ಕಾರಣ ಇಲ್ಲದೆ ಕೂಗಾಡುವ ನಟಿ ಅನುಪಮಾ ಗೌಡಗೆ ಬೆಂಡೆತ್ತಿದ ಸುದೀಪ್.!

By Harshitha

ಅನೇಕ ಬಾರಿ ಕೂಗಾಡಿ, ಕಿರುಚಾಡಿ 'ಬಿಗ್ ಬಾಸ್' ಮನೆಯೊಳಗೆ ಸೀನ್ ಕ್ರಿಯೇಟ್ ಮಾಡಿರುವ ನಟಿ ಅನುಪಮಾ ಗೌಡ ರನ್ನ ವೀಕ್ಷಕರು 'ಡ್ರಾಮಾ ಕ್ವೀನ್' ಅಂತಲೇ ಕರೆಯಲು ಶುರು ಮಾಡಿದ್ದಾರೆ. ಇಂತಿಪ್ಪ ಅನುಪಮಾ ಗೌಡಗೆ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಿದ್ದಾರೆ.

'ಮೇಲಾ ಫೀಮೇಲಾ' ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿ ಇದ್ದ ಸಂದರ್ಭದಲ್ಲಿ ಪುರುಷರ ತಂಡ ಮಹಿಳೆಯರ ಮೇಲೆ ಟೊಮೊಟೊ ಎಸೆಯಬೇಕಿತ್ತು. ಹಾಗೆ ಎಸೆಯುತ್ತಿರುವಾಗ, ಚಂದನ್ ಶೆಟ್ಟಿ ಎಸೆದ ಟೊಮೊಟೋ ಶ್ರುತಿ ಪ್ರಕಾಶ್ ಮೇಲೆ ಬಿತ್ತು. ಆಗ ಶ್ರುತಿ ಪ್ರಕಾಶ್ ತುಟಿಕ್ ಪಿಟಿಕ್ ಎನ್ನಲಿಲ್ಲ. ಬದಲಾಗಿ ಅನುಪಮಾ ಗೌಡ ಉಗ್ರಾವತಾರ ತಾಳಿದರು.

ಅನುಪಮಾ ರವರ ಈ ವರ್ತನೆ ಸರಿಯೇ ಎಂಬುದರ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪಂಚಾಯತಿ ನಡೆಸಿದ ಪರಿ ಇದು...

ಅನುಪಮಾಗೆ ಸುದೀಪ್ ಪ್ರಶ್ನೆ

ಅನುಪಮಾಗೆ ಸುದೀಪ್ ಪ್ರಶ್ನೆ

''ಚಂದನ್ ಎಸೆದ ಟೊಮೊಟೊ ಶ್ರುತಿಗೆ ಬೀಳುತ್ತದೆ. ಆದ್ರೆ, ಕೂಗಾಡಿದ್ದು ತಾವು'' ಎಂದು ಅನುಪಮಾಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪ್ರಶ್ನಿಸಿದರು.

ಅನುಪಮಾ ಕೊಟ್ಟ ಸಬೂಬು ಏನು.?

ಅನುಪಮಾ ಕೊಟ್ಟ ಸಬೂಬು ಏನು.?

''ಏಟು ಬಿದ್ದಿದ್ದಕ್ಕೆ, ಕೂಗಾಡಲಿಲ್ಲ. ಅವನು ಎಸೆಯುತ್ತಿದ್ದ ರೀತಿ ಹಾಗೂ ಅವನ ಮುಖ ನೋಡಿ ಕೂಗಾಡಿದ್ದು. ಅವನು ಬೇಕು ಅಂತಲೇ ಜೋರಾಗಿ ಹೊಡೆಯುತ್ತಿದ್ದ ಅಂತ ನನಗೆ ಅನಿಸುತ್ತಿತ್ತು. ನೋವಿಗಾಗಿ ಕಿರುಚಾಡಲಿಲ್ಲ. ತಲೆಯಲ್ಲಿ ಹಳೆಯದ್ದನ್ನೆಲ್ಲ ಇಟ್ಟುಕೊಂಡು ಹೊಡೆಯಬೇಡ ಅಂತ ನಾನು ಹೇಳಿದೆ'' ಎಂದು ಸಬೂಬು ನೀಡಿದರು ಅನುಪಮಾ.

ಹಳೆಯದ್ದು ಏನಿದೆ.?

ಹಳೆಯದ್ದು ಏನಿದೆ.?

''ಹಳೆಯದ್ದು ಏನಿರಬಹುದು.?'' ಎಂದು ಸುದೀಪ್ ಕೇಳಿದಾಗ, ''ನನಗೆ ಗೊತ್ತಿಲ್ಲ. ಚಂದನ್ ಹೇಳಬೇಕು'' ಎಂದರು ಅನುಪಮಾ.

ಚಂದನ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು.?

ಚಂದನ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು.?

''ಹಳೆಯದ್ದು ಏನೂ ಇಲ್ಲ. ನನಗೆ ಅವರ ಮೇಲೆ ಯಾವ ಕೋಪ ಕೂಡ ಇಲ್ಲ. ಅನುಪಮಾ ಹೊಡೆದ ಟೊಮೊಟೊ ಮೊದಲು ಬಿದ್ದಿದ್ದು ನನಗೆ. ಪೋರ್ಸ್ ನಲ್ಲಿಯೇ ನಮಗೂ ಟೊಮೊಟೊ ಬಂದು ಬಿತ್ತು. ಮರದ ದಿಮ್ಮಿಯಿಂದ ಕೆಳಗೆ ಇಳಿದರೆ, ಟಾಸ್ಕ್ ನಿಂದ ಹೊರಬೀಳುತ್ತಿದ್ದರು. ಭಯಪಟ್ಟುಕೊಂಡು ಇಳಿಯಲಿ ಎಂಬ ಕಾರಣಕ್ಕೆ ನಾವು ಜೋರಾಗಿ ಎಸೆದಿರಬಹುದು. ಆದ್ರೆ, ಅವರು ಅದನ್ನ ಅರ್ಥ ಮಾಡಿಕೊಳ್ಳಲಿಲ್ಲ. ಟಾಸ್ಕ್ ನಿಂದ ಹೊರಬರಲು ಇಷ್ಟ ಇರಲಿಲ್ಲ. ಅದಕ್ಕೆ ಕಿರುಚಾಡಿದ್ದಾರೆ'' ಎಂದು ಸ್ಪಷ್ಟನೆ ಕೊಟ್ಟರು ಚಂದನ್ ಶೆಟ್ಟಿ.

ಕಾಮೆಂಟ್ ಪಾಸ್ ಆಗುತ್ತಿತ್ತು

ಕಾಮೆಂಟ್ ಪಾಸ್ ಆಗುತ್ತಿತ್ತು

''ಇಡೀ ವಾರ ಕೆಲವು ಕಾಮೆಂಟ್ ಗಳು ಪಾಸ್ ಆಗುತ್ತಿತ್ತು. ನಾಟಕ ಮಾಡುತ್ತಾರೆ ಅಂತೆಲ್ಲ ಹೇಳಲು ಶುರು ಮಾಡಿದಾಗ, ಕೃಷಿ ಕಣ್ಣೀರಿಟ್ಟರು. ನಾನು ಕೂಡ ಬೇಜಾರು ಮಾಡಿಕೊಂಡಿದ್ದು ಆಗಲೇ'' ಎಂದರು ಅನುಪಮಾ.

ಕಾರಣ ಇಲ್ಲದೆ ಕೂಗಾಡಿದ್ದೀರಾ

ಕಾರಣ ಇಲ್ಲದೆ ಕೂಗಾಡಿದ್ದೀರಾ

''ಕೆಲವು ಬಾರಿ ಕಾರಣ ಇಲ್ಲದೆ ಕೂಗಾಡಿದ್ದೀರಾ. ಕೆಲವು ಬಾರಿ ಕಾರಣ ಇದ್ದರೂ, ಅವೆಲ್ಲ ಸಣ್ಣ ಕಾರಣಗಳು. ಈ ಮಾತು ಶ್ರುತಿ ಅವರಿಗೂ ಅನ್ವಯ ಆಗುತ್ತದೆ'' ಎಂದು ಹೇಳುವ ಮೂಲಕ ಸುಮ್ ಸುಮ್ನೆ ಕೂಗಾಡುವ ಅನುಪಮಾಗೆ ಸುದೀಪ್ ಬೆಂಡೆತ್ತಿದರು.

More from Filmibeat

English summary
Bigg Boss Kannada 5: Week 10: Kiccha Sudeep questions Anupama Gowda in 'Varada Kathe Kicchana Jothe'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X