ಬೆಟ್ಟಿಂಗ್ ನಲ್ಲಿ ಗೆದ್ದ ಸಮೀರಾಚಾರ್ಯ: ಜಯರಾಂ ಕಾರ್ತಿಕ್ ಗೆ ಐದು ಲಕ್ಷ ಲಾಸ್.!
ಬೆಟ್ಟಿಂಗ್ ನಲ್ಲಿ ಜಯರಾಂ ಕಾರ್ತಿಕ್ ಸೋತಿದ್ದಾರೆ. ಸಮೀರಾಚಾರ್ಯ ಗೆಲುವಿನ ನಗೆ ಬೀರಿದ್ದಾರೆ.!
ಯಾವುದಪ್ಪಾ ಈ ಬೆಟ್ಟಿಂಗ್ ಅಂತ ಯೋಚನೆ ಮಾಡ್ತಿದ್ರಾ.? ಒಂದು ವಾರದ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ..
ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ನಾಮಿನೇಟ್ ಆಗಿದ್ದರು. ''ವಾರಾಂತ್ಯದಲ್ಲಿ ಬೇರೆ ಯಾರೂ ಔಟ್ ಆಗಲ್ಲ. ನಾನೇ ಔಟ್ ಆಗುವುದು'' ಎಂದು ಜೆಕೆ ವಾದ ಮಾಡಿದರು. ಸಾಲದಕ್ಕೆ ಸಮೀರಾಚಾರ್ಯ ಜೊತೆಗೆ ಬೆಟ್ಟಿಂಗ್ ಕಟ್ಟಿದರು.

''ಈ ವಾರ ನಾನು ಔಟ್ ಆಗುತ್ತೇನೆ'' ಎಂದು ಭವಿಷ್ಯ ನುಡಿದ ಜೆಕೆ, ಸಮೀರಾಚಾರ್ಯ ಜೊತೆಗೆ ಐದು ಲಕ್ಷ ಬೆಟ್ ಕಟ್ಟಿದರು.
ಯಾವುದೇ ಕಾರಣಕ್ಕೂ ಜೆಕೆ ಔಟ್ ಆಗಲ್ಲ ಎಂದು ನಂಬಿದ್ದ ಸಮೀರಾಚಾರ್ಯ ಕೂಡ 'ಐದು ಲಕ್ಷ ರೂಪಾಯಿ' ಬೆಟ್ಟಿಂಗ್ ಗೆ ಜೈ ಎಂದರು.
ಹನ್ನೆರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿಯಿತು. ಕೃಷಿ ತಾಪಂಡ ಔಟ್ ಆದರು. ಜೆಕೆ ಸೋತರು, ಸಮೀರಾಚಾರ್ಯ ಗೆದ್ದರು. ಆಡಿದ ಮಾತಿನಂತೆ ಸಮೀರಾಚಾರ್ಯ ಅವರಿಗೆ ಜೆಕೆ ಐದು ಲಕ್ಷ ರೂಪಾಯಿ ಕೊಡ್ತಾರಾ.? ಕಾದು ನೋಡ್ಬೇಕು.
More from Filmibeat
English summary
Bigg Boss Kannada 5: Week 12: Sameer Acharya wins betting in Bigg Boss House.
bigg boss kannada 5 bigg boss kannada news bigg boss tv colors channel karthik jayaram sameer acharya ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್ ಟಿವಿ ಕಲರ್ಸ್ ವಾಹಿನಿ ಕಾರ್ತಿಕ್ ಜಯರಾಂ ಸಮೀರಾಚಾರ್ಯ


Click it and Unblock the Notifications











