»   » 'ಬಿಗ್ ಬಾಸ್' ಪ್ರೋಮೋ ಶೂಟ್ ಗೆ ತಯಾರಿ, ಹೇಗಿರುತ್ತೆ 'ಸೀಸನ್-5' ಟೀಸರ್?

'ಬಿಗ್ ಬಾಸ್' ಪ್ರೋಮೋ ಶೂಟ್ ಗೆ ತಯಾರಿ, ಹೇಗಿರುತ್ತೆ 'ಸೀಸನ್-5' ಟೀಸರ್?

Posted By:
Subscribe to Filmibeat Kannada
Bigg Boss Kannada Season 5 might start from September 23rd or October 9th

'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿ ಆರಂಭವಾಗಲಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಈಗ ಪ್ರೋಮೋ ಶೂಟ್ ಮಾಡಲು ತಯಾರಿ ನಡೆಯುತ್ತಿದೆ.

ಈ ಬಾರಿಯ ಬಿಗ್ ಬಾಸ್ ತುಂಬಾನೆ ವಿಶೇಷವಾಗಿರುತ್ತೆ. ಯಾಕಂದ್ರೆ, ಸೆಲೆಬ್ರಿಟಿಗಳ ಜೊತೆ ಶ್ರೀಸಾಮಾನ್ಯರು ಕೂಡ ಬಿಗ್ ಮನೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆವೃತ್ತಿಯ ಪ್ರೋಮೋ ಕೂಡ ಅಷ್ಟೇ ವಿಶೇಷವಾಗಿರಲಿದೆ.

ಬಿಗ್ ಬಾಸ್ ಪ್ರೋಮೋ ಶೂಟಿಂಗ್ ಗೆ ಕಿಚ್ಚ ಸುದೀಪ್ ಕೂಡ ಸಿದ್ದವಾಗಿದ್ದು, ಒಂದು ಸುತ್ತಿನ ಚರ್ಚೆ ನಡೆದಿದೆ. ಹಾಗಿದ್ರೆ, ಬಿಗ್ ಬಾಸ್ ಕನ್ನಡ 5 ಪ್ರೋಮೋ ಹೇಗಿರುತ್ತೆ? ಮುಂದೆ ನೋಡಿ....

'ಬಿಗ್ ಬಾಸ್ ಕನ್ನಡ-5'ಗೆ ಕೌಂಡೌನ್!

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ಸೆಪ್ಟಂಬರ್ 23 ಅಥವಾ ಅಕ್ಟೋಬರ್ 7 ರಿಂದ ಆರಂಭವಾಗಲಿದೆ ಎನ್ನಲಾಗಿದೆ. ಅದಕ್ಕಾಗಿ ಎಲ್ಲ ರೀತಿ ಸಿದ್ದತೆ ನಡೆದಿದೆ.

ಸುದೀಪ್ ಸಾರಥ್ಯದ 'ಬಿಗ್ ಬಾಸ್ ಸೀಸನ್ 5'ಗೆ ದಿನಾಂಕ ನಿಗದಿ

ಸದ್ಯದಲ್ಲೇ ಪ್ರೋಮೋ ಶೂಟ್

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಗೆ ಪ್ರೋಮೋ ಶೂಟ್ ಮಾಡಲು ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಜ್ಜಾಗಿದ್ದು, ಈ ಬಗ್ಗೆ ನಟ-ನಿರೂಪಕ ಕಿಚ್ಚ ಸುದೀಪ್ ಅವರ ಜೊತೆ ಚರ್ಚೆ ಕೂಡ ಮಾಡಿದ್ದಾರೆ.

ಹತ್ತು-ಹಲವು ಸರ್ಪೈಸ್ ಗಳೊಂದಿಗೆ ಬರಲಿದೆ 'ಬಿಗ್ ಬಾಸ್ ಕನ್ನಡ-5'

'ಬಿಗ್ ಬಾಸ್' ಪ್ರೋಮೋ ಹೇಗಿರಬಹುದು?

ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರು ಕೂಡ ಭಾಗಿಯಾಗುತ್ತಿರುವುದರಿಂದ ಕಾಮನ್ ಮ್ಯಾನ್ ಅವರನ್ನ ಮುಖ್ಯವಾಗಿಸಿ ಪ್ರೋಮೋ ಶೂಟ್ ಮಾಡುವ ಸಾಧ್ಯತೆ ಇದೆ.

'ಬಿಗ್ ಬಾಸ್-5'ಗೆ ಸ್ವರ್ಧಿಗಳ ಬೇಟೆ ಶುರು.! ಈ ಬಾರಿ 'ಕಾಮನ್ ಮ್ಯಾನ್' ಎಂಟ್ರಿ ಪಕ್ಕಾ

ಸ್ಫರ್ದಿಗಳ ಆಯ್ಕೆ ಪ್ರಗತಿಯಲ್ಲಿದೆ

ಇನ್ನು 5ನೇ ಆವೃತ್ತಿಯಲ್ಲಿ ಭಾಗವಹಿಸುವ ಸ್ಫರ್ದಿಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವ ಬಿಗ್ ಬಾಸ್ ತಂಡ, ಈಗಾಗಲೇ ಸ್ಪರ್ಧಿಗಳನ್ನ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಕೇವಲ ಒಂದು ತಿಂಗಳು ಮಾತ್ರ ಕಾಲಾವಕಾಶವಿದ್ದು, ಆಯ್ಕೆಯಾಗಿರುವ ಸೆಲೆಬ್ರಿಟಿ ಮತ್ತು ಕಾಮನ್ ಮ್ಯಾನ್ ಗಳ ವಿವರವನ್ನ ಗೌಪ್ಯವಾಗಿಡಲಾಗಿದೆ.

ಸುದೀಪ್ ಮುಂದಿನ ಯೋಜನೆ?

'ದಿ ವಿಲನ್' ಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ಗೆ ತೆರಳಿದ್ದ ಕಿಚ್ಚ ಸುದೀಪ್ ಈಗ ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದಾರೆ. 'ವಿಲನ್' ಚಿತ್ರದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿರುವ ಹೊಸ ಚಿತ್ರದಲ್ಲಿ ಸುದೀಪ್ ತೊಡಗಿಸಿಕೊಳ್ಳಬೇಕಿದೆ. ಇದರ ಮಧ್ಯೆ ಬಿಗ್ ಬಾಸ್ ಮುಗಿಸುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

English summary
According to the sources, 'Bigg Boss Kannada Season 5' might start from September 23rd or October 9th. now getting ready for promo shoot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada