Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?

ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆ ಒಳಗೆ ಹೋಗಲು ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 'ಬಿಗ್ ಬಾಸ್' ಆಯೋಜಕರು 'ವೂಟ್' ಮೂಲಕ ಅರ್ಜಿ ಆಹ್ವಾನಿಸಿದ್ದರು.
'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!
ಕಿರುತೆರೆಯ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' ನಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಷ್ಟು ಮಂದಿ 'ಬಿಗ್ ಬಾಸ್' ಮನೆ ಒಳಗೆ ಕಾಲಿಡ್ತಾರೋ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಹೀಗಿರುವಾಗಲೇ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಆಗಿದೆ.
'ಬಿಗ್ ಬಾಸ್-5'ಗೆ ಸ್ವರ್ಧಿಗಳ ಬೇಟೆ ಶುರು.! ಈ ಬಾರಿ 'ಕಾಮನ್ ಮ್ಯಾನ್' ಎಂಟ್ರಿ ಪಕ್ಕಾ
ಹೊಸ ಪ್ರೋಮೋ ನೋಡಿದ್ರೆ, ಈ ಬಾರಿಯ 'ಬಿಗ್ ಬಾಸ್' ಆವೃತ್ತಿಯಲ್ಲಿ 'ಕಾಮನ್ ಮ್ಯಾನ್'ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಹಾಗಿದೆ. ಮುಂದೆ ಓದಿರಿ...

ಎರಡನೇ ಪ್ರೋಮೋ ಮಾರ್ಕೆಟ್ ಸೆಟ್ ನಲ್ಲಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎರಡನೇ ಪ್ರೋಮೋ ಮಾರ್ಕೆಟ್ ಸೆಟ್ ನಲ್ಲಿ ಚಿತ್ರೀಕರಣಗೊಂಡಿತ್ತು. ಹೊಸ ಅತಿಥಿಗಳಿಗೆ ಅಡುಗೆ ಮಾಡಲು ಸುದೀಪ್ ತರಕಾರಿ ಖರೀದಿಸುವ ಪ್ರೋಮೋ ಅದಾಗಿತ್ತು. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಹೊಸ ಪ್ರೋಮೋ ನೋಡಿ...
ಇದೀಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ 'ಬಿಗ್ ಬಾಸ್' ಮನೆ ಒಳಗೆ ಹೋಗಲು ಜನಸಾಮಾನ್ಯರು ಸುದೀಪ್ ಬಳಿ ಕೇಳುವ ಹಾಗೆ ಚಿತ್ರಿಸಲಾಗಿದೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಇದರ ಅರ್ಥ ಏನಿರಬಹುದು.?
ಈ ಎರಡು ಪ್ರೋಮೋಗಳನ್ನು ಗಮನಿಸಿದರೆ, ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಸೂಚನೆ ನೀಡಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿಲ್ಲ 'ಬಿಗ್ ಬಾಸ್ ಕನ್ನಡ-5' ಪ್ರಸಾರ.!

ವೀಕ್ಷಕರ ಅಭಿಲಾಷೆ ಕೂಡ ಅದೇ ಆಗಿತ್ತು.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರೈತರು, ಯೋಧರು ಭಾಗವಹಿಸಬೇಕು ಎಂಬುದು ಹಲವು ವೀಕ್ಷಕರ ಇಚ್ಛೆ ಆಗಿತ್ತು. ಅದು ಈ ಬಾರಿ ಈಡೇರುತ್ತಾ ಕಾದು ನೋಡೋಣ. ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ಅಕ್ಟೋಬರ್ 15ಕ್ಕೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ.