ಈ ವಾರ ನಾಮಿನೇಷನ್ ನಲ್ಲಿ 'ಜೋಡಿ' ಶಾಕ್ ಕೊಟ್ಟ ಬಿಗ್ ಬಾಸ್

By Bharath Kumar

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಸ್ಪರ್ಧಿಗಳಿಗೆ ಕಾದಿತ್ತು ಜೋಡಿ ಶಾಕ್ | Filmibeat Kannada

'ಬಿಗ್ ಬಾಸ್' 9ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಬಹುದೊಡ್ಡ ಶಾಕ್ ಎದುರಾಗಿದೆ. ಮನೆ ಸದಸ್ಯರ ನಿರೀಕ್ಷೆಯಂತೆ ಈ ವಾರ ನಾಮಿನೇಷನ್ ಪ್ರಕ್ರಿಯೆ ಆಗಲಿಲ್ಲ. ಎಲ್ಲರೂ ಯೋಚನೆ ಮಾಡಿದ್ದೇ ಒಂದು ಆದ್ರೆ, ಅಲ್ಲಿ ಆಗಿದ್ದೇ ಒಂದು.

ಈ ವಾರ ಯಾರು ನಾಮಿನೇಟ್ ಆಗಬಹುದು. ಯಾರೂ ಯಾರಿಗೆ ವೋಟ್ ಹಾಕಬೇಕು ಎಂದು ಮೊದಲೇ ನಿರ್ಧಾರ ಮಾಡಿ ಸಿದ್ದವಾಗಿದ್ದರು. ಆದ್ರೆ, ಬಿಗ್ ಬಾಸ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿಬಿಟ್ಟರು.

ತಮಗೆ ತಾವೇ ನಾಮಿನೇಟ್ ಮಾಡಿಕೊಳ್ಳುವಂತಹ ಸಂದರ್ಭಕ್ಕೆ ತಂದುಬಿಟ್ಟರು. ಹಾಗಿದ್ರೆ, ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವುದು ಯಾರು? ಎಂಬ ಪೂರ್ತಿ ಮಾಹಿತಿ ತಿಳಿಯಲು ಈ ಸ್ಟೋರಿ ಓದಿ.....

'ಜೋಡಿ' ನಾಮಿನೇಷನ್

'ಜೋಡಿ' ನಾಮಿನೇಷನ್

ನಾಮಿನೇಷನ್ ಗೆ ಮೊದಲು ಜೋಡಿ ಟಾಸ್ಕ್ ನೀಡಿದರು. ಇಬ್ಬರನ್ನ ಒಂದು ಜೋಡಿಯಾಗಿಸಿ ಅವರ ಕೈಗೆ ಬೇಡಿ ಹಾಕಿದರು. ಈ ವಾರ ಪೂರ್ತಿ ಇಬ್ಬರು ಜೋಡಿಯಾಗಿ ಟಾಸ್ಕ್ ಮಾಡಬೇಕು ಎಂಬ ಸೂಚನೆ ಸಿಕ್ಕುವಷ್ಟರಲ್ಲಿ, ನಾಮಿನೇಷನ್ ಕೂಡ ಇಬ್ಬರು ಸೇರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಆದ್ರೆ, ಬೇರೆಯವರನ್ನ ನಾಮಿನೇಟ್ ಮಾಡುವಂತಿಲ್ಲ. ಅವರಿಬ್ಬರಲ್ಲಿ ಒಬ್ಬರನ್ನ ತಾವೇ ನಾಮಿನೇಟ್ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಜಯಶ್ರೀನಿವಾಸನ್ ನಾಮಿನೇಟ್

ಜಯಶ್ರೀನಿವಾಸನ್ ನಾಮಿನೇಟ್

ಜಯ ಶ್ರೀನಿವಾಸನ್ ಮತ್ತು ರಿಯಾಜ್ ಜೋಡಿಯಲ್ಲಿ ಜಯಶ್ರೀನಿವಾಸನ್ ಹೊರಹೋಗಲು ನಾಮಿನೇಟ್ ಮಾಡಿಕೊಂಡರು. ರಿಯಾಜ್ ಸೇಫ್ ಆದರು.

ದಿವಾಕರ್ ಮಿಸ್ ಆಗಲಿಲ್ಲ

ದಿವಾಕರ್ ಮಿಸ್ ಆಗಲಿಲ್ಲ

ಸಮೀರಾಚಾರ್ಯ ಮತ್ತು ದಿವಾಕರ್ ಜೋಡಿಯಲ್ಲಿ, ದಿವಾಕರ್ ಅವರು ನಾಮಿನೇಟ್ ಮಾಡಿಕೊಂಡರು. ಸಮೀರ್ ಅವರು ಇಲ್ಲಿ ಸೇಫ್ ಆದರು.

ಚಂದನ್ ಶೆಟ್ಟಿ ನಾಮಿನೇಟ್

ಚಂದನ್ ಶೆಟ್ಟಿ ನಾಮಿನೇಟ್

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೋಡಿಯಲ್ಲಿ Rap ಸಿಂಗರ್ ತಮ್ಮನ್ನ ತಾವು ನಾಮಿನೇಟ್ ಮಾಡಿದರು. ನಿವೇದಿತಾ ಗೌಡ ಸೇಫ್ ಆದರು.

ಶ್ರುತಿ ಪ್ರಕಾಶ್ ಟಾರ್ಗೆಟ್

ಶ್ರುತಿ ಪ್ರಕಾಶ್ ಟಾರ್ಗೆಟ್

ಅನುಪಮಾ ಗೌಡ ಮತ್ತು ಶ್ರುತಿ ಪ್ರಕಾಶ್ ಅವರು ಜೋಡಿಯಲ್ಲಿ, ಶ್ರುತಿ ಪ್ರಕಾಶ್ ಅವರನ್ನ ನಾಮಿನೇಟ್ ಮಾಡಿಕೊಂಡರು. ಅನುಪಮಾ ಗೌಡ ಬಚಾವ್ ಆದರು.

ಜಗನ್ ಗೂ ಕಂಟಕ

ಜಗನ್ ಗೂ ಕಂಟಕ

ಕಾರ್ತಿಕ್ ಜಯರಾಂ ಮತ್ತು ಜಗನ್ನಾಥ್ ಅವರ ಜೋಡಿಯಲ್ಲಿ ಜಗನ್ ನಾಮಿನೇಟ್ ಮಾಡಿಕೊಂಡರು. ಜೆಕೆ ಸೇಫ್ ಆದರು.

ಜಸ್ಟ್ ಮಿಸ್ ಆದ ಸಮೀರ್, ಕ್ಯಾಪ್ಟನ್ ಕಣ್ಣಿಗೆ ಬಿದ್ದರು

ಜಸ್ಟ್ ಮಿಸ್ ಆದ ಸಮೀರ್, ಕ್ಯಾಪ್ಟನ್ ಕಣ್ಣಿಗೆ ಬಿದ್ದರು

ಈ ವಾರದ ಮನೆಯ ಕ್ಯಾಪ್ಟನ್ ಕೃಷಿ ತಾಪಂಡ ಅವರಿಂದ ಸಮೀರಾಚಾರ್ಯ ಅವರು ನೇರವಾಗಿ ನಾಮಿನೇಟ್ ಆದರು.

ಈ ವಾರ ಯಾರಿಗೆ ಗೇಟ್ ಪಾಸ್?

ಈ ವಾರ ಯಾರಿಗೆ ಗೇಟ್ ಪಾಸ್?

ದಿವಾಕರ್, ಜಯಶ್ರೀನಿವಾಸನ್, ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ಜಗನ್ ಹಾಗೂ ಸಮೀರಾಚಾರ್ಯ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಆರು ಜನರಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂದು ವೀಕೆಂಡ್ ನಲ್ಲಿ ಗೊತ್ತಾಗಲಿದೆ.

More from Filmibeat

English summary
Bigg Boss Kannada 5: Week 9: Diwakar, Sameeracharya, Jayasreenivasan, Shruti Prakash, Chandan Shetty, jagan are nominated for this week's elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X