ಸಿಹಿ ಕಹಿ ಚಂದ್ರು ಹೊರ ಹೋದರೆ, ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಹೇಳ್ದಂಗೆ ಕೇಳ್ತಾರೆ.!
Recommended Video

''ಸಿಹಿ ಕಹಿ ಚಂದ್ರು ಹೊರಗೆ ಹೋದರೆ, ಮಿಕ್ಕವರೆಲ್ಲ ಹೇಳಿದ ಹಾಗೆ ಕೇಳ್ತಾರೆ'' ಅಂತ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೇಳಿದ್ದಾರೆ.
ಜಯಶ್ರೀನಿವಾಸನ್ ಪ್ರಕಾರ, ಚೆನ್ನಾಗಿ ಅಡುಗೆ ಮಾಡುವ ಮೂಲಕ ಇಡೀ ಮನೆಯನ್ನ ಸಿಹಿ ಕಹಿ ಚಂದ್ರು ಕಂಟ್ರೋಲ್ ಮಾಡುತ್ತಿದ್ದಾರಂತೆ. ಹೀಗಾಗಿ, ಚಂದ್ರು ಹೊರಗೆ ಹೋಗುವವರೆಗೂ ಯಥಾಸ್ಥಿತಿ ಮುಂದುವರೆಯುತ್ತಂತೆ.!

''ಸಿಹಿ ಕಹಿ ಚಂದ್ರು ಹೊರಗೆ ಹೋದರೆ, ಮಿಕ್ಕವರೆಲ್ಲ ಹೇಳಿದ ಹಾಗೆ ಕೇಳ್ತಾರೆ. ಚಂದ್ರು ಇರುವವರೆಗೂ ಚಾನ್ಸನ್ ಇಲ್ಲವೇ ಇಲ್ಲ. ದಯಾಳ್ ಹೋದ್ಮೇಲೆ, ಹೆಣ್ಮಕ್ಕಳು 'ಹಲೋ' ಅಂತ ಮಾತನಾಡಿಸುತ್ತಿದ್ದಾರೆ. ಚಂದ್ರು ಇರುವವರೆಗೂ ನೀವು (ಸಮೀರಾಚಾರ್ಯ) ಅಡುಗೆ ಮನೆಯನ್ನ ಮರೆತು ಬಿಡಿ. ಅವರು ಏನೇ ಮಾಡಿದರೂ, ಅದೇ ರೂಲ್. ಅದನ್ನ ಚೇಂಜಸ್ ಮಾಡಲು ಸಾಧ್ಯ ಇಲ್ಲ'' ಎಂದು ಸಮೀರಾಚಾರ್ಯಗೆ ಜಯಶ್ರೀನಿವಾಸನ್ ಹೇಳಿದರು.
ಅದಕ್ಕೆ, ''ಅವರು ಅಡುಗೆ ಚೆನ್ನಾಗಿ ಮಾಡುತ್ತಾರೆ. ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಆದ್ರೆ, ನಾನು ಅಡುಗೆ ಮಾಡುತ್ತಿದ್ದಾಗ, ಅದನ್ನ ರಾತ್ರಿ ಇಡೀ ಗಾಸಿಪ್ ಮಾಡುವ ಅವಶ್ಯಕತೆ ಏನಿತ್ತು. ನಾನು ತಪ್ಪು ಮಾಡಿದಾಗ, ನನಗೆ ಹೇಳಿದ್ದರೆ ನಾನು ತಿದ್ದಿಕೊಳ್ಳುತ್ತಿದ್ದೆ'' ಎಂದು ಬೇಸರ ವ್ಯಕ್ತಪಡಿಸಿದರು ಸಮೀರಾಚಾರ್ಯ.
ಜಯಶ್ರೀನಿವಾಸನ್ ರವರ ಮಾತನ್ನ ನೀವೂ ಒಪ್ತೀರಾ.? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪುಟವನ್ನ ಲೈಕ್ ಮಾಡಿ ಕಾಮೆಂಟ್ ಮಾಡಿ....


Click it and Unblock the Notifications











