'ಬಿಗ್ ಬಾಸ್' ಮುಂದೆ ತಲೆ ತಗ್ಗಿಸಿದ ಸಿಹಿಕಹಿ ಚಂದ್ರು.! ಇದು ಅವಮಾನದ ವಿಚಾರ.!
ಅಪ್ಪಿ-ತಪ್ಪಿ ಗ್ಯಾಸ್ ಲೀಕ್ ಆದರೆ... ಅದರಿಂದ ಸಂಭವಿಸುವ ಅನಾಹುತಗಳ ಗಂಭೀರತೆ ಎಂಬ ಅರಿವು ಇದ್ದರೂ, 'ಬಿಗ್ ಬಾಸ್' ಮನೆಯಲ್ಲಿರುವವರು ಎಚ್ಚರ ವಹಿಸುತ್ತಿಲ್ಲ.
ಮಾಡಬೇಕಿದ್ದ ಅಡುಗೆಯನ್ನ ಮಾಡಿಕೊಂಡ ನಂತರ ಗ್ಯಾಸ್ ಆಫ್ ಮಾಡದೆ 'ಬಿಗ್ ಬಾಸ್' ಮನೆಯ ಸದಸ್ಯರು ಎಚ್ಚರ ತಪ್ಪುತ್ತಿದ್ದಾರೆ. ಒಮ್ಮೆ ಈ ತಪ್ಪು ಆದರೆ ಪರ್ವಾಗಿಲ್ಲ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇದೇ ತಪ್ಪು ಪದೇ ಪದೇ ಪುನರಾವರ್ತಿತವಾಗುತ್ತಿದೆ.
ಜಯಶ್ರೀನಿವಾಸನ್, ಸಿಹಿ ಕಹಿ ಚಂದ್ರು, ಸಮೀರಾಚಾರ್ಯ... ಹೀಗೆ, ಒಂದೊಂದು ಬಾರಿ ಒಬ್ಬೊಬ್ಬರು ಗ್ಯಾಸ್ ಆಫ್ ಮಾಡದೆ ಅಜಾಗರೂಕತೆ ಪ್ರದರ್ಶಿಸಿದ್ದಾರೆ. ಮುಂದೆ ಓದಿರಿ...

ಸ್ಪರ್ಧಿಗಳಿಗೆ ಬುದ್ಧಿ ಬಂದಿಲ್ಲ
ಗ್ಯಾಸ್ ಆಫ್ ಮಾಡದೆ ಹಾಗೇ ಬಿಟ್ಟು ಹೋದಾಗ, ಎಲ್ಲ ಸ್ಪರ್ಧಿಗಳಿಗೆ ಸರಿಯಾದ ಪಾಠ ಕಲಿಸಲು 'ಬಿಗ್ ಬಾಸ್' ಅಡುಗೆ ಅನಿಲ ಪೂರೈಕೆ ನಿಲ್ಲಿಸಿದ್ದರು. ಮೂರು ಬಾರಿ ಹೀಗೆ ಗ್ಯಾಸ್ ನಿಲ್ಲಿಸಿದ್ದರೂ, ಸ್ಪರ್ಧಿಗಳಿಗೆ ಬುದ್ಧಿ ಬಂದಿಲ್ಲ.

ಮತ್ತೆ ಮತ್ತೆ ಅದೇ ತಪ್ಪು
''ಇನ್ಮುಂದೆ ಹೀಗೆ ಆಗಲ್ಲ. ಗ್ಯಾಸ್ ಬಗ್ಗೆ ನಾನು ಎಚ್ಚರ ವಹಿಸುತ್ತೇನೆ. ದಯವಿಟ್ಟು ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳಿಸಬೇಡಿ'' ಎಂದು ಸಿಹಿ ಕಹಿ ಚಂದ್ರು ಕೂಡ 'ಬಿಗ್ ಬಾಸ್' ಬಳಿ ಬೇಡಿಕೊಂಡಿದ್ದರು. ಅದಾದ ಬಳಿಕ ಅಡುಗೆ ಅನಿಲ ಪೂರೈಕೆ ಮಾಡಲಾಗಿತ್ತು. ಈಗ ಮತ್ತೆ ಸಮೀರಾಚಾರ್ಯ ಗ್ಯಾಸ್ ಆಫ್ ಮಾಡದ ಕಾರಣ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಸಿಹಿ ಕಹಿ ಚಂದ್ರು ಬೇಸರಗೊಂಡಿದ್ದಾರೆ.

ಅವಮಾನದ ವಿಚಾರ
''ಅಚಾತುರ್ಯ ನಡೆದು ಹೋಗಿದೆ. ತಲೆ ತಗ್ಗಿಸುವ ವಿಚಾರ. ಅವಮಾನದ ವಿಚಾರ ಇದು. ನಾನು ಅಲ್ಲಿ ಇದ್ದವನು ಹೊರಗಡೆ ಹೋಗಿದ್ದು ತಪ್ಪಾಯ್ತು'' ಎಂದು ಬೇಸರದಿಂದ ಕ್ಯಾಮರಾ ಮುಂದೆ ಹೇಳಿದ್ದಾರೆ ಸಿಹಿ ಕಹಿ ಚಂದ್ರು.

ಅಡುಗೆ ಮನೆ ಸಾಕು...
''ಅಡುಗೆ ಮಾಡುವುದು ಯಾಕೋ ಸ್ವಲ್ಪ ಬಿಟ್ಟುಬಿಡುವುದು ಒಳ್ಳೆಯದ್ದು ಎನಿಸುತ್ತದೆ. ಬೇರೆ ಯಾರಾದರೂ ಈ ಜವಾಬ್ದಾರಿ ವಹಿಸಿಕೊಳ್ಳಬೇಕು'' ಎಂದಿದ್ದಾರೆ ಸಿಹಿ ಕಹಿ ಚಂದ್ರು.

ತಲೆ ತಗ್ಗಿಸಿದ ಸಿಹಿ ಕಹಿ ಚಂದ್ರು
''ಕ್ಷಮಿಸಿ ಅಂತ ಕೇಳೋಕೆ ಮುಖ ಇಲ್ಲ. ಗ್ಯಾಸ್ ಕೊಡದೆ ಹೋದರೆ ವಿಧಿ ಇಲ್ಲ. ಅವಮಾನ ಆಗುತ್ತಿದೆ ನನಗೆ. ತಲೆ ತಗ್ಗಿಸುತ್ತೇನೆ ಅಷ್ಟೇ. ಬೇರೇನೂ ಹೇಳಲ್ಲ'' ಎಂದು ತಲೆ ತಗ್ಗಿಸಿ ನುಡಿದರು ಸಿಹಿ ಕಹಿ ಚಂದ್ರು.


Click it and Unblock the Notifications











