ಸದ್ಯದಲ್ಲೇ ದಿವಾಕರ್ 'ಹೀರೋ' ಆದರೆ ಅಚ್ಚರಿ ಪಡಬೇಡಿ.!

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಿ ಇನ್ನೂ ಎರಡು ದಿನ ಕಳೆದಿಲ್ಲ. ನ್ಯೂಸ್ ಚಾನೆಲ್ ಗಳಿಗೆ 'ಬಿಗ್ ಬಾಸ್' ಸ್ಪರ್ಧಿಗಳು ಇನ್ನೂ ಸಂದರ್ಶನ ನೀಡುವುದೂ ಮುಗಿದಿಲ್ಲ. ನಿನ್ನೆ ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಟ್ಟ ಸ್ಪರ್ಧಿಗಳು ಇನ್ನೂ ಕುಟುಂಬದವರ ಜೊತೆಗೆ ಕೂತು ನೆಮ್ಮದಿಯಾಗಿ ನಾಲ್ಕು ಮಾತಾಡಿಲ್ಲ. ಅಷ್ಟು ಬೇಗ ದಿವಾಕರ್ ಅವರಿಗೆ ಸ್ಯಾಂಡಲ್ ವುಡ್ ನಿಂದ ಬುಲಾವ್ ಬಂದಿದ್ಯಂತೆ.!

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ.... 106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದ ದಿವಾಕರ್ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರ್ತಿದ್ಯಂತೆ.

ಇದ್ಯಾವುದೋ ಗಾಸಿಪ್ ಬಿಡಿ ಅಂತ ಮೂಗು ಮುರಿಯಬೇಡಿ. ''ಸಿನಿಮಾ ಹಾಗೂ ಸೀರಿಯಲ್ ನಲ್ಲಿ ಅಭಿನಯಿಸುವ ಆಫರ್ ಬಂದಿದೆ'' ಅಂತ ಸ್ವತಃ ದಿವಾಕರ್ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

ಆಫರ್ ಗಳ ಬಗ್ಗೆ ಬಾಯ್ಬಿಟ್ಟ ದಿವಾಕರ್

ಆಫರ್ ಗಳ ಬಗ್ಗೆ ಬಾಯ್ಬಿಟ್ಟ ದಿವಾಕರ್

'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ಸಂದರ್ಶನ ನೀಡುವಲ್ಲಿ ಬಿಜಿಯಾಗಿರುವ ದಿವಾಕರ್, ತಮಗೆ ಸ್ಯಾಂಡಲ್ ವುಡ್ ನಿಂದ ಕರೆ ಬಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಸಿನಿಮಾ ಹಾಗೂ ಸೀರಿಯಲ್ ನಲ್ಲಿ ನಟಿಸುವ ಚಾನ್ಸ್

ಸಿನಿಮಾ ಹಾಗೂ ಸೀರಿಯಲ್ ನಲ್ಲಿ ನಟಿಸುವ ಚಾನ್ಸ್

''ಆಗಲೇ ಸಿನಿಮಾ ಮತ್ತು ಸೀರಿಯಲ್ ಆಫರ್ ಬರುತ್ತಿದೆ. ಇನ್ನೂ ಯೋಚನೆ ಮಾಡಬೇಕು. ಒಂದೊಳ್ಳೆ ನಿರ್ಧಾರ ತೆಗೆದುಕೊಳ್ಳಬೇಕು'' ಎಂದು ಸಂದರ್ಶನವೊಂದರಲ್ಲಿ ದಿವಾಕರ್ ಹೇಳಿದ್ದಾರೆ. ಹೀಗಾಗಿ, ಸದ್ಯದಲ್ಲೇ 'ದಿವಾಕರ್ ಹೀರೋ' ಆಗಿರುವ ಸಿನಿಮಾ ಅನೌನ್ಸ್ ಆದರೆ ಅಚ್ಚರಿ ಪಡಬೇಡಿ

ಸೇಲ್ಸ್ ಕೆಲಸ ಮಾತ್ರ ಬಿಡಲ್ಲ.!

ಸೇಲ್ಸ್ ಕೆಲಸ ಮಾತ್ರ ಬಿಡಲ್ಲ.!

ಸಿನಿಮಾ ಹಾಗೂ ಸೀರಿಯಲ್ ನಲ್ಲಿ ಆಕ್ಟ್ ಮಾಡಿದರೂ, ಸೇಲ್ಸ್ ಬಿಸಿನೆಸ್ ನ ಮಾತ್ರ ದಿವಾಕರ್ ಬಿಡಲ್ವಂತೆ. ''ನನ್ನ ಬ್ಯಾಗ್ ಮಾತ್ರ ಯಾವಾಗಲೂ ನನ್ನ ಜೊತೆ ಇರಬೇಕು'' ಅಂತಾರೆ ದಿವಾಕರ್.

ಕೋಪ ಕಮ್ಮಿ ಆಗಿದ್ಯಂತೆ

ಕೋಪ ಕಮ್ಮಿ ಆಗಿದ್ಯಂತೆ

''ಫೈನಲ್ ವರೆಗೂ ಬರುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಒಂದೆರಡು ವಾರ ಇದ್ದು ಬರಬಹುದು ಅಂತ ಅಂದುಕೊಂಡಿದ್ದೆ'' ಎನ್ನುವ ದಿವಾಕರ್ ಗೆ 'ಬಿಗ್ ಬಾಸ್' ಮನೆಯೊಳಗೆ ಇದ್ದು ಬಂದ್ಮೇಲೆ ಕೋಪ ಕಮ್ಮಿ ಆಗಿದ್ಯಂತೆ.

More from Filmibeat

English summary
Bigg Boss Kannada 5 Runner-up Diwakar is getting offers to act in cinema and serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X