ತಮ್ಮ ತಪ್ಪಿನ ಅರಿವಾಗಿದೆ.

    'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?

    ಇಲ್ಲಿ ಎಲ್ಲವೂ ಉಲ್ಟಾ

    ಇಲ್ಲಿ ಎಲ್ಲವೂ ಉಲ್ಟಾ

    ''ಇಲ್ಲಿ ಎಲ್ಲವೂ ಉಲ್ಟಾ. ನಮ್ಮ ಜೀವನಕ್ಕೆ ಯಾರು ಬೇಕಾಗಿರುವುದಿಲ್ವೋ, ಅಂಥವರ ಬಳಿ ಕ್ಷಮೆ ಕೇಳ್ತೇವೆ. ಕಾಲಿಗೂ ಬೀಳ್ತೇವೆ'' ಎಂದಿರುವ ಜಯಶ್ರೀನಿವಾಸನ್ ಗೆ 'ಬಿಗ್ ಬಾಸ್' ಕಾರ್ಯಕ್ರಮದ ಮಹತ್ವ ಅರ್ಥವಾಗಿದೆ.

    'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.! 'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

    ಹೊಟ್ಟೆ ಉರಿಯುತ್ತಿದೆ

    ಹೊಟ್ಟೆ ಉರಿಯುತ್ತಿದೆ

    ''ತಪ್ಪಿತಸ್ತ ಮನೋಭಾವ ಕಾಡುತ್ತಿದೆ. ನನ್ನ ಮನೆಯಲ್ಲಿ ನಾನು ತಾಳ್ಮೆಯಿಂದ ನಡೆದುಕೊಂಡಿಲ್ಲ. ಅಡ್ಜಸ್ಟ್ ಕೂಡ ಮಾಡಿಕೊಂಡಿಲ್ಲ. ಇಲ್ಲಿ ಎಲ್ಲ ಮಾಡುತ್ತಿದ್ದೇನೆ. ನಿಜವಾಗಲೂ ನನಗೆ ಹೊಟ್ಟೆ ಉರಿಯುತ್ತಿದೆ. ಇನ್ಮೇಲೆ, ನನ್ನ ಕುಟುಂಬಕ್ಕೆ ನಾನು ಪ್ರಾಮುಖ್ಯತೆ ನೀಡುತ್ತೇನೆ'' ಎಂದಿದ್ದಾರೆ ಜಯಶ್ರೀನಿವಾಸನ್.

    ಪಾಠ ಕಲಿಸಿದ 'ಬಿಗ್ ಬಾಸ್'

    ಪಾಠ ಕಲಿಸಿದ 'ಬಿಗ್ ಬಾಸ್'

    ಅಲ್ಲಿಗೆ, ಜಯಶ್ರೀನಿವಾಸನ್ ಜೀವನಕ್ಕೆ 'ಬಿಗ್ ಬಾಸ್' ಕಾರ್ಯಕ್ರಮ ಒಂದೊಳ್ಳೆ ಪಾಠ ಕಲಿಸಿದೆ ಅಂತರ್ಥ.

    English summary
    Bigg Boss Kannada 5: Week 9: Jayasreenivasan has learnt a lesson from Bigg Boss
    Thursday, December 14, 2017, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X