'ಬಿಗ್ ಬಾಸ್' ಕೊಟ್ಟಿರುವ ಸೀಕ್ರೆಟ್ ಟ್ವಿಸ್ಟು ಪಾಪ ಸ್ಪರ್ಧಿಗಳಿಗೆ ಗೊತ್ತೇ ಇಲ್ಲ.!

By Harshitha

'ಬಿಗ್ ಬಾಸ್' ಮನೆಯೊಳಗೆ ನಟಿ ವೈಷ್ಣವಿ 'ವೈಲ್ಡ್ ಕಾರ್ಡ್ ಸ್ಪರ್ಧಿ' ಆಗಿ ಹೋದಾಗ ಅದಾಗಲೇ ಅಲ್ಲಿದ್ದ ಸ್ಪರ್ಧಿಗಳಿಗೆ ಅಷ್ಟೊಂದು ಬಿಸಿ ಮುಟ್ಟಲಿಲ್ಲ. ಯಾವುದಕ್ಕೂ ಕ್ಯಾತೆ ತೆಗೆಯದ ವೈಷ್ಣವಿ ಸೈಲೆಂಟ್ ಆಗಿ ಇದ್ದಿದ್ರಿಂದ ಯಾರಿಗೂ ತಲೆಬಿಸಿ ಆಗಲಿಲ್ಲ.

ಆದ್ರೀಗ, 'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಸ್ಪರ್ಧಿ' ರೂಪದಲ್ಲಿ ಕಾಲಿಟ್ಟಿರುವ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ಹಾಗಿಲ್ಲ. ಆಕೆ ಅಕ್ಷರಶಃ 'ಕಿರಿಕ್' ಮಾಡುತ್ತಿದ್ದಾರೆ.!

'ಬಿಗ್ ಬಾಸ್' ಮನೆಯೊಳಗೆ ಇರುವ ಅಷ್ಟೂ ಸ್ಪರ್ಧಿಗಳಿಗೆ ನೀರಿಳಿಸುತ್ತಿದ್ದಾರೆ ನಟಿ ಸಂಯುಕ್ತ ಹೆಗ್ಡೆ. 'ದೊಡ್ಮನೆ'ಯೊಳಗೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಜಗನ್, ನಿವೇದಿತಾ ಹಾಗೂ ಜಯಶ್ರೀನಿವಾಸನ್ ಮುಖಕ್ಕೆ ಹೊಡೆದಂತೆ ಮಾತನಾಡಿರುವ ಸಂಯುಕ್ತ ಬಗ್ಗೆ ಆಗಲೇ ಕೆಲವರಿಗೆ ಆತಂಕ ಶುರು ಆಗಿದೆ. ಆದ್ರೆ ಪಾಪ.. ಸ್ಪರ್ಧಿಗಳಿಗೆ ಸೀಕ್ರೆಟ್ ಮಾತ್ರ ಗೊತ್ತಾಗಿಲ್ಲ.! ಮುಂದೆ ಓದಿರಿ....

ಸಂಯುಕ್ತ ಸ್ಪರ್ಧಿ ಅಲ್ಲ.!

ಸಂಯುಕ್ತ ಸ್ಪರ್ಧಿ ಅಲ್ಲ.!

'ಬಿಗ್ ಬಾಸ್' ಮನೆಯೊಳಗೆ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಸ್ಪರ್ಧಿ ಆಗಿ ಹೋಗಿಲ್ಲ. ಬದಲಾಗಿ ವಿಶೇಷ ಅತಿಥಿಯಾಗಿ ಕಾಲಿಟ್ಟಿದ್ದಾರೆ.

'ಬಿಗ್' ಮನೆಯೊಳಗೆ ಹೋಗುವ ಮುನ್ನ ಸಂಯುಕ್ತ ಹೇಳಿದ್ದೇನು.?

'ಬಿಗ್' ಮನೆಯೊಳಗೆ ಹೋಗುವ ಮುನ್ನ ಸಂಯುಕ್ತ ಹೇಳಿದ್ದೇನು.?

''ಬಿಗ್ ಬಾಸ್' ಮನೆಯೊಳಗೆ ಹೋಗ್ತಾಯಿದ್ದೀನಿ. ಆದ್ರೆ, ಒಂದು ಸೀಕ್ರೆಟ್ ಇದೆ. ನಾನು ಸ್ಪರ್ಧಿ ಆಗಿ ಹೋಗುತ್ತಿಲ್ಲ. ನಾನು ಸೆಲೆಬ್ರಿಟಿ ಆಗೇ ಹೋಗುತ್ತಿದ್ದೇನೆ. ಬರೀ ಸ್ವಲ್ಪ ದಿನಕ್ಕೆ ಮಾತ್ರ ಹೋಗುತ್ತಿದ್ದೇನೆ. ಮನೆಯೊಳಗೆ ಇರೋರಿಗೆ ನಾನು ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ಹೋಗುತ್ತಿದ್ದೇನೆ'' ಎಂದು ನಟಿ ಸಂಯುಕ್ತ ಹೆಗ್ಡೆ ಹೇಳಿದ್ದಾರೆ.

ಟ್ವಿಸ್ಟ್ ಇರೋದೇ ಇಲ್ಲಿ.!

ಟ್ವಿಸ್ಟ್ ಇರೋದೇ ಇಲ್ಲಿ.!

'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರೂ ಸಂಯುಕ್ತ ರನ್ನ ಸ್ಪರ್ಧಿಯಾಗೇ ನೋಡಿದ್ದಾರೆ. ಯಾರಿಗೂ ಆಕೆ ವಿಶೇಷ ಅತಿಥಿ ಎಂಬ ಸತ್ಯ ಗೊತ್ತಾಗಿಲ್ಲ.

ಲಾಸ್ಯ ಮಾತ್ರ ಸ್ಪರ್ಧಿ

ಲಾಸ್ಯ ಮಾತ್ರ ಸ್ಪರ್ಧಿ

ನಟಿ ಸಂಯುಕ್ತ ಹೆಗ್ಡೆ ಜೊತೆ ಬಂದಿರುವ ನಟಿ ಲಾಸ್ಯ ಮಾತ್ರ ವೈಲ್ಡ್ ಕಾರ್ಡ್ ಸ್ಪರ್ಧಿ.

ಎಲ್ಲರಿಗೂ ಶುರು ಆಗಿದೆ ಆತಂಕ

ಎಲ್ಲರಿಗೂ ಶುರು ಆಗಿದೆ ಆತಂಕ

ಅದಾಗಲೇ ನೇರ ಬಾಣ ಬಿಡಲು ಶುರು ಮಾಡಿರುವ ಸಂಯುಕ್ತ ಹೆಗ್ಡೆ ಕಂಡ್ರೆ ಮಿಕ್ಕ ಸ್ಪರ್ಧಿಗಳಿಗೆ ಆತಂಕ ಶುರು ಆಗಿದೆ. ಸಂಯುಕ್ತ ವಿಶೇಷ ಅತಿಥಿ ಎಂಬ ಗುಟ್ಟು ರಟ್ಟಾದರೆ, ಎಲ್ಲರಿಗೂ 'ಬಿಗ್' ರಿಲೀಫ್ ಆದಂತೆ ಲೆಕ್ಕ.

More from Filmibeat

English summary
Bigg Boss Kannada 5: Week 9: Samyuktha Hegde enters as special guest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X