'ಬಿಗ್ ಬಾಸ್' ಸ್ಪರ್ಧಿಗಳ 'ವಿಚಿತ್ರ' ನಡವಳಿಕೆ ಕಂಡು ಬೇಸತ್ತ ಕಿಚ್ಚ ಸುದೀಪ್.!

By Harshitha

Recommended Video

Bigg Boss Kannada Season 5 : ಎಲ್ಲಾ ಸ್ಪರ್ಧಿಗಳ ಮೇಲೂ ಬೇಸತ್ತು ಗರಂ ಆದ ಕಿಚ್ಚ ಸುದೀಪ್ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸ್ವಲ್ಪ 'ವಿಚಿತ್ರ'ವಾಗಿದೆ. ಕಾರಣ.. 'ವಿಚಿತ್ರ' ಸ್ಪರ್ಧಿಗಳು. ಎಲ್ಲರ ನಡವಳಿಕೆ ಕೂಡ ಅಷ್ಟೇ 'ವಿಚಿತ್ರ'ವಾಗಿದೆ.

ಒಂದು ಲೋಟ ಹಾಲು, ಒಂದು ಕಪ್ ಮೊಸರು, ಪುದಿನ ಸೊಪ್ಪು, ಒಂದು ಪ್ಯಾಕೆಟ್ ಬಿಸ್ಕತ್ತು, ಐಸ್ ಕ್ರೀಮ್, ಚಾಕಲೇಟ್ ಗಳಿಗೆಲ್ಲ ರಂಪಾಟ ಮಾಡಿಕೊಳ್ಳುವ ಈ ಸ್ಪರ್ಧಿಗಳನ್ನ ನೋಡಿ ನೋಡಿ ವೀಕ್ಷಕರಿಗೂ 'ವಿಚಿತ್ರ' ಎನಿಸಿಬಿಟ್ಟಿದೆ.

ಬರೀ ತಿಂಡಿ, ಊಟದ ವಿಚಾರಕ್ಕೆ ಮಹಾ ರಾದ್ಧಾಂತ ಮಾಡಿಕೊಳ್ಳುವ ಸ್ಪರ್ಧಿಗಳು, ಮನೆಯಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಕೈ ಮಾಡಿದಾಗ ತುಟಿಕ್ ಪಿಟಿಕ್ ಎನ್ನದಿರುವುದೇ 'ವಿಚಿತ್ರ'.!

'ಕೈ ಮಾಡಿದ್ದು ತಪ್ಪು' ಅಂತ ಸಂಯುಕ್ತಗೆ ಯಾರೂ ಹೇಳುವುದೇ ಇಲ್ಲ. ಸಮೀರಾಚಾರ್ಯ ಬಳಿ ಯಾರೊಬ್ಬರೂ ಬಂದು ಮಾತನಾಡುವುದಿಲ್ಲ. ಈ 'ವಿಚಿತ್ರ' ನಡವಳಿಕೆ ಕಂಡ ಕಿಚ್ಚ ಸುದೀಪ್ ಅವರಿಗೂ ಬೇಸರವಾಗಿದೆ. 'ಸೈಲೆಂಟ್' ಆಗಿದ್ದ ಸ್ಪರ್ಧಿಗಳನ್ನ, ಬೇಕು ಬೇಕು ಅಂತ ವೈಲೆಂಟ್ ಆಗುವ ಸ್ಪರ್ಧಿಗಳನ್ನೆಲ್ಲ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಬೆಂಡೆತ್ತಿದ್ದಾರೆ ಸುದೀಪ್. ಮುಂದೆ ಓದಿರಿ....

ಎಲ್ಲರಿಗೂ ಪ್ರಶ್ನೆ ಕೇಳಿದ ಕಿಚ್ಚ ಸುದೀಪ್

ಎಲ್ಲರಿಗೂ ಪ್ರಶ್ನೆ ಕೇಳಿದ ಕಿಚ್ಚ ಸುದೀಪ್

''ಸಂಯುಕ್ತ ಈ ವೇದಿಕೆ ಮೇಲೆ ಇಲ್ಲ. ಅವರ ಕಡೆಯಿಂದ ನಡೆದ ಘಟನೆ, ಅದರಿಂದ ಆದ ನೋವು, ಸಂದರ್ಭದ ಬಗ್ಗೆ ಎಲ್ಲರಿಗೂ ನಾನು ಪ್ರಶ್ನೆ ಕೇಳಬೇಕು. ಎಲ್ಲರ ಎದುರಿಗೆ ಸಮೀರಾಚಾರ್ಯ ಅವರಿಗೆ ಸಂಯುಕ್ತ ಹೊಡೆಯುತ್ತಾರೆ. ಮೈ ಮುಟ್ಟಿದರು ಎಂಬ ಗಂಭೀರ ಆರೋಪ ಕೂಡ ಮಾಡುತ್ತಾರೆ. ಆ ಸಂದರ್ಭದಲ್ಲಿ ನೀವೆಲ್ಲರೂ ಪ್ರತಿಕ್ರಿಯೆ ಕೊಟ್ಟ ರೀತಿ ಸ್ವಲ್ಪ ವಿಚಿತ್ರವಾಗಿತ್ತು. ಚಂದನ್ ಶೆಟ್ಟಿ ಹಾಗೂ ದಿವಾಕರ್ ಬಿಟ್ಟರೆ, ಯಾರೂ ಸಂಯುಕ್ತ ಅವರನ್ನ ಪ್ರಶ್ನೆ ಮಾಡಲಿಲ್ಲ. ವಿಷಯ ಏನೇ ಇರಲಿ, ಹೊಡೆದಿದ್ದು ತಪ್ಪು ಅನ್ನೋದು ಯಾಕೆ ಯಾರಿಗೂ ಅನಿಸಲಿಲ್ಲ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಎಲ್ಲರನ್ನೂ ಪ್ರಶ್ನೆ ಮಾಡಿದರು.

ಜಯಶ್ರೀನಿವಾಸನ್ ಕೇಳಬಹುದಿತ್ತು...

ಜಯಶ್ರೀನಿವಾಸನ್ ಕೇಳಬಹುದಿತ್ತು...

ಸದ್ಯ 'ಬಿಗ್ ಬಾಸ್' ಮನೆಯ ಸದಸ್ಯರ ಪೈಕಿ ಜಯಶ್ರೀನಿವಾಸನ್ ಹಿರಿಯರು. ಹೀಗಾಗಿ, ''ಸಂಯುಕ್ತ ಹೊಡೆದಿದ್ದು ತಪ್ಪು.?'' ಎಂಬ ಮಾತು ನಿಮ್ಮಂಥ ವ್ಯಕ್ತಿ ಬಾಯಿಂದ ಬಂದಿದ್ರೆ ಚೆನ್ನಾಗಿರೋದು ಅಲ್ವೇ.?'' ಎಂದು ಜಯಶ್ರೀನಿವಾಸನ್ ಗೆ ಸುದೀಪ್ ಕೇಳಿದರು.

ಜಯಶ್ರೀನಿವಾಸನ್ ಹೇಳಿದ್ದೇನು.?

ಜಯಶ್ರೀನಿವಾಸನ್ ಹೇಳಿದ್ದೇನು.?

''ಸಮೀರಾಚಾರ್ಯ ವಿಷಯದಲ್ಲಿ ಪ್ರತಿಕ್ರಿಯೆ ನೀಡುವುದನ್ನು ನಾನು ನಿಲ್ಲಿಸಿ ತುಂಬಾ ದಿನ ಆಯ್ತು. ಆ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆ ನೋಡಿ ನಾನು ಸ್ತಬ್ಧ ಆದೆ. ನಮಗೆ ಮಾತನಾಡುವ ಅವಕಾಶ ಸಿಗಲಿಲ್ಲ. ಸಮೀರಾಚಾರ್ಯ ಮಾತನಾಡುವುದನ್ನು ನಿಲ್ಲಿಸಿದ ಮೇಲೆ ಚಂದನ್ ಹಾಗೂ ದಿವಾಕರ್ ಮಾತನಾಡಿದ್ದು'' ಎಂದರು ಜಯಶ್ರೀನಿವಾಸನ್.

ಯಾರ ವ್ಯಕ್ತಿತ್ವ ಹೇಗೆ.?

ಯಾರ ವ್ಯಕ್ತಿತ್ವ ಹೇಗೆ.?

''ಹೊಡೆದಿದ್ದರಿಂದ ಸಂಯುಕ್ತ ಅವರ ವ್ಯಕ್ತಿತ್ವ ಹೊರಗೆ ಬರುತ್ತೆ, ಕೂಗಾಡುವುದರಿಂದ ಸಮೀರಾಚಾರ್ಯ ಅವರ ವ್ಯಕ್ತಿತ್ವ ಹೊರಗೆ ಬರುತ್ತೆ. ಏನೂ ಮಾತನಾಡದೆ ಸುಮ್ಮನೆ ಇರುವುದರಿಂದ ನಿಮ್ಮೆಲ್ಲರ ವ್ಯಕ್ತಿತ್ವ ಹೊರಗೆ ಬರುತ್ತದೆ. ನಾನು ಅದರ ಬಗ್ಗೆ ಮಾತನಾಡುತ್ತಿದ್ದೇನೆ'' ಅಂತ ಸುದೀಪ್ ಮರು ಪ್ರಶ್ನಿಸಿದರು.

ತಪ್ಪು ಒಪ್ಪಿಕೊಂಡ ಜಯಶ್ರೀನಿವಾಸನ್

ತಪ್ಪು ಒಪ್ಪಿಕೊಂಡ ಜಯಶ್ರೀನಿವಾಸನ್

''ಹೌದು, ಇದನ್ನ ನಾನು ಒಪ್ಪಿಕೊಳ್ಳುತ್ತೇನೆ. ನಾನೂ ಯಾವ ಪ್ರತಿಕ್ರಿಯೆ ಕೂಡ ಕೊಡಲಿಲ್ಲ'' ಎಂದು ತಮ್ಮ ತಪ್ಪನ್ನ ಜಯಶ್ರೀನಿವಾಸನ್ ಒಪ್ಪಿಕೊಂಡರು.

ಜೆಕೆಗೆ ಪ್ರಶ್ನಿಸಿದ ಸುದೀಪ್

ಜೆಕೆಗೆ ಪ್ರಶ್ನಿಸಿದ ಸುದೀಪ್

''ಘಟನೆ ನಡೆದಾಗ ನೀವು ಪಕ್ಕದಲ್ಲಿಯೇ ಇದ್ರಿ. ಹತ್ತಿರದಿಂದ ಎಲ್ಲವನ್ನೂ ನೋಡಿದ್ರಿ. ಆಕಸ್ಮಿಕವಾಗಿ ನಿಮ್ಮ ಕೈ ಕೂಡ ತಾಗಿರಬಹುದು. 'ಜೆಕೆ ಮುಟ್ಟಲಿಲ್ಲ' ಅಂತ ಸಂಯುಕ್ತ ಹೇಳಿದರು. ಆದ್ರೆ, ನೀವೇನು ಮಾತನಾಡಲೇ ಇಲ್ವಲ್ಲ.? ಎಲ್ಲರೂ ತುಂಬಾ ನ್ಯೂಟ್ರಲ್ ಆದರು'' ಎಂದು ಜೆಕೆಗೆ ಸುದೀಪ್ ಪ್ರಶ್ನಿಸಿದರು.

ಘಟನೆ ಹೇಗಾಯ್ತು ಅಂತ ನೋಡಲಿಲ್ಲ

ಘಟನೆ ಹೇಗಾಯ್ತು ಅಂತ ನೋಡಲಿಲ್ಲ

''ನಾನು ಸಂಯುಕ್ತ ರನ್ನ ಎಳೆಯಲಿಲ್ಲ. ಇದಕ್ಕಿಂತ ಕೆಟ್ಟ ಸನ್ನಿವೇಶವನ್ನ ನಾನು ನೋಡಿದ್ದೇನೆ. ಜಗಳ ನಿಲ್ಲಿಸುವ ಪ್ರಯತ್ನವನ್ನೂ ನಾನು ಮಾಡಿದ್ದೇನೆ. ನನ್ನ ಕಣ್ಣ ಮುಂದೆಯೇ 'ಬೇಕು' ಅಂತ ಹೊಡೆದಿರುವುದನ್ನೂ ನಾನು ನೋಡಿದ್ದೇನೆ. ಇದೆಲ್ಲ ಆದ್ಮೇಲೆ ಕೇರ್ ಮಾಡಬಾರದು ಅಂತ ಬಿಟ್ಟುಬಿಟ್ಟೆ. ಆದ್ರೆ, ಇಲ್ಲಿ ಘಟನೆ ಹೇಗಾಯ್ತು ಅಂತ ನಾನು ನೋಡಲಿಲ್ಲ. ನೋಡಿದ್ರೆ, ಸಂಯುಕ್ತ ಮಾಡಿದ್ದು ತಪ್ಪು ಅಂತ ಹೇಳುತ್ತಿದ್ದೆ'' ಎಂದು ಸ್ಪಷ್ಟನೆ ನೀಡಿದರು ಜಯರಾಂ ಕಾರ್ತಿಕ್.

ಯಾರು ಯಾರಿಗೆ ಹೊಡೆದರು.?

ಯಾರು ಯಾರಿಗೆ ಹೊಡೆದರು.?

''ಯಾವ ಸಂದರ್ಭದಲ್ಲಿ ಯಾರು ಯಾರಿಗೆ ಹೊಡೆದರು. ಯಾರಿಗಾಗಿ ನೀವು ಸೈಲೆಂಟ್ ಆಗಿದ್ರಿ'' ಎಂದು ಸುದೀಪ್ ಕೇಳಿದಾಗ, ''ಚಂದನ್ - ದಿವಾಕರ್ ಬಟ್ಟೆ ಹರಿದು ಜಗಳ ಮಾಡಿಕೊಂಡಿದ್ರು. ಜಗಳ ಬಿಡಿಸಲು ನಾನು ಮಧ್ಯಕ್ಕೆ ಹೋದಾಗ, ನನ್ನ ಮೇಲೆ ಕೈ ಬಂದಿತ್ತು. ಜಯಶ್ರೀನಿವಾಸನ್ ಹಾಗೂ ದಿವಾಕರ್ ಮಧ್ಯೆಯೂ ಒಮ್ಮೆ ಗಲಾಟೆ ನಡೆಯಿತು. ಮಧ್ಯೆ ಹೋಗಿ ನಾನು ನಿಲ್ಲಿಸಿದೆ. ಇಲ್ಲ ಅಂದ್ರೆ ಅದು ಬೇರೆ ಹಂತಕ್ಕೆ ಹೋಗುತ್ತಿತ್ತು. ಕಾಡಿನ ಟಾಸ್ಕ್ ನಡೆಯುತ್ತಿದ್ದಾಗ, ಟೇಬಲ್ ಕೆಳಗೆ ರಿಯಾಝ್ ಹಾಗೂ ದಿವಾಕರ್ ಮಧ್ಯೆ ಜಗಳ ನಡೆಯಿತು. ರಿಯಾಝ್ ಗೆ ದಿವಾಕರ್ ಮಾತಾಡಿ ಮಾತಾಡಿ ಹೊಡೆದರು. ಕಾಲು ಹಿಡಿದುಕೊಳ್ಳಲು ರಿಯಾಝ್ ಮುಂದಾದಾಗ, ದಿವಾಕರ್ ಬೇಕು ಅಂತಲೇ ಒದ್ದರು. ರಿಯಾಝ್ ಗೆ ಏಟಾಯ್ತು. ನಾನು ಅದನ್ನ ಹೇಳ್ದೆ. ಆದ್ರೆ ಏನೂ ಆಗಲಿಲ್ಲ'' ಎಂದರು ಜಯರಾಂ ಕಾರ್ತಿಕ್.

ರಿಯಾಝ್ ಏನಂತಾರೆ.?

ರಿಯಾಝ್ ಏನಂತಾರೆ.?

ಜೆಕೆ ಮಾತಿಗೆ ದನಿಗೂಡಿಸಿದ ರಿಯಾಝ್, ''ಬೇಕು ಅಂತಲೇ ದಿವಾಕರ್ ಹಾಗೆ ಮಾಡಿದ್ದು'' ಎಂದರು.

ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟೆ

ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟೆ

''ಬೇಕು ಅಂತ ಇಲ್ಲಿಯವರೆಗೂ ನಾನು ಯಾರಿಗೂ ಹೊಡೆದಿಲ್ಲ. ಚಂದನ್ ನನ್ನ ಬಟ್ಟೆ ಹರಿದಿದ್ದಕ್ಕೆ ನಾನು ಹರಿದು ಹಾಕಿದೆ ಅಷ್ಟೇ. ರಿಯಾಝ್ ನನ್ನ ಕಾಲು ಹಿಡಿದುಕೊಂಡಾಗ ಬಿಡಿಸಿಕೊಳ್ಳಲು ನಾನು ಪ್ರಯತ್ನ ಪಟ್ಟೆ. ನಾನು ಹೊಡೆದಿದ್ದಕ್ಕೆ ಅವರಿಗೆ ಏಟಾಗಲಿಲ್ಲ. ನೀವು ಬೇಕಾದರೆ ಕ್ಯಾಮರಾದಲ್ಲಿ ನೋಡಿ ಹೇಳಿ'' ಎಂದು ಸ್ಪಷ್ಟ ಪಡಿಸಿದರು ದಿವಾಕರ್.

ಹೀಗೆ ಕಾಣಿಸಬೇಕು ಅಂತ ಇದ್ರೆ....

ಹೀಗೆ ಕಾಣಿಸಬೇಕು ಅಂತ ಇದ್ರೆ....

''ಬೇಕು ಅಂತ ಹಾಗೆ ಮಾಡಿದ್ರೆ, ನಮಗೂ ಹಾಗೆ ಅನಿಸಿದ್ರೆ, ದಿವಾಕರ್ ಇಷ್ಟು ದಿನ ಒಳಗೆ ಇರುತ್ತಿರಲಿಲ್ಲ. ಕೆಲವು ಗಲಾಟೆ ಬೇಡ ಅನ್ಸುತ್ತೆ. ಕೈ ಮಾಡುವುದರಿಂದ ಇಡೀ ಮನೆಯ ವಾತಾವರಣ ಹಾಳಾಗುತ್ತದೆ. ಎಲ್ಲರಿಗೂ ಕೋಪ ಇದೆ. ಸ್ವಲ್ಪ ಕಂಟ್ರೋಲ್ ನಲ್ಲಿ ಇರಲಿ. ಉಳಿದದ್ದು ನಿಮಗೆ ಬಿಟ್ಟಿದ್ದು. 'ನಾನು ಪ್ರಪಂಚಕ್ಕೆ ಹೀಗೆ ಕಾಣಿಸಬೇಕು' ಅಂತ ಹಠ ಮಾಡಿದ್ರೆ, ಹಾಗೇ ಕಾಣಿಸಿಕೊಳ್ಳಿ...'' ಎಂದು ಬೇಸರದಿಂದ ನುಡಿದರು ಕಿಚ್ಚ ಸುದೀಪ್.

More from Filmibeat

English summary
Bigg Boss Kannada 5: Week 10: Kiccha Sudeep questions all contestants for their behaviour when Samyuktha assaulted Sameeracharya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X