»   » ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!

ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!

Posted By:
Subscribe to Filmibeat Kannada

ಮೂರು ವಾರಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಸೈಲೆಂಟ್ ಆಗಿದ್ದ ಸಮೀರಾಚಾರ್ಯ, ನಾಲ್ಕನೇ ವಾರದ 'ಒಗ್ಗಟ್ಟಿನಲ್ಲಿ ಬಲವಿದೆ' ಟಾಸ್ಕ್ ನಲ್ಲಿ ಸಿಕ್ಕಾಪಟ್ಟೆ ಆಕ್ರಮಣಕಾರಿ ಆದರು.

ತಮ್ಮ ತಂಡಕ್ಕಾಗಿ ಕಬ್ಬನ್ನು ಕದಿಯಲು, ತೆಂಗಿನಕಾಯಿ ಹಿಡಿಯಲು ಮುಂದಾದ ಸಮೀರಾಚಾರ್ಯ ವಾದ-ವಿವಾದಗಳಿಗೂ ಸಾಕ್ಷಿ ಆದರು.

ಏನೇ ಆದರೂ ಟಾಸ್ಕ್ ನಲ್ಲಿ ಗೆಲ್ಲುವ ಛಲ ಬಿಡದ ಸಮೀರಾಚಾರ್ಯ, ಟ್ರೋಲಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಫೋಟೋ ಸ್ಲೈಡ್ ಗಳಲ್ಲಿ ಇರುವಂತಹ ಕೆಲ ಟ್ರೋಲ್ ಗಳು....

ಬಚ್ಚನ್ ಸ್ಟೈಲ್ ನಲ್ಲಿ ಸಮೀರಾಚಾರ್ಯ.!

''ಒಳ್ಳೆತನವನ್ನ ವೀಕ್ ನೆಸ್ ಎಂದುಕೊಳ್ಳೋದು ಮುಟ್ಟಾಳತನ. ಒಳ್ಳೆಯವರಿಗೆ ಕೋಪ ಬರಿಸುವುದು ಅದಕ್ಕಿಂತ ದೊಡ್ಡ ಮುಟ್ಟಾಳತನ'' ಎಂಬ ಡೈಲಾಗ್ ಮೂಲಕ ಸಮೀರಾಚಾರ್ಯ ರವರನ್ನ ಟ್ರೋಲಿಗರು 'ಬಚ್ಚನ್'ಗೆ ಹೋಲಿಸಿದ್ದಾರೆ.
(ಚಿತ್ರಕೃಪೆ: ಟ್ರೋಲ್ ಕನ್ನಡ ಹೈಕ್ಳು)

ಇಬ್ಬರೂ ಹುಲಿಗಳೇ.!

ಟಾಸ್ಕ್ ಅಂತ ಬಂದ್ರೆ, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ... ಇಬ್ಬರೂ ಹುಲಿಗಳಂತೆ.!
(ಚಿತ್ರಕೃಪೆ: ಕಾಗಕ್ಕ ಗೂಬ್ಬಕ್ಕ)

ಅಂದು ಆಚಾರ್ಯ, ಇಂದು 'ಓಂ' ಸತ್ಯ

ಸಮೀರಾಚಾರ್ಯ ರವರನ್ನ 'ಓಂ' ಸಿನಿಮಾದ 'ಸತ್ಯ' ಪಾತ್ರಕ್ಕೆ ಟ್ರೋಲಿಗರು ಹೋಲಿಸಿದ್ದಾರೆ.
(ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್)

ಇವರಿಬ್ಬರೇ ಮಸ್ತ್ ಗುರು.!

'ಬಿಗ್ ಬಾಸ್' ಮನೆಯಲ್ಲಿ ತುಂಬಾ ಚೆನ್ನಾಗಿ ಆಡುತ್ತಿರುವವರು ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ ಅಂತೆ.!

ಜಗನ್ ನ ಎಲಿಮಿನೇಟ್ ಮಾಡಿ

ಜನಸಾಮಾನ್ಯರ ಮೇಲೆ ಉಗ್ರ ಪ್ರತಾಪ ತೋರುವ ಜಗನ್ ರನ್ನ ಎಲಿಮಿನೇಟ್ ಮಾಡಿ ಎಂಬ ಟ್ರೋಲ್ ಗಳೂ ಕೂಡ ಜಾಸ್ತಿ ಆಗಿದೆ.
(ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್)

English summary
Bigg Boss Kannada 5: Week 4: Sameer Acharya gets trolled on Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X